ವೊಡಾಫೋನ್ ನಿಂದ ಪ್ರತಿದಿನ 2 ಜಿಬಿ ಡೇಟಾ ನೀಡುವ ಹೊಸ ಕೊಡುಗೆ!

ಬೆಂಗಳೂರು, ಡಿಸೆಂಬರ್ 17: ಜಿಯೋ, ಏರ್ ಟೆಲ್ ಪ್ರೀಪೇಯ್ಡ್ ಯೋಜನೆಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ವೊಡಾಫೋನ್ ಕಂಪನಿ ತನ್ನ ಜನಪ್ರಿಯ ಯೋಜನೆಗಳನ್ನು ವಾರಕ್ಕೆರಡು ಬಾರಿ ಬದಲಾಯಿಸುತ್ತಿದೆ. 348 ರೂಪಾಯಿಯ ಪ್ರಿಪೇಯ್ಡ್ ಆಫರ್ ನಂತರ 349 ರುಗಳ ಹೊಸ ಯೋಜನೆ ಪರಿಚಯಿಸುತ್ತಿದೆ.

348 ರುಪಾಯಿಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳು ಭಾರತೀಯ ದೂರಸಂಪರ್ಕ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ನೀಡುತ್ತಿದೆ. ಅದರೆ, ಇದು ಕೆಲ ಟೆಲಿಕಾಂ ಸರ್ಕಲ್ ಗಳಿಗೆ ಮಾತ್ರ ಸೀಮಿತವಾಗಿತ್ತು.

ಆದರೆ, ಈಗ 349 ರುಪಾಯಿಗಳ ಹೊಸ ಪ್ರೀಪೇಯ್ಡ್ ಯೋಜನೆ ನೀಡುತ್ತಿದ್ದು, ಪ್ರತಿದಿನ 2 ಜಿ.ಬಿ. ಡೇಟಾ ಸಿಗಲಿದೆ. ಇದಲ್ಲದೆ, 458 ರೂ., 509 ರೂ. ರೀಚಾರ್ಜ್ ಪ್ಯಾಕ್ ಗಳನ್ನು ಪರಿಚಯಿಸಲಾಗಿದೆ.

ಭಾರ್ತಿ ಏರ್ ಟೆಲ್ ನ ಜನಪ್ರಿಯ 349 ರೂಪಾಯಿ ರೀಚಾರ್ಜ್ ಪ್ರೀಪೇಯ್ಡ್ ಯೋಜನೆಗೆ ಪೈಪೋಟಿ ನೀಡಲು ಬಂದ 348ರುಪಾಯಿ ರೀಚಾರ್ಜ್ ಯೋಜನೆಯಲ್ಲಿ ಉಚಿತ ಕರೆಗಳನ್ನು 250 ನಿಮಿಷಗಳಿಗೆ ಮಿತಿ ಮಾಡಲಾಗಿತ್ತು.

348 ರೂಪಾಯಿ ರೀಚಾರ್ಜ್

348 ರೂಪಾಯಿ ರೀಚಾರ್ಜ್

348 ರೂಪಾಯಿ ರೀಚಾರ್ಜ್ ಯೋಜನೆಯಲ್ಲಿ ಪ್ರತಿ ದಿನ 1 ಜಿಬಿ ಡೇಟಾಕ್ಕೆ ಬದಲಿಗೆ 2 ಜಿಬಿ ಡೇಟಾ ಸಿಗಲಿದೆ. ಹಾಗೂ ಅನಿಯಮಿತ ಕರೆ ಸೌಲಭ್ಯ, ಎಸ್ಎಂಎಸ್ ಕೂಡಾ ಲಭ್ಯ. ಆದರೆ, ಈ ಕೊಡುಗೆ ದೆಹಲಿ ಹಾಗೂ ಎನ್ ಸಿ ಆರ್ ವ್ಯಾಪ್ತಿಯ ಗ್ರಾಹಕರಿಗೆ ಮಾತ್ರ ಲಭ್ಯವಿದೆ.ಈ ಆಫರ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

349 ರುಪಾಯಿ ಬೋನಸ್ ಕಾರ್ಡ್ ಯೋಜನೆ

349 ರುಪಾಯಿ ಬೋನಸ್ ಕಾರ್ಡ್ ಯೋಜನೆ

349 ರುಪಾಯಿ ಬೋನಸ್ ಕಾರ್ಡ್ ಯೋಜನೆ: ಈ ಪ್ಲಾನ್ ನಡಿ ಪ್ರತಿದಿನ 2 ಜಿಬ್ ಡೇಟಾ ಜೊತೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ ಸೌಲಭ್ಯವಿದೆ. ಭಾರತದೊಳಗೆ ರೊಮಿಂಗ್ ಕೂಡಾ ಉಚಿತವಾಗಿದೆ. 28 ದಿನಗಳ ವ್ಯಾಲಿಟಿಡಿ ಹೊಂದಿದೆ.

458 ರುಪಾಯಿ ಯೋಜನೆ

458 ರುಪಾಯಿ ಯೋಜನೆ

458 ರುಪಾಯಿ ಯೋಜನೆ: ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ, ರೋಮಿಂಗ್ ಹೊರ ಹೋಗುವ ಕರೆಗಳು(ಮೊಬೈಲ್ ಹಾಗೂ ಲ್ಯಾಂಡ್ ಲೈನ್), 100 ಎಸ್ಎಂಎಸ್ ಪ್ರತಿದಿನ ಉಚಿತ, 1 ಜಿಬಿ ಡೇಟಾ ಉಚಿತ. ವ್ಯಾಲಿಟಿಡಿ 70 ದಿನಗಳಾಗಿದೆ.

509 ರುಪಾಯಿ ಯೋಜನೆ

509 ರುಪಾಯಿ ಯೋಜನೆ

509 ರುಪಾಯಿ ಯೋಜನೆ: ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆ, ರೋಮಿಂಗ್ ಹೊರ ಹೋಗುವ ಕರೆಗಳು(ಮೊಬೈಲ್ ಹಾಗೂ ಲ್ಯಾಂಡ್ ಲೈನ್), 100 ಎಸ್ಎಂಎಸ್ ಪ್ರತಿದಿನ ಉಚಿತಹ(ರೋಮಿಂಗ್ ಸೇರಿ), 1 ಜಿಬಿ ಡೇಟಾ ಉಚಿತ. ವ್ಯಾಲಿಟಿಡಿ 84 ದಿನಗಳಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+