ಡಿಮಾಟ್ ಖಾತೆ ತೆರೆದ ತಿರುಪತಿ ತಿಮ್ಮಪ್ಪ
ಹೈದ್ರಾಬಾದ್, ಆ. 04: ತಿರುಪತಿ ಹುಂಡಿಗೆ ಹಣ, ಆಭರಣ ಮಾತ್ರವಲ್ಲ ಇನ್ನು ಮುಂದೆ ಷೇರುಗಳನ್ನು ಹಾಕಬಹುದು. ಹೌದು... ತಿರುಪತಿ ತಿಮ್ಮಪ್ಪ ಡಿಮಾಟ್ ಖಾತೆಯನ್ನು ತೆರೆದಿದ್ದಾನೆ!
ತಿರುಪತಿ ತಿರುಮಲ ದೇವಾಲಯ ಡೀಮಾಟ್ ಖಾತೆಯೊಂದನ್ನು ತೆರೆದಿದ್ದು ಭಕ್ತರು ಷೇರುಗಳನ್ನು ಕಾಣಿಕೆಯಾಗಿ ನೀಡಬಹುದು. ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಇಂಡಿಯಾದ ಅಡಿ ತಿರುಮಲ ದೇವಾಲಯ 1601010000384828 ಸಂಖ್ಯೆಯಲ್ಲಿ ಖಾತೆಯನ್ನು ತೆರೆದಿದೆ.[ಮ್ಯೂಚುವಲ್ ಫಂಡ್ ಮಾರುಕಟ್ಟೆಯಿಂದ ಸಹಾರಾ ಔಟ್]

ಕೆಲ ಭಕ್ತರಿಂದ ಷೇರು ನೀಡಿಕೆ ಪ್ರಸ್ತಾವವೂ ಕೇಳಿ ಬಂದಿತ್ತು ಆ ಹಿನ್ನೆಲೆಯಲ್ಲಿ ಖಾತೆ ತೆರೆಯಲಾಗಿದೆ. ಪ್ರಾಥಮಿಕವಾಗಿ ಷೇರುಗಳನ್ನು ಮಾತ್ರ ಸ್ವೀಕಾರ ಮಾಡಲು ನಿರ್ಧರಿಸಲಾಗಿದೆ ಎಂದು ಸೆಂಟ್ರಲ್ ಡಿಫಾಸಿಟ್ ಸರ್ವೀಸ್ ನ ಎಂಡಿ ಪಿ ಎಸ್ ರೆಡ್ಡಿ ತಿಳಿಸಿದ್ದಾರೆ.[ಆನ್ ಲೈನ್ ನಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯೋದು ಹೇಗೆ?]
ದೇವಾಲಯಕ್ಕೆ ಸಂಬಂಧಿಸಿದ ಎಲ್ಲ ಷೇರುಗಳನ್ನು ಒಂದೇ ಖಾತೆಯಡಿ ತರಲಾಗುವುದು, ಭಕ್ತರು ನೀಡುವ ಷೇರುಗಳ ವ್ಯವಹಾರವನ್ನು ಇದೇ ಖಾತೆಯಡಿ ಮಾಡಲಾಗುವುದು ಎಂದು ತಿರುಮಲ ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ












Click it and Unblock the Notifications