ಟಿವಿಎಸ್ ಮೋಟಾರ್ ಮಾರಾಟ ಪ್ರಮಾಣ ಜೂನ್‌ನಲ್ಲಿ ಶೇಕಡಾ 33ರಷ್ಟು ಇಳಿಕೆ
ನವದೆಹಲಿ, ಜುಲೈ 1: ಜೂನ್‌ನಲ್ಲಿ ಒಟ್ಟು ಮಾರಾಟದಲ್ಲಿ ಶೇಕಡಾ 33.2 ರಷ್ಟು ಕುಸಿತ ಕಂಡಿದ್ದು, 1,98,387 ಯುನಿಟ್‌ಗಳು ಮಾರಾಟವಾಗಿವೆ ಎಂದು ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಟಿವಿಎಸ್ ಮೋಟಾರ್ ಬುಧವಾರ ಹೇಳಿದೆ.
Recommended Video
Patanjali,ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು , ಕೈ ಎತ್ತಿದ ಬಾಬಾ ರಾಮ್‌ದೇವ್ | Oneindia Kannada
ಮುಖ್ಯವಾಗಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸುವ ಕಂಪನಿಯು 2019 ರ ಜೂನ್‌ನಲ್ಲಿ 2,97,102 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟವು 1,91,076 ಯುನಿಟ್ ಆಗಿದ್ದು, 2019 ರ ಜೂನ್‌ನಲ್ಲಿ 2,83,461 ಯುನಿಟ್ ಮಾರಾಟವಾಗಿದೆ.

ದೇಶೀಯ ದ್ವಿಚಕ್ರ ವಾಹನ ಮಾರಾಟವು ಕಳೆದ ತಿಂಗಳು 1,44,817 ಯುನಿಟ್ ಆಗಿದ್ದು, 2019 ರ ಜೂನ್‌ನಲ್ಲಿ 2,26,279 ಯುನಿಟ್‌ಗಳಿಗೆ ಹೋಲಿಸಿದರೆ ಇದು ಶೇಕಡಾ 36 ರಷ್ಟು ಕುಸಿತವಾಗಿದೆ ಎಂದು ಅದು ಹೇಳಿದೆ.











Click it and Unblock the Notifications