ಸಂದರ್ಶನ ಎಲ್ಲಾ ಫೇಕ್, ಆಘಾತಗೊಂಡ ಮಲ್ಯರಿಂದ ಟ್ವೀಟ್

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 15: 'ಉದ್ಯಮಿ ವಿಜಯ್ ಮಲ್ಯ ಅವರ ಸಂದರ್ಶನ ನಮ್ಮಲ್ಲಿ ಮಾತ್ರ ಬಂದಿದೆ' ಎಂದು ಸಂಡೇ ಗಾರ್ಡಿಯನ್ ಪ್ರಸಾರ ಮಾಡಿದ್ದೆಲ್ಲವೂ ಸುಳ್ಳು ಎಂದು ಸ್ವತಃ ವಿಜಯ್ ಮಲ್ಯ ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮಾಧ್ಯಮಗಳಿಂದ ದೂರ ಉಳಿಯುತ್ತೇನೆ ಎಂಬ ಮಾತಿಗೆ ಬದ್ಧರಾಗಿದ್ದಾರೆ.

ಮಲ್ಯ ಅವರು ಕಳೆದ ರಾತ್ರಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿ, ಮಾಧ್ಯಮಗಳಲ್ಲಿ ಬಂದಿರುವ ವರದಿಗಳೆಲ್ಲ ಸುಳ್ಳು, ನಾನು ಯಾರಿಗೂ ಸಂದರ್ಶನ ನೀಡಿಲ್ಲ. ಸತ್ಯಾಸತ್ಯತೆ ತಿಳಿಯದೆ ನನ್ನ ಹೆಸರು ಬಳಸಿ ವರದಿ ಪ್ರಸಾರ ಮಾಡಲಾಗಿದೆ ಎಂದಿದ್ದಾರೆ.[ಸಾಲದಿಂದ ಮುಕ್ತರಾಗಿ ಮಲ್ಯಗೆ ವರ್ಮಾ ಸಲಹೆ]

ಇಮೇಲ್ ಮೂಲಕ ಪ್ರಶ್ನೋತ್ತರ ನಡೆಸಲಾಗಿದೆ ಎಂಬ ಮಾಹಿತಿಯೇ ಸುಳ್ಳು. ಪ್ರೋಟಾನ್ ಮೇಲ್ ಇಮೇಲ್ ಅಕೌಂಟ್ ಎಂದರೆ ಏನು ಎಂಬುದೇ ನನಗೆ ತಿಳಿದಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸಂಡೇ ಗಾರ್ಡಿಯನ್ ಮಾರ್ಚ್ 13ರಂದು ಮಲ್ಯ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿತ್ತು. 'ನಾನು ನನ್ನ ವಾದವನ್ನು ಮಂಡಿಸಲು ಸರಿಯಾದ ವೇದಿಕೆ ಸಿಗುತ್ತದೆ ಎಂಬ ನಂಬಿಕೆ ಇಲ್ಲ, ನನ್ನನ್ನು ಈಗಾಗಲೇ ಕ್ರಿಮಿನಲ್ ಎಂದು ಪರಿಗಣಿಸಲಾಗಿದೆ. ಹೀಗಾಗಿ ನಾನು ಭಾರತಕ್ಕೆ ಮರಳಲು ಇದು ಸೂಕ್ತ ಕಾಲವಲ್ಲ' ಎಂದು ಬರೆಯಲಾಗಿತ್ತು.[ಮಲ್ಯ ಪಲಾಯನ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ 'ಪಂಚ್' ಪ್ರಶ್ನೆ]

ಸಾಲದ ವ್ಯವಸ್ಥೆ ಬಗ್ಗೆ ಅರಿವಿರಬೇಕು : ಮಲ್ಯ

ಸಾಲದ ವ್ಯವಸ್ಥೆ ಬಗ್ಗೆ ಅರಿವಿರಬೇಕು : ಮಲ್ಯ

'ಉದ್ಯಮ ಸಣ್ಣದಿರಲಿ, ದೊಡ್ಡದಿರಲಿ ತರ್ಕಬದ್ಧವಾಗಿ ಆಲೋಚಿಸುವುದನ್ನು ಕಲಿಯಬೇಕು. ಉದ್ಯಮದಲ್ಲಿರುವ ತೊಂದರೆ, ಸಾಲದ ವ್ಯವಸ್ಥೆ ಬಗ್ಗೆ ಅರಿವಿರಬೇಕು ಆಗ ನನ್ನ ಪರಿಸ್ಥಿತಿ ತಿಳಿಯುತ್ತದೆ' ಎಂದು ಮಲ್ಯ ಅವರ ಹೆಸರು ಉಲ್ಲೇಖಿಸಿ ಹೇಳಿಕೆ ಪ್ರಕಟಿಸಲಾಗಿತ್ತು.

ಐದು ಹೊಸ ಜಾಮೀನು ರಹಿತ ವಾರೆಂಟ್

ಐದು ಹೊಸ ಜಾಮೀನು ರಹಿತ ವಾರೆಂಟ್

ಈ ನಡುವೆ ಐದು ಹೊಸ ಜಾಮೀನು ರಹಿತ ವಾರೆಂಟ್ ಗಳು ಮಲ್ಯ ವಿರುದ್ಧ ಜಾರಿಯಾಗಿದೆ.

ಪ್ರೋಟೊನ್ ಇಮೇಲ್ ಐಡಿ ಎಂದರೇನು: ಮಲ್ಯ

ಪ್ರೋಟೊನ್ ಇಮೇಲ್ ಐಡಿ ಎಂದರೇನು? ಇದನ್ನು ಬಳಸುವುದು ಹೇಗೆ ನನಗಂತೂ ತಿಳಿದಿಲ್ಲ: ಮಲ್ಯ.

ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು

ಮಾಧ್ಯಮಗಳಲ್ಲಿ ಬಂದಿರುವ ವರದಿ ನೋಡಿ ಆಘಾತವಾಗಿದೆ. ಅದೆಲ್ಲವೂ ಸುಳ್ಳು, ಸಂಡೇ ಗಾರ್ಡಿಯನ್ ಗೆ ಯಾವುದೇ ಸಂದರ್ಶನ ನೀಡಿಲ್ಲ ಎಂದಿರುವ ಮಲ್ಯ.

ನಾನು ಸಂಡೇ ಗಾರ್ಡಿಯನ್ ಸಂಪರ್ಕಿಸಿಲ್ಲ

ನಾನು ಪ್ರೋಟೊನ್ ಮೇಲ್ ಮೂಲಕ ಸಂಡೇ ಗಾರ್ಡಿಯನ್ ಸಂಪರ್ಕಿಸಿದ್ದೇನೆ ಎಂಬ ಮಾಹಿತಿಯೇ ಸತ್ಯಕ್ಕೆ ದೂರವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former liquor baron Vijay Mallya has distanced himself from an interview that quoted him saying that the time was not right for him to return to India.
Please Wait while comments are loading...