ಸೆಪ್ಟೆಂಬರ್ ತಿಂಗಳಿನಲ್ಲಿ 95,480 ಕೋಟಿ GST ಸಂಗ್ರಹ: ಶೇ. 4ರಷ್ಟು ಏರಿಕೆ

ನವದೆಹಲಿ, ಅಕ್ಟೋಬರ್ 02: ದೇಶಾದ್ಯಂತ ಸಾಂಕ್ರಾಮಿಕ ರೋಗ ಪ್ರೇರಿತ ಲಾಕ್‌ಡೌನ್ ಸಡಿಲಿಕೆ ಬಳಿಕ ಉದ್ಯಮ ಚಟುವಟಿಗಳಿಗೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಜಿಎಸ್‌ಟಿ ಆದಾಯವು ಕೂಡ ಚೇತರಿಕೊಂಡು ಸೆಪ್ಟೆಂಬರ್‌ ತಿಂಗಳಲ್ಲಿ ಶೇ. 4ರಷ್ಟು ಏರಿಕೆ ದಾಖಲಿಸಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 95,480 ಕೋಟಿ ರುಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಆರಂಭವಾದ ನಂತರ ಸಂಗ್ರಹವಾದ ಅತಿ ದೊಡ್ಡ ಮೊತ್ತ ಇದಾಗಿದೆ. ಕಳೆದ ಆಗಸ್ಟ್ ಗೆ ಹೋಲಿಸಿದರೆ ಶೇ. 10.4ರಷ್ಟು ಹಾಗೂ ಕಳೆದ ವರ್ಷದ ಸೆಪ್ಟೆಂಬರ್ ಗೆ ಹೋಲಿಸಿದರೆ ಶೇ. 4ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟು ಸಂಗ್ರಹದಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ(ಸಿಜಿಎಸ್‌ಟಿ) 17,741 ಕೋಟಿ ರೂ, ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) 23,131 ಕೋಟಿ ರೂ., ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 47,484 ಕೋಟಿ ರೂ. (ಆಮದು ಮೇಲೆ ಸಂಗ್ರಹಿಸಿದ 22,442 ಕೋಟಿ ರೂ. ಸರಕುಗಳ) ಮತ್ತು ಸೆಸ್ 7,124 ಕೋಟಿ ರೂ. ಸಂಗ್ರಹವಾಗಿದೆ.

The gross GST revenue collected in the month of September 2020 is Rs.95,480 crore

ಮಹಾರಾಷ್ಟ್ರ ಜಿಎಸ್‌ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿದ್ದು 13,546 ಕೋಟಿ ರೂ. ಸಂಗ್ರಹಿಸಿದ್ದು, ನಂತರದ ಸ್ಥಾನದಲ್ಲಿ ತಮಿಳುನಾಡು 6,454 ಕೋಟಿ ರೂ. , ಗುಜರಾತ್ ನಲ್ಲಿ 6,090 ಕೋಟಿ ರೂ., ಕರ್ನಾಟಕದಲ್ಲಿ 6,050ಕೋಟಿ ರೂ. ಸಂಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+