Gold Price Today: ಡೊನಾಲ್ಡ್ ಟ್ರಂಪ್ ತೆರಿಗೆ ನೀತಿ ಎಫೆಕ್ಟ್: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ, ಇಂದು ಎಷ್ಟಿದೆ?
ಬೆಂಗಳೂರು, ಏಪ್ರಿಲ್ 03: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ವಿವಿಧ ದೇಶಗಳ ಆಮದು ಸುಂಕ ಹೆಚ್ಚಿಸಿದ ಬೆನ್ನಲ್ಲೆ ಚಿನ್ನದ ದರದಲ್ಲಿ ಭಾರೀ ಏರಿಕೆ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಬರೋಬ್ಬರಿ 2000 ರೂಪಾಯಿ ಏರಿಕೆ ಆಗಿತ್ತು. ಈ ಮೂಲಕ 10 ಗ್ರಾಂ ಚಿನ್ನದ ದರ 01ಲಕ್ಷ ರೂಪಾಯಿ ಗಡಿ ಸಮೀಪಿಸಲಿದೆ ಎನ್ನಲಾಗಿತ್ತು. ಇದರ ಬೆನ್ನಲ್ಲೆ ಟ್ರಂಪ್ ಕೈಗೊಂಡ ತೆರಿಗೆ ನೀತಿ ನಿರ್ಧಾರಗಳಿಂದ ಬಂಗಾರದ ದರ ಏರಿಕೆ ಆಗಿದೆ. ಷೇರು ಮಾರುಕಟ್ಟೆ ಸೂಚ್ಯಂಕದ ಮೇಲೂ ಪರಿಣಾಮ ಬೀರಿದೆ.
ಅಮರಿಕಾ ಡಾಲರ್ ಮೌಲ್ಯ ಇಳಿಕೆ ಆಗುವುದನ್ನು ತಡೆಯಲು ಟ್ರಂಪ್ ಆಮದು ಸುಂಕ ಹೆಚ್ಚಿಸಿದ್ದಾರೆ. ಇದರಿಂದ ದೇಶದ ಆರ್ಥಿಕತೆಗೆ ಹೊಡೆತ ಬೀಳುವ ಜೊತೆಗೆ ಚಿನ್ನ, ಮತ್ತಿತರ ಬೇಡಿಕೆಯ ವಸ್ತುಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಇದಲ್ಲದೇ ಅಮೆರಿಕಾ ವಸ್ತುಗಳು ಬೆಲೆಯು ಏರಿಕೆ ಕಾಣುತ್ತಿವೆ.

ಈವರೆಗೆ ರಾಷ್ಟ್ರ ರಾಷ್ಟ್ರಗಳ ಮಧ್ಯದ ಯುದ್ಧಗಳಿಂದಾಗಿ ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕತೆ ಮೇಲೆ ಪರಿಣಾಮ ಬೀರಿತ್ತು. ಇದೀಗ ಭಾರತದ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
24 ಕ್ಯಾರಟ್ ಹತ್ತು ಗ್ರಾಂ ಚಿನ್ನವು ₹92,840 ರೂಪಾಯಿಯಿಂದ ₹93,380ಗೆ ಏರಿಕೆ ಆಗಿದೆ. ಈ ಮೂಲಕ 540 ರೂಪಾಯಿ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ದರವು ಮೊನ್ನೆಯಷ್ಟೇ 9,28,400 ರೂಪಾಯಿ ಇದ್ದದ್ದ ಗುರುವಾರಕ್ಕೆ ₹9,33,800 ರೂಪಾಯಿಗೆ ಏರಿಕೆ ಆಗಿದೆ. ಅಂದರೆ ರೂ. 5,400 ಗೆ ಹೆಚ್ಚಾಗಿದೆ. ಅಮೆರಿಕಾ ಅಧ್ಯಕ್ಷರ ನಿರ್ಧಾರದಿಂದ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಚಿನ್ನದ ದರದಲ್ಲಿ ಕಡಿಮೆ ಅವಧಿಯಲ್ಲಿ ಗಣನೀಯ ಏರಿಕೆ ಕಂಡಿದೆ.

22 ಕ್ಯಾರಟ್ 10 ಗ್ರಾಂ ಚಿನ್ನವು ಮೊನ್ನೆಯಷ್ಟೇ 69,630 ರೂಪಾಯಿ ಇದ್ದದ್ದು ಗುರುವಾರ ರೂಪಾಯಿ 70,040ಕ್ಕೆ ಏರಿಕೆ ಆಗಿದೆ. ಈ ಮೂಲಕ ರೂಪಾಯಿ 410 ರಷ್ಟು ಏರಿಕೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯು ರೂಪಾಯಿ 6,96,300 ನಿಂದ ರೂಪಾಯಿ 7,00,400ಗೆ ಹೆಚ್ಚಾಗಿದೆ. ಇದರಿಂದ ಒಟ್ಟು 4,100 ರೂ. ಏರಿಕೆ ಕಂಡಂತಾಗಿದೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿಯ ದರ 10,500 ರುಪಾಯಿ ಇದೆ ಎಂದು ಗುರುವಾರ ವರದಿ ಆಗಿದೆ. ಈ ಚಿನ್ನಾಭರಣಗಳ ಬೆಲೆ ಏರಿಕೆಗೆ ಅಮೆರಿಕಾ ಅಧ್ಯಕ್ಷ ನಿರ್ಧಾರ, ಸುಂಕ ಹೇರಿಕೆಯು ಪ್ರಮುಖ ಕಾರಣ ಎನ್ನಲಾಗಿದೆ.
ವಿವಿಧ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಎಷ್ಟಿದೆ?
ಬೆಂಗಳೂರು: 85,600 ರೂಪಾಯಿ
ದೆಹಲಿ: 85,750 ರೂಪಾಯಿ
ಮುಂಬೈ: 85,600 ರೂಪಾಯಿ
ಚೆನ್ನೈ: 85,600 ರೂಪಾಯಿ
ಕೇರಳ: 85,600 ರೂಪಾಯಿ
ಕೋಲ್ಕತಾ: 85,600 ರೂಪಾಯಿ
ಲಕ್ನೋ: 85,750 ರೂಪಾಯಿ
ಅಹ್ಮದಾಬಾದ್: 85,650 ರೂಪಾಯಿ
ಜೈಪುರ್: 85,750 ರೂಪಾಯಿ.












Click it and Unblock the Notifications