ಯುನೈಟೆಡ್ ಸ್ಪಿರಿಟ್ಸ್‌ಗೆ ಹಿನಾ ನಾಗರಾಜನ್ ಎಂಡಿ, ಸಿಇಒ ಆಗಿ ಆಯ್ಕೆ

ನವದೆಹಲಿ, ಡಿಸೆಂಬರ್ 11: ದೇಶದ ಬಹುದೊಡ್ಡ ಲಿಕ್ಕರ್ ತಯಾರಕ ಕಂಪನಿ ಯುನೈಟೆಡ್ ಸ್ಪಿರಿಟ್ಸ್‌ಗೆ ಹಿನಾ ನಾಗರಾಜನ್ ವ್ಯವಸ್ಥಾಪಕ ನಿದೇರ್ಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಆಯ್ಕೆಯಾಗಿದ್ದಾರೆ.

ವಿಶ್ವದ ಅತಿದೊಡ್ಡ ಲಿಕ್ಕರ್ ತಯಾರಕರಲ್ಲಿ ಒಂದಾದ ಯುನೈಟೆಡ್‌ ಸ್ಪಿರಿಟ್ಸ್‌ಗೆ ಮಹಿಳೆಯೊಬ್ಬರು ಎಂಡಿ ಮತ್ತು ಸಿಇಒ ಆಗಿ ಆಯ್ಕೆಯಾಗಿರುವುದು ವಿಶೇಷವಾಗಿದ್ದು, ಜುಲೈ 1, 2021ರಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಐಐಎಂ ಅಹಮದಾಬಾದ್‌ನಲ್ಲಿ ಎಂಬಿಎ ಪದವಿ ಪಡೆದಿರುವ ನಾಗರಾಜನ್ ಅವರು, 2014ರ ಮೇ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದ ಆನಂದ್ ಕೃಪಾಲು ಅವರ ಸ್ಥಾನ ತುಂಬಲಿದ್ದಾರೆ.

United Spirits names Hina Nagarajan as MD and CEO

ಸ್ಟಾಕ್‌ ಎಕ್ಸೇಂಜ್‌ಗೆ ಕಂಪನಿ ತಿಳಿಸಿರುವ ಮಾಹಿತಿ ಪ್ರಕಾರ ಕೃಪಾಲು ಎಂಡಿ ಮತ್ತು ಸಿಇಒ ಹುದ್ದೆಗಿಂದ ಕೆಳಗಿಳಿಯಲಿದ್ದು, ಜೂನ್ 30, 2021ರಂದು ಆಡಳಿತ ಮಂಡಳಿಯ ಜವಾಬ್ದಾರಿಯನ್ನು ಬಿಟ್ಟುಕೊಡಲಿದ್ದಾರೆ ಎಂದು ಹೇಳಿದೆ.

ಯುನೈಟೆಡ್‌ ಸ್ಪಿರಿಟ್ಸ್‌ನ ಹೊಸ ಎಂಡಿ ಮತ್ತು ಸಿಇಒ ಆಗಿ ಆಯ್ಕೆಯಾಗಿರುವ ಹಿನಾ ನಾಗರಾಜನ್ ಪ್ರಸ್ತುತ ಯುನೈಟೆಡ್ ಸ್ಪಿರಿಟ್ಸ್‌(ಯುಎಸ್‌ಎಲ್)ನ ಮೂಲ ಕಂಪನಿಯಾದ ಡಿಯಾಗೋದಲ್ಲಿ ಆಫ್ರಿಕಾ ಪ್ರಾದೇಶಿಕ ಮಾರುಕಟ್ಟೆಗಳ(ARM) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2019 ರ ದ್ವಿತೀಯ ತ್ರೈಮಾಸಿಕಕ್ಕೆ ಹೋಲಿಸಿದರೆ, 2020ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್‌ ಸ್ಪಿರಿಟ್ಸ್‌ ಏಕೀಕೃತ ನಿವ್ವಳ ಲಾಭವು ಶೇಕಡಾ 20.6ರಷ್ಟು ಇಳಿದು, 125.10 ಕೋಟಿ ರೂ.ಗೆ ತಲುಪಿದ್ದು, ನಿವ್ವಳ ಮಾರಾಟದಲ್ಲಿ ಶೇಕಡಾ 5.1ರಷ್ಟು ಇಳಿಕೆಯಾಗಿ 2,196 ಕೋಟಿ ರೂ.ಗೆ ತಲುಪಿದೆ.

ಈ ಕಂಪನಿಯು ವಿಸ್ಕಿ, ಬ್ರಾಂಡಿ ಮತ್ತು ರಮ್ ಸೇರಿದಂತೆ ವಿವಿಧ ಆಲ್ಕೋಹಾಲ್ ಮತ್ತು ಸ್ಪಿರಿಟ್‌ಗಳನ್ನು ತಯಾರಿಸುತ್ತದೆ ಮತ್ತು ವಿತರಿಸುತ್ತದೆ. ಕಂಪನಿಯು ಭಾರತೀಯ ನಿರ್ಮಿತ ವಿದೇಶಿ ಮದ್ಯದ ಬ್ರಾಂಡ್‌ಗಳನ್ನು ಸಹ ತಯಾರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+