ಟಿಕ್ ಟಾಕ್ ನಿಷೇಧ ರದ್ದಾದರೂ, ಡೌನ್ಲೋಡಿಗೆ ಸಿಗುತ್ತಿಲ್ಲವೇಕೆ?

ಬೆಂಗಳೂರು, ಏಪ್ರಿಲ್ 26: ಚೀನಾ ಮೂಲದ ಜನಪ್ರಿಯ ಮೊಬೈಲ್ ಅಪ್ಲಿಕೇಷನ್ ಟಿಕ್ ಟಾಕ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ಬುಧವಾರದಂದು ಹಿಂಪಡೆದರೂ, ಇನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಗೆ ಸಿಗುತ್ತಿಲ್ಲ ಎಂದು ಬಳಕೆದಾರರು ಕೊರಗುತ್ತಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ಮಾತ್ರವಲ್ಲ ಆಪಲ್ ಪ್ಲೇ ಸ್ಟೋರ್ ನಲ್ಲಿ ಕೂಡ ಟಿಕ್ ಟಾಕ್ ಆಪ್ ಸಿಗುತ್ತಿಲ್ಲ. ಗೂಗಲ್ ಕ್ರೋಮ್ ಬಳಸಿ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಹೈಕೋರ್ಟಿನಿಂದ ಆದೇಶ ಬಂದರೂ, ಆದೇಶದ ಪ್ರತಿ ಇನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಲುಪಿಲ್ಲ. ಸಚಿವಾಲಯದಿಂದ ಪ್ರತಿ ಆದೇಶವು ಗೂಗಲ್ ಹಾಗೂ ಆಪಲ್ ಸಂಸ್ಥೆಗೆ ತಲುಪಿದ ಬಳಿಕವಷ್ಟೇ ಆಪ್ ಲಭ್ಯವಾಗಲಿದೆ.

ಟಿಕ್ ಟಾಕ್ ಮೇಲಿನ ನಿಷೇಧ ತೆರವುಗೊಳಿಸಿ, ಷರತ್ತು ವಿಧಿಸಿದ್ದ ಕೋರ್ಟ್, ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ವಿಡಿಯೋ ಅಪ್ಲೋಡ್ ಆಗಬಾರದು. ಒಂದು ವೇಳೆ ಅಪ್ಲೋಡ್ ಆಗಿರುವ ಬಗ್ಗೆ ದೂರು ಬಂದರೆ, 36 ಗಂಟೆಯೊಳಗೆ ಆಪ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರ್ಟ್ ಸೂಚಿಸಿದೆ.

TikTok ban removed but you still can’t download it from Play Store and App Store: Here’s why

ತಾಣಗಳಲ್ಲಿ ಹಂಚಲಾಗುತ್ತಿದ್ದು, ಅಶ್ಲೀಲ, ಅಸಭ್ಯ ವಿಡಿಯೋಗಳು ಹೆಚ್ಚಾಗಿವೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಷೇಧ ಹೇರುವಂತೆ ಕೋರಲಾಗಿತ್ತು

2019ರಲ್ಲಿ ಪರಿಚಯವಾಗಿರುವ ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಆಗಿದ್ದು ಚೀನಾದ ಬೀಜಿಂಗ್ ಬೈಟ್ ಡ್ಯಾನ್ಸ್ ಕೋ ಸಂಸ್ಥೆಗೆ ಸೇರಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ 100 ಕೋಟಿ ಡೌನ್ ಲೋಡ್ ಆಗಿ ದಾಖಲೆ ಬರೆದಿದೆ. 0.0006% ಕಂಟೆಟ್ ಮಾತ್ರ ಪೋರ್ನೊಗ್ರಾಫ್ ಎನ್ನಬಹುದು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+