ಟಿವಿ, ಫ್ರಿಡ್ಜ್‌, ವಾಶಿಂಗ್ ಮೆಷಿನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಬೆಲೆ ಶೇ. 20ರಷ್ಟು ಏರಿಕೆ ಸಾಧ್ಯತೆ

ನವದೆಹಲಿ, ಡಿಸೆಂಬರ್ 07: ದಿನೇ ದಿನೇ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಲೇ ಇದೆ. ಈ ಸಾಲಿಗೆ ಮನೆಯಲ್ಲಿ ದಿನನಿತ್ಯ ಬಳಸುವ ಗೃಹೋಪಯೋಗಿ ವಸ್ತುಗಳು ಸೇರಿಕೊಳ್ಳಲಿವೆ. ಡಿಸೆಂಬರ್ ತಿಂಗಳಿನಲ್ಲಿ ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಮೈಕ್ರೊವೇವ್ ಓವನ್ ಸೇರಿದಂತೆ ಇತರೆ ಗೃಹೋಪಯೋಗಿ ವಸ್ತುಗಳು ಬೆಲೆ ಶೇಕಡಾ 20ರವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದನೆಗೆ ಬಳಸುವ ಇನ್‌ಪುಟ್ ವೆಚ್ಚದಲ್ಲಿ ಶೇಕಡಾ 15 ರಿಂದ 40ರಷ್ಟು ಹೆಚ್ಚಾಗುವ ಹಿನ್ನೆಲೆಯಲ್ಲಿ ಒಟ್ಟಾರೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರಲಿದೆ.

ವಾಶಿಂಗ್ ಮೆಷಿನ್‌ ಮತ್ತು ಹವಾ ನಿಯತ್ರಣ(ಎಸಿ) ಬೆಲೆಗಳು ಶೇಕಡಾ 8-10ರಷ್ಟು ಏರಿಕೆಯಾಗಬಹುದು. ಇನ್ನು ರೆಫ್ರಿಜರೇಟರ್‌ಗಳ ದರವು ಶೇಕಡಾ 12 ರಿಂದ 15 ರಷ್ಟು ಏರಿಕೆಯಾಗಬಹುದು ಎಂದು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

TV, Washing Machines And Other Home Appliances Set To Get Costlier By Up To 20%

ಟೆಲಿವಿಷನ್‌ಗಳ ಪ್ಯಾನೆಲ್‌ಗಳ ಮೇಲೆ ಬೆಲೆ ಶೇಕಡಾ 30 ರಿಂದ 100ರಷ್ಟು ಹೆಚ್ಚಾಗಿದೆ. ಜಾಗತಿಕ ಶೇಖರಣೆಯಿಂದಾಗಿ ಪ್ಲಾಸ್ಟಿಕ್‌ ವೆಚ್ಚವು ಶೇಕಡಾ 30-40ರಷ್ಟು ಏರಿದೆ. ಜೊತೆಗೆ ತಾಮ್ರ, ಜಿಂಕ್ ಮತ್ತು ಅಲ್ಯೂಮಿನಿಯಂ ದರವನ್ನು ಡಿಸೆಂಬರ್‌ನಲ್ಲಿ ಶೇಕಡಾ 15-20 ರಷ್ಟು ಹೆಚ್ಚಿಸಲಾಗಿದ್ದರೆ, ಸಾಗರ ಸರಕು ಸಾಗಣೆ ವೆಚ್ಚವು ಶೇಕಡಾ 40-50ರಷ್ಟು ಏರಿಕೆಯಾಗಿದೆ.

ರೆಫ್ರಿಜರೇಟರ್, ಫ್ರೀಜರ್‌ಗಳಲ್ಲಿ ಫೋಮ್‌ಗಳ ತಯಾರಿಕೆಯಲ್ಲಿ ಬಳಸುವ ಎಂಡಿಐ ಎಂಬ ರಾಸಾಯನಿಕ ಬೆಲೆ ಶೇಕಡಾ 200 ರಷ್ಟು ಏರಿಕೆಯಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚದಲ್ಲಿ ಬೆಲೆ ಏರಿಕೆ ಸಾಧ್ಯತೆ ಇದ್ದು, ಹಬ್ಬದ ಸೀಸನ್‌ಗಳಲ್ಲಿನ ಸ್ಟಾಕ್ ಮುಗಿದ ಬಳಿಕ, ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಿಂದ ಗೃಹೋಪಯೋಗಿ ಸರಕುಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ ಗೋದ್ರೇಜ್ ಉಪಕರಣಗಳ ವ್ಯವಹಾರ ಮುಖ್ಯಸ್ಥ ಕಮಲ್ ನಂದಿ ಹೇಳಿದ್ದಾರೆ.

ವಿಶೇಷ ಏನಂದ್ರೆ, ಹಲವಾರು ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಎಲ್ಲಾ ಬೆಲೆಗಳು ಏರಿಕೆಯಾಗುತ್ತಿವೆ ಎಂದು ಕಮಲ್ ನಂದಿ ಅಭಿಪ್ರಾಯ ಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+