ಜಿಎಸ್ ಟಿಯಿಂದ ಕ್ಯಾನ್ಸರ್, ಎಚ್ಐವಿ ಸೋಂಕು ಔಷಧಿಗಳ ಬೆಲೆ ಇಳಿಕೆ
ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಕ್ಯಾನ್ಸರ್, ಎಚ್ ಐವಿ ಸೋಂಕಿತರಿಗೆ ಉಪಯೋಗಿಸಲ್ಪಡುವ ಔಷಧಿಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಾಣಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದು ಕೋಟ್ಯಾನುಕೋಟಿ ಜನರಿಗೆ ಉಪಯುಕ್ತವಾಗಲಿದೆ.
ನವದೆಹಲಿ, ಜೂನ್ 30: ಮುಂದಿನ ತಿಂಗಳ 1ನೇ ತಾರೀಖಿನಿಂದ ಜಾರಿಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ ಟಿ) ಪರಿಣಾಮವಾಗಿ, ಕ್ಯಾನ್ಸರ್, ಏಯ್ಡ್ಸ್ ಹಾಗೂ ಇನ್ನಿತರ ಮಾರಣಾಂತಿಕ ರೋಗಗಳ ಔಷಧಿಗಳ ಬೆಲೆಯು ಕೊಂಚ ಇಳಿಕೆಯಾಗಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಟ್ವಿಟರ್ ನಲ್ಲಿ ಜಿಎಸ್ ಟಿಗೆಂದೇ ಪ್ರತ್ಯೇಕ ಖಾತೆ ತೆರೆದಿರುವ ಕೇಂದ್ರ ಸರ್ಕಾರವು, ಅಲ್ಲಿ ಈ ವಿಚಾರವನ್ನು ಹೇಳಿದೆ.
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಎಐವಿ, ಕ್ರಾಹ್ನಸ್ ಡಿಸೀಸ್, ನಿಮೋನಿಯಾ ಹಾಗೂ ಚರ್ಮ ಸಂಬಂಧಿ ರೋಗಗಳಿಗೆ ಬೇಕಾದ ಕೆಲವು ಔಷಧಿಗಳ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಹೇಳಿದೆ.

ಒಂದೊಂದು ಔಷಧಿಯ ಮೇಲೂ ನೂರಾರು ರು.ಗಳ ಲೆಕ್ಕದಲ್ಲಿ ಇಳಿಕೆಯಾಗಲಿರುವುದರಿಂದ ಈ ಔಷಧಿಗಳನ್ನು ಹೆಚ್ಚೆಚ್ಚು ಉಪಯೋಗಿಸುವವರಿಗೆ ಜೇಬಿನ ಮೇಲಾಗುವ ಹೊರೆಯನ್ನು ಕೊಂಚ ತಗ್ಗಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಆಡುಭಾಷೆಯಲ್ಲಿ ದೊಡ್ಡ ಕಾಯಿಲೆಗಳೆಂದೇ ಕರೆಯಲ್ಪಡುವ ಕ್ಯಾನ್ಸರ್ ನಿಂದ ಕೋಟ್ಯಾನುಕೋಟಿ ಜನರು ನರಳುತ್ತಿದ್ದಾರೆ. ಇಂಥ ಔಷಧಿಗಳ ಬೆಲೆ ಇಳಿದು ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.












Click it and Unblock the Notifications