ಕೊರೊನಾ ಎಫೆಕ್ಟ್: ಉಬರ್‌ನ ಮುಂಬೈ ಕಚೇರಿ ಶಾಶ್ವತವಾಗಿ ಬಂದ್
ನವದೆಹಲಿ, ಜುಲೈ 4: ಮೇ ತಿಂಗಳಲ್ಲಿ ಭಾರತದಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಸಿಬ್ಬಂದಿಯನ್ನು (600 ಉದ್ಯೋಗಿಗಳು) ವಜಾಗೊಳಿಸಿದ ನಂತರ, ಬಾಡಿಗೆ ವಾಹನ ಸೇವೆ ನೀಡುವ ಉಬರ್ ತನ್ನ ಮುಂಬೈ ಕಚೇರಿಯನ್ನು ಮುಚ್ಚಿದೆ ಎಂದು ಈ ಕುರಿತು ತಿಳಿದಿರುವ ಹೆಸರಿಸಬಾರದ ವ್ಯಕ್ತಿಯೊಬ್ಬರು ಹೇಳಿದ್ದಾರೆ.
Recommended Video
ಉಬರ್ ಮುಂಬೈ ಉದ್ಯೋಗಿಗಳು ಡಿಸೆಂಬರ್ ವರೆಗೆ ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ವರ್ಷ ನೌಕರರನ್ನು ಮುಂಬೈನ ಮತ್ತೊಂದು ಕಚೇರಿಗೆ ಸ್ಥಳಾಂತರಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಉಬರ್ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು ಆದರೆ ಇದು "ಮುಂಬೈನಲ್ಲಿರುವ ಎಲ್ಲಾ ಸವಾರರಿಗೆ ಉನ್ನತ ಮಟ್ಟದ ಸೇವೆಯನ್ನು" ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.

ರೈಡ್-ಹೇಲಿಂಗ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸುಮಾರು 6,700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರಕ್ಕೆ ಬಂದ ಒಂದು ತಿಂಗಳ ನಂತರ ಉಬರ್‌ನ ಮುಂಬೈ ಕಚೇರಿ ಮುಚ್ಚುವಿಕೆಗೆ ಮುಂದಾಗಿದೆ. ಭಾರತದಲ್ಲಿ ಸುಮಾರು 600 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.












Click it and Unblock the Notifications