ಊರ್ಜಿತ್ ನಿರ್ಗಮನ ಪರಿಣಾಮ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಕುಸಿತ

ಮುಂಬೈ, ಡಿಸೆಂಬರ್ 11: ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನಿರ್ಗಮನ ಷೇರು ಮಾರುಕಟ್ಟೆ ಮತ್ತು ರೂಪಾಯಿ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ.

ಐದು ರಾಜ್ಯಗಳ ಚುನಾವಣಾ ಸಮೀಕ್ಷೆಗಳು ಪ್ರಕಟವಾದ ಪರಿಣಾಮ ಸೋಮವಾರ ಮಾರುಕಟ್ಟೆ ಆರಂಭದಲ್ಲಿಯೇ ಕುಸಿತ ಕಂಡಿತ್ತು. ಬಳಿಕ ಸಂಜೆ ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ಷೇರು ಪೇಟೆಯನ್ನು ಕಂಗಾಲಾಗಿಸಿದೆ. ರಾಜೀನಾಮೆ ಹೊಡೆತಕ್ಕೆ ರೂಪಾಯಿ ಮೌಲ್ಯ ಕೂಡ ತತ್ತರಿಸಿದ್ದು, ಏಕಾಏಕಿ 92 ಪೈಸೆ ಕುಸಿತ ಕಂಡಿದೆ.

ಸೋಮವಾರ ಮಾರುಕಟ್ಟೆ ಅಂತ್ಯದ ವೇಳೆಗೆ ಡಾಲರ್ ಎದುರು 71.32 ಇದ್ದ ರೂಪಾಯಿ ಮೌಲ್ಯ, ಮಂಗಳವಾರ ಬೆಳಿಗ್ಗೆಯೇ 1.5%ರಷ್ಟು ಕುಸಿತ ಕಂಡು 72.46 ರೂ.ಗೆ ತಲುಪಿದೆ.

Urjit Patel resignation rupee falls 92 paise against US dollar

ಸರ್ಕಾರ ಮತ್ತು ಆರ್ ಬಿಐ ತಿಕ್ಕಾಟದ ಬಳಿಕ ಊರ್ಜಿತ್ ಪಟೇಲ್ ರಾಜೀನಾಮೆ ಸಲ್ಲಿಸಿರುವುದು ವಿದೇಶಿ ಹೂಡಿಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಐಎಫ್‌ಎ ಗ್ಲೋಬಲ್ ಫಾರೆಕ್ಸ್ ಸಲಹಾ ಸಂಸ್ಥೆ ತಿಳಿಸಿದೆ.

ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ರೂಪಾಯಿ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಂಡಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿರುವುದು ರೂಪಾಯಿಗೆ ತುಸು ನಿರಾಳ ತಂದುಕೊಟ್ಟಿತ್ತು. ಆರಂಭದ 9 ತಿಂಗಳಲ್ಲಿ ರೂಪಾಯಿ ಶೇ 14ರಷ್ಟು ಕುಸಿದಿತ್ತು. ಈ ಮೂಲಕ ಡಾಲರ್ ಎದುರು 74.48ಕ್ಕೆ ತಲುಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+