ಟ್ವಿಟ್ಟರ್‌ನಲ್ಲಿನ್ನು ವಿಡಿಯೋ, ಗ್ರೂಪ್ ಮೆಸೇಜ್ ಕಳುಹಿಸಿ
ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಸಾಮಾಜಿಕ ಜಾಲತಾಣ ಟ್ವಿಟ್ಟರ್ ತನ್ನ ಪ್ರತಿಸ್ಪರ್ಧಿಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಇನ್ನು ಮುಂದೆ ಟ್ವಿಟ್ಟರ್ ಬಳಕೆದಾರರು ವಿಡಿಯೋ ಹಾಗೂ ಗ್ರೂಪ್ ಮೆಸೇಜ್ ಕಳುಹಿಸುವ ಅವಕಾಶ ನೀಡಿದೆ.
ಟ್ವಿಟ್ಟರ್‌ನಲ್ಲಿ ತಮ್ಮ ಹಲವು ಫಾಲೋವರ್‌ಗಳಿಗೆ ಖಾಸಗಿ ಸಂದೇಶಗಳನ್ನೂ ಕಳುಹಿಸಬಹುದು. ಆದರೆ, ಒಂದು ಬಾರಿ 20 ಸಂದೇಶಗಳಷ್ಟೇ ಕಳುಹಿಸಬಹುದು. ಈ ಮೊದಲು ಓರ್ವ ಫಾಲೋವರ್‌ಗೆ ಒಂದು ಸಂದೇಶ ಮಾತ್ರ ಕಳುಹಿಸಲು ಅವಕಾಶವಿತ್ತು. [ಟ್ವಿಟ್ಟರ್ ಬಳಸಿ, ಹಣ ರವಾನಿಸಿ]

ಆದರೆ, ಪ್ರಸ್ತುತ ಈ ಅವಕಾಶ ಕೇವಲ ಜಾಹೀರಾತುದಾರರು ಮತ್ತು ಸಾಮಾಜಿಕ ವ್ಯಕ್ತಿಗಳಿಗೆ ಮಾತ್ರ ಸಿಗಲಿದೆ. ಇವರು 10 ನಿಮಿಷಗಳವರೆಗಿನ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು ಎಂದು ಟ್ವಿಟ್ಟರ್ ಉತ್ಪಾದನಾ ನಿರ್ದೇಶಕ ಜಿನೆನ್ ಕಾಮ್‌ದಾರ್ ಹೇಳಿದ್ದಾರೆ. [ಬೆಂಗಳೂರಲ್ಲಿ ಕಳಪೆ ರಸ್ತೆ ಕಂಡರೆ ಟ್ವಿಟ್ಟರ್ ನಲ್ಲಿ ದೂರು ನೀಡಿ]
ವೈನ್, ಟ್ವಿಟ್ಟರ್ ಸೇರಿಸಲ್ಲ : ಪ್ರಸ್ತುತ ವೈನ್ಸ್‌ಗಳನ್ನು ವೈನ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಕಳುಹಿಸಬಹುದು. ಆದರೆ, ವೈನ್ ಮತ್ತು ಟ್ವಿಟ್ಟರ್ ಎರಡನ್ನೂ ಸಂಯೋಜಿಸುವ ಯೋಜನೆ ಇಲ್ಲ ಎಂದು ಕಾಮದಾರ್ ತಿಳಿಸಿದ್ದಾರೆ.
ಟ್ವಿಟ್ಟರ್ ತನ್ನದೇ ಒಡೆತನದ ವೈನ್ ಆಪ್ ಅನ್ನು 2012ರಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಈಗಾಗಲೇ 6 ಸೆಕೆಂಡ್‌ಗಳ ಕಾಲದ ವಿಡಿಯೋ ಕಳುಹಿಸುವ ಅವಕಾಶವಿದೆ.












Click it and Unblock the Notifications