ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್

ನವದೆಹಲಿ, ಸೆಪ್ಟೆಂಬರ್ 28: ಬಹುಕೊಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಮೋದಿ ಅವರಿಗೆ ಸೇರಿರುವ ಎರಡು ಕಂಪೆನಿಗಳು ಬ್ಯಾಂಕಿಗೆ ಸುಮಾರು 5.49 ಮಿಲಿಯನ್ ಡಾಲರ್(ಸುಮಾರು 40 ಕೋಟಿ.ರೂ.)ಸಾಲವನ್ನು ಮರು ಪಾವತಿಸಿಲ್ಲ ಎಂದು ಆರೋಪಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಹಾಂಕಾಂಗ್ ನಲ್ಲಿ ದಾವೆ ಹೂಡಿದೆ.

ಮುಂಬೈ ಮೂಲದ ಉದ್ಯಮಿ ನೀರವ್ ಮೋದಿ ಅವರು ಭಾರತದ ಅತಿದೊಡ್ಡ ಹಣಕಾಸು ಅವ್ಯವಹಾರದ ಪ್ರಮುಖ ಆರೋಪಿಯಾಗಿದ್ದಾರೆ. 2011ರ ಅಕ್ಟೋಬರ್‌ 21ರಂದು ಫೈರ್‌ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ 2011ರ ನವೆಂಬರ್‌ನಲ್ಲಿ ಫೈರ್‌ಸ್ಟಾರ್ ಡೈಮಂಡ್ ಕಂಪೆನಿಗಳು ಪಡೆದಿರುವ ಸಾಲಗಳಿಗೆ ಗ್ಯಾರಂಟಿ ನೀಡಿದ್ದರು ಎಂದು ಬುಧವಾರದಂದು ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬ್ಯಾಂಕ್ ತಿಳಿಸಿದೆ. ಈ ಬಗ್ಗೆ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್'ವರದಿ ಮಾಡಿದೆ

Union Bank sues Nirav Modi in Hong Kong court over fraud: Report

ಹಾಂಕಾಂಗ್‌ನಿಂದ ನ್ಯೂಯಾರ್ಕ್ ತನಕ ಹಲವು ಆಭರಣದ ಮಳಿಗೆ ಜಾಲವನ್ನು ಹೊಂದಿರುವ ನೀರವ್ ಅವರು, ಯೂನಿಯನ್ ಬ್ಯಾಂಕಿಗೆ ಬಡ್ಡಿ ಸಹಿತ 5.49 ಮಿಲಿಯನ್ ಡಾಲರ್‌ಗೂ ಅಧಿಕ ಬಾಕಿ ಮೊತ್ತ ಪಾವತಿಸಬೇಕಿದೆ.

ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 13,400 ಕೋಟಿ ರೂಪಾಯಿ. ಸಾಲ ಬಾಕಿ ಹೊತ್ತುಕೊಕಂಡು ವಿದೇಶಕ್ಕೆ ಪರಾರಿಯಾಗಿರುವ ಮೋದಿ ವಿರುದ್ಧ ಭಾರತದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+