'ಚಿನ್ನ ಖರೀದಿ'ಗೆ ಪ್ಯಾನ್ ಕಾರ್ಡ್ ಕಡ್ಡಾಯ, ಪ್ರತಿಭಟನೆ
ನವದೆಹಲಿ,ಮಾ.26: ಒಂದು ಲಕ್ಷ ರುಗಳಿಗೂ ಅಧಿಕ ಮೊತ್ತದ ಚಿನ್ನ ಖರೀದಿಗೆ ಪ್ಯಾನ್ ಕಾರ್ಡ್ ಸಂಖ್ಯೆಯ ಉಲ್ಲೇಖವನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಈ ಹೊಸ ನಿಯಮ ಜಾರಿಗೊಂಡಿದ್ದು, ವ್ಯಾಪಾರಿಗಳ ಅಕ್ರೋಶಕ್ಕೆ ಗುರಿಯಾಗಿದೆ. ಕಳೆದೆರಡು ದಿನಗಳಿಂದ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಬಜೆಟ್ ಪ್ರಸ್ತಾವನೆಯನ್ನು ಪ್ರತಿಭಟಿಸಿ ದೆಹಲಿ ವ್ಯಾಪಾರಿಗಳು ಚಿನ್ನಬೆಳ್ಳಿ ಮಾರುಕಟ್ಟೆಯನ್ನು ಮುಚ್ಚಿದ್ದರು. ಇದು ದೇಶವ್ಯಾಪ್ತಿ ಈ ಪ್ರತಿಭಟನೆ ಹಬ್ಬುವ ಸಾಧ್ಯತೆ ಕಂಡು ಬಂದಿದೆ.

ಒಂದು ಲಕ್ಷ ರು. ಗೂ ಅಧಿಕ ವೌಲ್ಯದ ಚಿನ್ನ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯಗೊಳಿಸಿರುವುದು ಉದ್ಯಮದ ಪಾಲಿಗೆ ನಕಾರಾತ್ಮಕ ನಡೆಯಾಗಲಿದೆ. ಇದು ನಮ್ಮ ವ್ಯಾಪಾರದ ತೀವ್ರ ಕುಸಿತಕ್ಕೆ ಕಾರಣವಾಗಲಿದೆ ಎಂದು ಚಿನ್ನದ ವ್ಯಾಪಾರಿಗಳು ಗೋಳು ತೋಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ 2015-16ನೆ ಸಾಲಿನ ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಈ ಪ್ರಸ್ತಾವನೆಯನ್ನು ಹಿಂದೆಗೆದುಕೊಳ್ಳುವಂತೆ ಚಿನ್ನಬೆಳ್ಳಿ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಫೆ.28ರಂದು ಇದ್ದ ನಿಯಮವನ್ನೇ ಮುಂದುವರೆಸುವಂತೆ ಕೋರಿದ್ದಾರೆ.
ಹೊಸ ನಿಯಮ ಜೂನ್.1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಬುಧವಾರದ ಧಾರಣೆಯಂತೆ ಚಿನ್ನದ ಬೆಲೆ10 ಗ್ರಾಂಗೆ 26,550ರು, ಬೆಳ್ಳಿ ದರ 200 ರು ಹೆಚ್ಚಿ ಪ್ರತಿ ಕೆಜಿಗೆ 37,800 ರು ಆಗಿತ್ತು. (ಪಿಟಿಐ)












Click it and Unblock the Notifications