ಹೊಸದಾಗಿ ಬರುವ ಸಾವಿರ ರೂ ನೋಟಿನಲ್ಲಿ ಏನಿದೆ ವಿಶೇಷತೆ?
ನವದೆಹಲಿ. ಸೆ, 03 : ಹೆಚ್ಚುತ್ತಿರುವ ಖೋಟಾ ನೋಟು ಹಾವಳಿ, ಹಣಕಾಸು ಅಕ್ರಮಗಳಿಗೆ ಯಾವಾಗ ತೆರೆ ಬೀಳುತ್ತದೋ ಎಂದು ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆ ಅಂತೀರಾ ಹಾಗಾದರೆ ಈ ಸುದ್ದಿಯಲ್ಲೇನಿದೆ ನೋಡಿ.
ಹಣಕಾಸಿನ ವಿಚಾರದಲ್ಲಿ ತಲೆದೋರುವ ಸಮಸ್ಯೆಗಳನ್ನು ತಡೆಯುವ ಸಲುವಾಗಿ ಹೆಚ್ಚು ಸುರಕ್ಷತಾ ಅಂಶಗಳನ್ನೊಳಗೊಂಡ 1,000 ರೂ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]

ಆರ್‌ಬಿಐ ಅಧಿಕಾರಿಯೊಬ್ಬರು ಈ ಕುರಿತಾಗಿ ಮಾಹಿತಿ ನೀಡಿದ್ದು, ಈಗಾಗಲೇ ವಿಶೇಷ ಭದ್ರತಾ ಗುಣವುಳ್ಳ 500 ರೂ ನೋಟು ಬಿಡುಗಡೆಯಾಗಿದೆ. ಇದೀಗ ಸಿಂಗಾಪುರ ತಂತ್ರಜ್ಞಾನದ 1,000 ರೂ ಮುಖಬೆಲೆಯ ನೋಟು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದರಲ್ಲಿ ಏನಿದೆ ವಿಶೇಷತೆ?
ಹೊಸನೋಟಿನಲ್ಲಿ ಕ್ರಮಸಂಖ್ಯೆಯ ಮೊದಲು ರೂಪಾಯಿ ಚಿಹ್ನೆ ಇರಲಿದೆ. ಅಲ್ಲದೇ ಆಂಗ್ಲ ಭಾಷೆಯ 'L' ಅಕ್ಷರ ಇರುತ್ತದೆ. ಕ್ರಮಸಂಖ್ಯೆ ಗಾತ್ರವನ್ನು ಆರೋಹಣ ಕ್ರಮದಲ್ಲಿ ನಮೂದಿಸಲಾಗಿರುತ್ತದೆ. ಇದರಿಂದ ಸುಲಭವಾಗಿ ಫೋರ್ಜರಿಗಳನ್ನು ತಡಗಟ್ಟಬಹುದಾಗಿದೆ ಎಂದು ಆರ್ ಬಿಐ ತಿಳಿಸಿದೆ.[11 ಪೇಮೆಂಟ್ ಬ್ಯಾಂಕ್ ಆರಂಭಕ್ಕೆ ಆರ್ ಬಿಐ ಅಸ್ತು]
1 ರೂ ನೋಟಿನ ಮುದ್ರಣಕ್ಕೆ ಎಷ್ಟು ವೆಚ್ಚ ತಗಲುತ್ತೆ?
20 ವರ್ಷಗಳ ಬಳಿಕ ಒಂದು ರೂ ಮುಖಬೆಲೆಯ ನೋಟು ಮುದ್ರಣವನ್ನು ಇತ್ತೀಚೆಗೆ ಪ್ರಾರಂಭಿಸಲಾಗಿತ್ತು. ಇದೀಗ ಇದರ ಕುರಿತಾಗಿ ಅಚ್ಚರಿಯ ಸಂಗತಿಯೊಂದು ತಿಳಿದು ಬಂದಿದೆ.
ಒಂದು ರೂ ಮುಖಬೆಲೆಯ ಒಂದು ನೋಟು ಮುದ್ರಿಸಲು 1.14 ರೂ ಖರ್ಚಾಗುತ್ತದೆ. ಮಾಹಿತಿ ಕಾಯ್ದೆ ಅನ್ವಯ ಸಲ್ಲಿಸಲಾದ ಅರ್ಜಿಯೊಂದಕ್ಕೆ ಉತ್ತರಿಸಿದ ಸೆಕ್ಯುರಿಟಿ ಪ್ರಿಂಟಿಂಗ್ ಆಫ್ ಮೈಂಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ(SPMCIL) ಈ ಮಾಹಿತಿ ನೀಡಿದೆ.












Click it and Unblock the Notifications