Air Cooler: ಮಾರುಕಟ್ಟೆಯಲ್ಲಿ ಲಭ್ಯ ಇರುವ ಬೆಸ್ಟ್‌ 5 ಏರ್‌ ಕೂಲರ್ಸ್‌: ಯಾವುದಕ್ಕೆ ಎಷ್ಟಿದೇ ರೇಟಿಂಗ್‌?

ಎಪ್ರಿಲ್ ತಿಂಗಳು ಶುರುವಾಗಿದೆ ಆದರೆ ಬಿಸಿಲು ಜನರನ್ನು ಹೈರಾಣು ಮಾಡುತ್ತದೆ. ಈಗಲೇ ಹೀಗಾದರೆ ಮುಂದೆ ಹೇಗೆ ಎಂಬ ಪ್ರಶ್ನೆ ಉದ್ಧವಿಸುತ್ತದೆ. ಅಲ್ಲದೆ ಹವಾಮಾನ ಇಲಾಖೆಯೂ ಬಿಸಿಗಾಳಿ ತೀವ್ರವಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಎಸಿ ಹಾಗೂ ಏರ್‌ ಕೂಲರ್‌ಗಳು ಬಿಸಿಲಿನಿಂದ ರಕ್ಷಿಸಿಕೊಳ್ಳುವ ಮಾರ್ಗಗಳಾಗಿವೆ. ಈಗ ರಣಬಿಸಿಲು ಹೆಚ್ಚಾಗುತ್ತಿದೆ. ಬಿಸಿಲಿನಿಂದ ಕಾಪಾಡಿಕೊಳ್ಳಲು ಜನ ಹಲವು ವಿಧಾನಗಳ ಮೊರೆ ಹೊಗುತ್ತಾರೆ. ಬೆಸಿಗೆಯಿಂದ ಬಚಾವಾಗಲು ಜನರು ಫ್ಯಾನ್‌, ಏರ್‌ ಕೂಲರ್‌ ಹಾಗೂ ಎಸಿಗಳ ಮೊರೆ ಹೋಗಯತ್ತಾರೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಏರ್‌ ಕೂಲರ್‌ಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು ಎಂದು ಅದೆಷ್ಟೋ ಜನರಿಗೆ ಗೊಂದಲ ಇದ್ದೇ ಇರುತ್ತದೆ. ಮಾರ್ಕೆಟ್‌ಗೆ ಹೋದಾಗ ತರಹೆವಾರಿ ಏರ್‌ ಕೂಲರ್‌ಗಳನ್ನು ತೋರಿಸುತ್ತಾರೆ ಅದರಲ್ಲಿ ನಾವು ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ವೆಚ್ಚ, ಕಡಿಮೆ ವಿದ್ಯುತ್ ಬಳಕೆ ಮತ್ತು ಕಡಿಮೆ ನಿರ್ವಹಣೆಯಿಂದಾಗಿ ಕೂಲರ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಎಸಿಗೆ ಹಣವನ್ನು ಹೂಡಲು ಕಷ್ಟವಾದರೆ, ಜನರ ನೆಚ್ಚಿನ ಆಯ್ಕೆ ಏರ್‌ ಕೂಲರ್‌ಗಳಾಗಿವೆ. ನಿಮ್ಮ ಮನೆಗೆ ಹೊಸ ಏರ್ ಕೂಲರ್‌ಗಾಗಿ ನೀವು ಹುಡುಕುತ್ತಿದ್ದರೆ ಇಲ್ಲಿವೆ ಕೆಲವು ಏರ್‌ ಕೂಲರ್‌ಗಳ ಮಾಹಿತಿ.

Top 5 Air Coolers in the Market Which One Earns the Highest Rating

ಭಾರತದಲ್ಲಿ, ಬಜಾಜ್, ಕ್ರಾಂಪ್ಟನ್, ಹ್ಯಾವೆಲ್ಸ್, ಸಿಂಫನಿ, ಉಷಾ ಮತ್ತು ಕ್ಯಾಂಡೆಸ್‌ನಂತಹ ಕಂಪನಿಗಳು ಏರ್ ಕೂಲರ್‌ಗಳನ್ನು ಒದಗಿಸುತ್ತವೆ. ಈ ಬಜೆಟ್‌ನಲ್ಲಿ ಕೂಲಿಂಗ್‌ಗಳು ಹೆಚ್ಚಿನ ಸಾಮರ್ಥ್ಯದೊಂದಿಗೆ ಬರುತ್ತವೆ.

ಬಜಾಜ್‌ ಡಿಎಂಎಚ್‌ 65 ನಿಯೋ 65 ಲೀಟರ್‌

ಈ ರೂಮ್‌ಗಳಲ್ಲಿ ಬಳಸಲು ತುಂಬಾ ಸೂಕ್ತ. ಈ ಏರ್ ಕೂಲರ್ 90 ಅಡಿಗಳಷ್ಟು ಏರ್ ಥ್ರೋ ಅನ್ನು ಮಾಡಬಲ್ಲರು. ಮತ್ತು ಇದು ಬ್ಯಾಕ್ಟೀರಿಯಾ ವಿರೋಧಿ ಹೆಕ್ಸಾಕೂಲ್ ಮಾಸ್ಟರ್ ಮೋಡ್ ಅನ್ನು ಸಹ ಹೊಂದಿದೆ. ಅತಿ ವೇಗದಲ್ಲಿ ಗಾಳಿಯನ್ನು ಬೀಸಲು, ಈ ಏರ್ ಕೂಲರ್ ನಲ್ಲಿ ಟರ್ಬೊ ಫ್ಯಾನ್ ತಂತ್ರಜ್ಞಾನವನ್ನು ಒದಗಿಸಲಾಗಿದೆ. ಈ ಬಜಾಜ್ ಏರ್ ಕೂಲರ್ ಖರೀದಿಗೆ 3 ವರ್ಷಗಳ ವಾರಂಟಿ ಸಹ ಲಭ್ಯವಿದೆ. ಈ ಕೂಲರ್‌ಗೆ 3.9 ರೇಟಿಂಗ್‌ ನೀಡಲಾಗಿದ್ದು, 9300 ರೂಪಾಯಿಂದ ಮಾರುಕಟ್ಟೆಯಲ್ಲಿ ಲಭ್ಯ.

ಸಿಂಫೋನಿ ಹಿಫ್ಲೋ 40 ಪರ್ಸನಲ್‌ ಏರ್‌ ಕೂಲರ್‌

ಸಿಂಫನಿಯ ಈ ಏರ್ ಕೂಲರ್ ನಿಮ್ಮ ಮನೆಗೆ ತುಂಬಾ ಒಳ್ಳೆಯದು. ಅಲ್ಲದೆ ನೀವು ಅದನ್ನು ಅಂಗಡಿ ಅಥವಾ ಕಾರ್ಖಾನೆಯಲ್ಲಿ ಇಟ್ಟುಕೊಳ್ಳಬಹುದು ಮತ್ತು ತಂಪಾದ ಗಾಳಿಯನ್ನು ಪಡೆಯಬಹುದು. ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಈ ಏರ್ ಕೂಲರ್ 3.4 ಸ್ಟಾರ್‌ ರೇಟಿಂಗ್ ಹೊಂದಿದೆ. ಈ ಕಂಪನಿಯ ಏರ್‌ ಕೂಲರ್‌ 6500 ರೂಪಾಯಿ ಇಂದ ಪ್ರಾರಂಭವಾಗುತ್ತದೆ.

Top 5 Air Coolers in the Market Which One Earns the Highest Rating

ಕ್ರೋಮ್ಟಾನ್‌ ಓಝೋನ್‌ 75 ಲೀಟರ್‌

ಈ ಬಿಳಿ ಮತ್ತು ಟೀಲ್ ಬಣ್ಣದ ಡೆಸರ್ಟ್ ಏರ್ ಕೂಲರ್ 75 ಲೀಟರ್ ಸಾಮರ್ಥ್ಯ ಹೊಂದಿದೆ ಮತ್ತು ಅದರ ಪಕ್ಕದಲ್ಲಿ ಇತರ ಬ್ರಾಂಡ್‌ಗಳ ಕೂಲರ್‌ಗಳು ನೀರು ತುಂಬುವುದನ್ನು ಕಾಣಬಹುದು. ಇದರಲ್ಲಿಹೆಚ್ಚಿನ ಸಾಂದ್ರತೆಯ ಕೂಲಿಂಗ್ ಪ್ಯಾಡ್ ಮತ್ತು 4 ವೇ ಏರ್ ಡಿಫ್ಲೆಕ್ಷನ್ ಅನ್ನು ಸಹ ಹೊಂದಿದ್ದು ವಿಶೇಷವಾಗಿದೆ. ಈ ಕೂಲರ್ ಬೆಸ್ಟ್ ಸೆಲ್ಲರ್ ಶ್ರೇಯಾಂಕವನ್ನು ಪಡೆದುಕೊಂಡಿದೆ ಮತ್ತು ಗ್ರಾಹಕರು ಸಹ ಇದನ್ನು ತುಂಬಾ ಇಷ್ಟಪಡುತ್ತಾರೆ. ಪೋರ್ಟಬಲ್ ಆಗಿರುವುದರಿಂದ ಈ ಏರ್ ಕೂಲರ್ ಅನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು. ಮತ್ತು ಈ ಕೂಲರ್‌ಗೆ ನಾಲ್ಕು ಸ್ಟಾರ್‌ಗಳನ್ನು ಗ್ರಾಹಕ ನೀಡಿದ್ದಾರೆ. ಅಲ್ಲದೆ ಈಗ ಆನ್‌ಲೈನಲ್‌ಲ್ಲಿ ಈ ಕೂಲರ್‌ ಸುಮಾರು 9601 ರೂಪಾಯಿಗೆ ಸಿಗುತ್ತದೆ. ಅಲ್ಲದೆ ಇಎಂಐ ಸೌಲಭ್ಯವನ್ನು ಈ ಕೂಲರ್‌ ಹೊಂದಿದೆ.

ಓರಿಯಂಟ್ ಎಲೆಕ್ಟ್ರಿಕ್ ಟೊರ್ನಾಡೊ 65L

ಇನ್ನು ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರು ಹೊಂದಿರುವ ಮತ್ತೊಂದು ಏರ್‌ ಕೂಲರ್‌ ಎಂದರೆ ಓರಿಯಂಟ್ ಏರ್ ಕೂಲರ್‌. ಇದು ಏರೋಫ್ಯಾನ್ ತಂತ್ರಜ್ಞಾನವನ್ನು ಹೊಂದಿರುತ್ತದೆ. ಇದರಲ್ಲಿ ಜೇನುಗೂಡು ಪ್ಯಾಡ್‌ಗಳನ್ನು ಬಳಿಸಲಾಗಿದ್ದು, ತಂಪಾದ ಗಾಳಿಯನ್ನು ಒದಗಿಸಲು ಸಹಾಯಕವಾಗಿದೆ. ಇದು 3.7 ಸ್ಟಾರ್ ರೇಟಿಂಗ್ ಹೊಂದಿದೆ. ಇದ್ರಲ್ಲೂ ಹಲವು ಗಾತ್ರಗಳು ಲಭ್ಯ.

Livpure Koolbliss Desert Air Cooler- 65L

Livpure ಕೂಲರ್‌ 65 ಲೀಟರ್‌ನದ್ದಾಗಿದೆ. ಒಮ್ಮೆ ನೀರಿನಿಂದ ಈ ಏರ್‌ ಕೂಲರ್‌ ತುಂಬಿಸಿ ಇದು ತನ್ನ ಕೆಲಸವನ್ನು ಆರಂಭಿಸುತ್ತದೆ. ಈ ಕೂಲರ್‌ ಗಂಟೆಗಟ್ಟಲೆ ಹೆಚ್ಚಿನ ವೇಗದ ತಂಪಾದ ಗಾಳಿಯನ್ನು ನೀಡುತ್ತಿರುತ್ತದೆ. ಈ Livpure ಏರ್ ಕೂಲರ್‌ನಲ್ಲಿ ಹೆಚ್ಚಿನ ಏರ್ ಡೆಲಿವರಿ ಸಹ ಲಭ್ಯವಿರುತ್ತದೆ. ಇದು ಕಡಿಮೆ ವಿದ್ಯುತ್‌ ಬಳಸುತ್ತದೆ. ಅಲ್ಲದೆ ಇದಕ್ಕೂ 2 ವರ್ಷಗಳ ವಾರಂಟಿಯಲ್ಲಿ ಲಭ್ಯವಿದೆ, ಈ ಕೂಲರ್ 3.7 ಸ್ಟಾರ್‌ಗಳ ರೇಟಿಂಗ್ ಅನ್ನು ನೀಡಲಾಗಿದ್ದು, 11,999 ರೂಪಾಯಿಗಳಿಂದ ಮಾರುಕಟ್ಟೆಯಲ್ಲಿ ಲಭ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+