ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BHIM App : 2 ಕೋಟಿ ಡೌನ್ ಲೋಡ್, 1,500 ಕೋಟಿ ರು ವ್ಯವಹಾರ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 01: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾದ ಭಾಗವಾಗಿರುವ ಮೊಬೈಲ್ ಮೂಲಕ ಪಾವತಿಸುವ ಉದ್ದೇಶದಿಂದ ಪರಿಚಯಿಸಲಾದ ಭಾರತ್ ಇಂಟರ್ ಫೇಸ್ ಫಾರ್ ಮನಿ ಅಥವಾ BHIM app ಸುಮಾರಿ 2 ಕೋಟಿ ಬಾರಿ ಡೌನ್‌ ಲೋಡ್ ಆಗಿದೆ.

ಭೀಮ್ ಅಪ್ಲಿಕೇಷನ್ ಬಳಸಿ, ಕ್ಯಾಶ್ ಬ್ಯಾಕ್-ಪ್ರೋತ್ಸಾಹಧನ ಪಡೆಯಿರಿ ಭೀಮ್ ಅಪ್ಲಿಕೇಷನ್ ಬಳಸಿ, ಕ್ಯಾಶ್ ಬ್ಯಾಕ್-ಪ್ರೋತ್ಸಾಹಧನ ಪಡೆಯಿರಿ

ಈ ಮೊಬೈಲ್ ಅಪ್ಲಿಕೇಷನ್ ಮೂಲಕ 1,500 ಕೋಟಿ ರೂ. ಮೊತ್ತ ವರ್ಗಾಯಿಸಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದರು.

Rs 1,500 cr worth transactions have been done using BHIM app: RS Prasad

ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಅವರು ಭೀಮ್ ಅಪ್ಲಿಕೇಷನ್ ಶೂನ್ಯವೇಳೆಯಲ್ಲಿ ಪ್ರಶ್ನಿಸಿದ್ದಕ್ಕೆ ಉತ್ತರವಾಗಿ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ಡಿಜಿಟಲ್ ಪಾವತಿ ಬಗ್ಗೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ 2 ಕೋಟಿಗಿಂತಲೂ ಹೆಚ್ಚು ಜನರನ್ನು ತರಬೇತುಗೊಳಿಸಲಾಗಿದೆ ಎಂದರು.

ಬಿಎಚ್‌ಐಎಂ ಆಪ್ ಅನ್ನು 2 ಕೋಟಿ ಜನರು ಡೌನ್‌ಲೋಡ್ ಮಾಡಿದ್ದಾರೆ. ಬಿಎಚ್‌ಐಎಂ ಆ್ಯಪ್ ಮೂಲಕ 1,500 ಕೋಟಿ ರುಪಾಯಿ ಮೊತ್ತದ ಸರಿಸುಮಾರು 50 ಲಕ್ಷ ವರ್ಗಾವಣೆಗಳು ನಡೆದಿವೆ ಎಂದು ಹೇಳಿದರು.

ಡಿಜಿಟಲ್ ಹಾಗೂ ನಗದು ರಹಿತ ಪಾವತಿಯ ಸರಕಾರದ ಉದ್ದೇಶ ಶ್ಲಾಘಿಸಿದ ಜಯಾ ಬಚ್ಚನ್, ಸಾಕಷ್ಟು ಮೂಲಭೂತ ಸೌಕರ್ಯ ಇಲ್ಲದೇ ಇರುವುದರಿಂದ ಡಿಜಿಟಲ್ ಪಾವತಿಗೆ ಅಡ್ಡಿ ಉಂಟಾಗುತ್ತಿದೆ ಎಂದರು.

ನೋಟು ನಿಷೇಧವನ್ನು ಸರಿಯಾಗಿ ಯೋಜಿಸಿಲ್ಲ ಹಾಗೂ ಇದರಿಂದ ದೇಶದ ಜನತೆ ಗೊಂದಲ ಹಾಗೂ ಸಂಕಷ್ಟ ಎದುರಿಸಿದರು. ದೇಶದಲ್ಲಿ ಒಟ್ಟು 20 ಲಕ್ಷ ಪಿಒಎಸ್ (ಕಾರ್ಡ್ ಮೂಲಕ ಪಾವತಿಸುವ) ಮೆಷಿನ್ ಅಗತ್ಯ ಇದೆ. ಆದರೆ, 15.1 ಲಕ್ಷ ಮಷಿನ್ ಮಾತ್ರ ಇದೆ ಎಂದು ಜಯಾ ಬಚ್ಚನ್ ಹೇಳಿದರು.

English summary
Union Information and Technology Minister Ravi Shankar Prasad on Monday informed Parliament that BHIM, a mobile app to make digital payments, has been downloaded by close to two crore people, and transactions worth Rs 1,500 have been made so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X