Get Updates
Get notified of breaking news, exclusive insights, and must-see stories!

ಫ್ಲಿಪ್‍ಕಾರ್ಟ್‍ನೊಂದಿಗೆ ಟೈಟಾನ್ ಪಾಲುದಾರಿಕೆ, ಹೊಸ ವಾಚ್ ಶ್ರೇಣಿ ಬಿಡುಗಡೆ

ಬೆಂಗಳೂರು, ಆಗಸ್ಟ್ 05 : ಭಾರತದ ಅತಿಹೆಚ್ಚು ಮಾರಾಟವಾಗುವ ಟೈಟಾನ್ ಕಂಪನಿ ಲಿಮಿಟೆಡ್‍ನ ವಾಚ್ ಬ್ರಾಂಡ್ ಸೋನಾಟಾ ಜೊತೆ ಫ್ಲಿಪ್‍ಕಾರ್ಟ್‍ನ ಸಹಭಾಗಿತ್ವ ಸಾಧಿಸಿದೆ. ಫ್ಯಾಷನ್ ಶ್ರೇಣಿಯ ವಾಚ್‍ಗಳ ಹೊಸ ಉಪ-ಬ್ರಾಂಡ್ 'ಎಪಿಕ್ ಬೈ ಸೋನಾಟಾ' ಬಿಡುಗಡೆ ಮಾಡಿದೆ. ಎಪಿಕ್ ಬೈ ಸೊನಾಟಾ ಮೌಲ್ಯಯುತ ಫ್ಯಾಷನ್ ಸರಣಿಯ ವಾಚುಗಳನ್ನು ಎಲ್ಲ ಆಕರ್ಷಕ ನಿಷ್ಠಾವಂತ ಗ್ರಾಹಕರಿಗೆ ಪ್ರಸ್ತುತಪಡಿಸುತ್ತಿದ್ದು, ಇದರ ಆರಂಭಿಕ ಬೆಲೆ ಶ್ರೇಣಿ ರೂ. 499ರೊಂದಿಗೆ ಫ್ಲಿಪ್‍ಕಾರ್ಟ್‍ನಲ್ಲಿ 5 ಆಗಸ್ಟ್ 2021 ರಿಂದ ಲಭ್ಯ.

ಈ ಪಾಲುದಾರಿಕೆಯ ಮೂಲಕ, ಸೊನಾಟಾ ಫ್ಲಿಪ್‍ಕಾರ್ಟ್‍ನ ಭಾರತದಾದ್ಯಂತ ಹರಡಿರುವ ವೈವಿಧ್ಯಮಯ ಮತ್ತು ಚೆನ್ನಾಗಿ ವ್ಯಾಪಿಸಿರುವ ಭೌಗೋಳಿಕತೆಯ 350 ದಶಲಕ್ಷಕ್ಕೂ ಅಧಿಕ ನೋಂದಾಯಿತ ಮತ್ತು ಬೆಳೆಯುತ್ತಿರುವ ಗ್ರಾಹಕರ ಜತೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ. ಬಳಕೆಗೆ ಚಾಲನೆ ನೀಡುವಲ್ಲಿ ಮಧ್ಯಮ ಭಾರತವು ಮೆಟ್ರೊಗಳನ್ನು ಹಿಂದಿಕ್ಕಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಫ್ಲಿಪ್‍ಕಾರ್ಟ್‍ನೊಂದಿಗಿನ ಸಹಯೋಗವು ಮಾರುಕಟ್ಟೆಗಳಲ್ಲಿ ವರ್ಗದ ಮಾಲೀಕತ್ವವನ್ನು ಹೆಚ್ಚಿಸಲು ಉದ್ದೇಶಿಸಿದೆ.

ಆನ್‍ಲೈನ್ ಮಾರುಕಟ್ಟೆಯ ಮೂಲಕ ಭಾರತದಾದ್ಯಂತ ಗ್ರಾಹಕರೊಂದಿಗೆ ಸಂಪರ್ಕಿಸಲು ಅವಕಾಶಗಳನ್ನು ಗುರುತಿಸುವುದು, ತಂತ್ರಜ್ಞಾನದ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವುದು, ಅವರ ಉಪಸ್ಥಿತಿಯನ್ನು ಅಳೆಯುವುದು ಮತ್ತು ಅಸ್ತಿತ್ವದಲ್ಲಿರುವ ಉತ್ಪನ್ನ ಬಂಡವಾಳಗಳನ್ನು ವೈವಿಧ್ಯಗೊಳಿಸುವುದು ಇದರಲ್ಲಿ ಸೇರಿದೆ. ಟೈಟಾನ್ ಕಂಪನಿಯೊಂದಿಗಿನ ಪಾಲುದಾರಿಕೆಯು ಈ ದೃಷ್ಟಿಗೆ ಹೊಂದಿಕೊಂಡಿದೆ ಮತ್ತು ಈ ವಿಭಾಗದಲ್ಲಿ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುವ ಪ್ರಯಾಣದ ಆರಂಭವಾಗಿದೆ.

ಸಿಇಒ ಸುಪರ್ಣ ಮಿತ್ರ

ಸಿಇಒ ಸುಪರ್ಣ ಮಿತ್ರ

ಈ ಬಿಡುಗಡೆ ಮತ್ತು ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಟೈಟಾನ್ ಕಂಪನಿ ಲಿಮಿಟೆಡ್‍ನ ಕೈಗಡಿಯಾರಗಳು ಮತ್ತು ಧರಿಸಬಹುದಾದ ಸಾಧನ ವಿಭಾಗದ ಸಿಇಒ ಸುಪರ್ಣ ಮಿತ್ರ, "ಸೊನಾಟಾ ಒಂದು ಲಕ್ಷಾಂತರ ಭಾರತೀಯರು ಪ್ರೀತಿಸುವ ಮತ್ತು ನಂಬಿಕೆಯಿರುವ ಬ್ರಾಂಡ್ ಆಗಿದೆ. ಎಪಿಕ್ ಬಿಡುಗಡೆಯೊಂದಿಗೆ ಸೊನಾಟಾ ತನ್ನ ಬ್ರಾಂಡ್ ಪ್ರಯಾಣದ ಮುಂದಿನ ಹಾದಿಯನ್ನು ಕಂಡುಕೊಳ್ಳಲು ಮತ್ತು ಯುವ, ಫ್ಯಾಷನ್ ಚಾಲಿತ ಆದರೆ ಮೌಲ್ಯಯುತ ಗ್ರಾಹಕರಿಗೆ ವಿಶ್ವಾಸಾರ್ಹ ಬ್ರಾಂಡ್‍ನಿಂದ ಸೊಗಸಾದ ಮತ್ತು ಬೆರಗುಗೊಳಿಸುವ ಕೊಡುಗೆಯನ್ನು ನೀಡುವ ರೋಮಾಂಚಕಾರಿ ಘಟ್ಟದಲ್ಲಿದೆ. ಫ್ಲಿಪ್‍ಕಾರ್ಟ್‍ನೊಂದಿಗಿನ ಪಾಲುದಾರಿಕೆಯು ಟ್ರೆಂಡ್ ಹುಡುಕಾಟದ, ಡಿಜಿಟಲ್ ಸ್ನೇಹಿ ಪ್ರೇಕ್ಷಕರ ಕ್ರಿಯಾತ್ಮಕ ಮತ್ತು ಬಹು-ವರ್ಗದ ಪರಿಸರದಲ್ಲಿ ಅವಕಾಶಗಳನ್ನು ತೆರೆಯಲಿದೆ. ಸಾಬೀತಾದ ಇ-ಕಾಮರ್ಸ್ ಸಾಮಥ್ರ್ಯ ಮತ್ತು ಗ್ರಾಹಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ತಲುಪಿಸುವ ದಾಖಲೆಯನ್ನು ಹೊಂದಿದ ಫ್ಲಿಪ್‍ಕಾರ್ಟ್‍ನೊಂದಿಗೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ" ಎಂದು ಹೇಳಿದರು.

 'ಎಪಿಕ್ ಬೈ ಸೊನಾಟಾ' ಹೊಸ ಪೀಳಿಗೆ

'ಎಪಿಕ್ ಬೈ ಸೊನಾಟಾ' ಹೊಸ ಪೀಳಿಗೆ

ಡಿಜಿಟಲ್ ಪ್ರಭಾವ ಬೆಳೆಯುತ್ತಿರುವ ಜಗತ್ತಿನಲ್ಲಿ, 'ಎಪಿಕ್ ಬೈ ಸೊನಾಟಾ' ಹೊಸ ಪೀಳಿಗೆಯ ಆಧುನಿಕ ಗ್ರಾಹಕರ ನೈತಿಕತೆಯನ್ನು ಪ್ರತಿಬಿಂಬಿಸುತ್ತದೆ. ಅವರು ವ್ಯಾಪಕವಾದ ವಿಶ್‍ಲಿಸ್ಟ್ ಐಟಂಗಳನ್ನು ಹೊಂದಿದ್ದು, ತಂತ್ರಜ್ಞಾನ ನೈಪುಣ್ಯ ಹೊಂದಿದ ಮತ್ತು ತಮ್ಮ ಬ್ರ್ಯಾಂಡ್ ಆಯ್ಕೆಗಳನ್ನು ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದ್ದಾರೆ. ಆಧುನಿಕ, ಡಿಜಿಟಲ್ ಬುದ್ಧಿವಂತ ಗ್ರಾಹಕರ ಬೆಳೆಯುತ್ತಿರುವ ಸಮೂಹದೊಂದಿಗೆ ಫ್ಯಾಶನ್ ಮೂಲಕ ಮೌಲ್ಯವನ್ನು ಪಡೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಫ್ಲಿಪ್‍ಕಾರ್ಟ್‍ನ ಸಹಭಾಗಿತ್ವದಲ್ಲಿ ಬಿಡುಗಡೆ ಮಾಡಿರುವ 'ಎಪಿಕ್ ಬೈ ಸೋನಾಟಾ', ಮಹಾನಗರಗಳು ಮತ್ತು ಮಧ್ಯ ನಗರಗಳಿಂದ ಬಳಕೆಯಲ್ಲಿ ಭವಿಷ್ಯದ ಬೆಳವಣಿಗೆಯ ವೇಗವನ್ನು ಪಡೆಯಲು ಸಿದ್ಧವಾಗಿದೆ.

ಫ್ಲಿಪ್‍ಕಾರ್ಟ್ ಫ್ಯಾಶನ್ ಉಪಾಧ್ಯಕ್ಷ ನಿಶಿತ್

ಫ್ಲಿಪ್‍ಕಾರ್ಟ್ ಫ್ಯಾಶನ್ ಉಪಾಧ್ಯಕ್ಷ ನಿಶಿತ್

ಟೈಟಾನ್ ಕಂಪನಿಯೊಂದಿಗಿನ ಪಾಲುದಾರಿಕೆಯ ಕುರಿತು ಮಾತನಾಡಿದ ಫ್ಲಿಪ್‍ಕಾರ್ಟ್ ಫ್ಯಾಶನ್ ಉಪಾಧ್ಯಕ್ಷ ನಿಶಿತ್ ಗರ್ಗ್, "ಎಪಿಕ್ ಬೈ ಸೋನಾಟಾ' ಬಿಡುಗಡೆಗೆ ಟೈಟಾನ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ, ಏಕೆಂದರೆ ಇತ್ತೀಚಿನ ಟ್ರೆಂಡ್‍ಗಳನ್ನು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ಮಾಡಲು ಮತ್ತು ದೇಶಾದ್ಯಂತ ಗ್ರಾಹಕರನ್ನು ತಲುಪಲು ಇದು ಸಹಕಾರಿಯಾಗುತ್ತದೆ ಎಂಬ ವಿಶ್ವಾಸ ನಮ್ಮದು. ಭಾರತದ ಅತ್ಯಂತ ವಿಶ್ವಾಸಾರ್ಹ ವಾಚ್ ತಯಾರಿಕ ಸಂಸ್ಥೆಯಿಂದ ಜನರು ದೊಡ್ಡ ಶ್ರೇಣಿಯ ಸ್ಟೈಲಿಶ್ ಟೈಮ್‍ವೇರ್ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ನಮ್ಮ ಸುರಕ್ಷಿತ ವಿತರಣಾ ಪ್ರಕ್ರಿಯೆಯ ಮೂಲಕ ಅವರ ಮನೆಬಾಗಿಲನ್ನು ತಲುಪಲು ಸಾಧ್ಯವಾಗುತ್ತದೆ. ನಾವು ಸಂಬಂಧಿತ ಗ್ರಾಹಕರ ಅಗತ್ಯಗಳನ್ನು ಅರ್ಥಪೂರ್ಣ ಸಹಯೋಗದ ಮೂಲಕ ಪರಿಹರಿಸುವುದನ್ನು ಮುಂದುವರಿಸುತ್ತೇವೆ ಮತ್ತು ನಮ್ಮ ಪಾಲುದಾರರಿಗೆ ವಿಶೇಷವಾಗಿ ಬೇಡಿಕೆ ರೂಪುಗೊಳ್ಳುತ್ತಿರುವ ಪ್ರದೇಶಗಳಲ್ಲಿ ಇನ್ನೂ ಬಳಕೆಯಾಗದ ಸಾಮಥ್ರ್ಯವನ್ನು ಅನ್ವೇಷಿಸಲು ಸಾಧ್ಯವಾಗಿಸುತ್ತದೆ" ಎಂದು ಬಣ್ಣಿಸಿದರು.

ಸೊನಾಟಾ ಬಗ್ಗೆ

ಸೊನಾಟಾ ಬಗ್ಗೆ

ಸೊನಾಟಾ ಭಾರತದ ಅತಿಹೆಚ್ಚು ಮಾರಾಟವಾಗುವ ವಾಚ್‍ಬ್ರಾಂಡ್ ಆಗಿದ್ದು, ಟಾಟಾ ಸಮೂಹದ ಟೈಟಾನ್ ಕಂಪನಿ ಲಿಮಿಟೆಡ್‍ನ ಬ್ರಾಂಡ್ ಆಗಿದೆ. ಇದು ಉತ್ಕೃಷ್ಟ ಗುಣಮಟ್ಟದ ಬ್ರಾಂಡ್ ಎಂದು ಗುರುತಿಸಿಕೊಂಡಿದ್ದು, ಗ್ರಾಹಕರಿಗೆ ಅಸಾಧಾರಣ ಮೌಲ್ಯದ ಬ್ರಾಡ್ ಎನಿಸಿಕೊಂಡಿದೆ. ಬ್ರಾಂಡ್ ವಾರ್ಷಿಕ 55 ಲಕ್ಷ ವಾಚ್‍ಗಳ ಮಾರಾಟವನ್ನು ಹೊಂದಿದ್ದು, ದೇಶಾದ್ಯಂತ ಇರುವ 8000ಕ್ಕೂ ಅಧಿಕ ಡೀಲರ್‌ಗಳ ಬೃಹತ್ ಜಾಲದ ಮೂಲಕ ಮಾರಾಟ ಮಾಡುತ್ತಿದೆ. ಗ್ರಾಹಕರು ಖರೀದಿಸುವ ಪ್ರತಿ ವಾಚು ಕೂಡಾ ಟಾಟಾ ಗ್ಯಾರೆಂಟಿಯನ್ನು ಹೊಂದಿರುತ್ತದೆ.

ಫ್ಲಿಪ್ ಕಾರ್ಟ್ ಬಗ್ಗೆ

ಫ್ಲಿಪ್ ಕಾರ್ಟ್ ಬಗ್ಗೆ

2007 ರಲ್ಲಿ ಆರಂಭವಾದ ಫ್ಲಿಪ್‍ಕಾರ್ಟ್ ಲಕ್ಷಾಂತರ ಗ್ರಾಹಕರು, ಮಾರಾಟಗಾರರು, ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳು ಭಾರತದ ಡಿಜಿಟಲ್ ವಾಣಿಜ್ಯ ಕ್ರಾಂತಿಯ ಭಾಗವಾಗಲು ಅನುವು ಮಾಡಿಕೊಟ್ಟಿದ್ದು, ನೋಂದಾಯಿತ ಗ್ರಾಹಕರ ಸಂಖ್ಯೆ 350 ಮಿಲಿಯನ್‍ಗಿಂತಲೂ ಹೆಚ್ಚಾಗಿದ್ದು, 80+ ವಿಭಾಗಗಳಲ್ಲಿ 150 ದಶಲಕ್ಷ ಉತ್ಪನ್ನಗಳನ್ನು ನೀಡುತ್ತಿದೆ. ಭಾರತದಲ್ಲಿ ವಾಣಿಜ್ಯವನ್ನು ಪ್ರಜಾಪ್ರಭುತ್ವಗೊಳಿಸಲು, ಪ್ರವೇಶ ಮತ್ತು ಕೈಗೆಟುಕುವಿಕೆಯನ್ನು ಹೆಚ್ಚಿಸಲು, ಗ್ರಾಹಕರನ್ನು ಸಂತೋಷಪಡಿಸಲು, ಪರಿಸರ ವ್ಯವಸ್ಥೆಯಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಉದ್ಯಮಿಗಳು ಮತ್ತು ಎಂಎಸ್‍ಎಂಇಗಳ ತಲೆಮಾರುಗಳನ್ನು ಸಬಲೀಕರಣಗೊಳಿಸುವ ನಮ್ಮ ಪ್ರಯತ್ನಗಳು ಅನೇಕ ಉದ್ಯಮಗಳಲ್ಲಿ ಹೊಸತನವನ್ನು ನಮಗೆ ಪ್ರೇರೇಪಿಸಿವೆ. ಫ್ಲಿಪ್‍ಕಾರ್ಟ್ ಪ್ರವರ್ತಕ ಸೇವೆಗಳಾದ ಕ್ಯಾಶ್ ಆನ್ ಡೆಲಿವರಿ, ನೋ ಕಾಸ್ಟ್ ಇಎಂಐ ಮತ್ತು ಸುಲಭ ರಿಟನ್ರ್ಸ್‍ಗಳಿಗೆ ಹೆಸರುವಾಸಿಯಾಗಿದೆ-ಗ್ರಾಹಕ ಕೇಂದ್ರಿತ ಆವಿಷ್ಕಾರಗಳು ಲಕ್ಷಾಂತರ ಭಾರತೀಯರಿಗೆ ಆನ್‍ಲೈನ್ ಶಾಪಿಂಗ್ ಅನ್ನು ಹೆಚ್ಚು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಿದೆ. ತನ್ನ ಗ್ರೂಪ್ ಕಂಪನಿಗಳ ಜೊತೆಯಲ್ಲಿ, ಫ್ಲಿಪ್ ಕಾರ್ಟ್ ತಂತ್ರಜ್ಞಾನದ ಮೂಲಕ ಭಾರತದಲ್ಲಿ ವಾಣಿಜ್ಯವನ್ನು ಪರಿವರ್ತಿಸಲು ಬದ್ಧವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+