ಜಾಗತಿಕವಾಗಿ ಎರಡನೇ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಟಿಸಿಎಸ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜಾಗತಿಕವಾಗಿ ಐಟಿ ಸೇವೆಗಳ ವಲಯದಲ್ಲಿ ಎರಡನೇ ಅತ್ಯಮೂಲ್ಯ ಬ್ರ್ಯಾಂಡ್ ಆಗಿದೆ. ಆದರೆ ಇನ್ಫೋಸಿಸ್ ಹಾಗೂ ಇತರ ನಾಲ್ಕು ಭಾರತೀಯ ಪ್ರಮುಖ ಟೆಕ್ ಕಂಪನಿಗಳು ಅಗ್ರ 25 ಸ್ಥಾನದಲ್ಲಿ ಇದೆ ಎಂದು ಬ್ರ್ಯಾಂಡ್ ಫೈನಾನ್ಸ್ ತಿಳಿಸಿದೆ. ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ಬ್ರ್ಯಾಂಡ್ ಫೈನಾನ್ಸ್ ಐ.ಟಿ. ಸರ್ವಿಸ್ 25 ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಆ್ಯಕ್ಸೆಂಚರ್ ಕಂಪನಿಯು ಜಗತ್ತಿನ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ.
ಇನ್ನು ಈ ಪ್ರಮುಖ 25 ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಭಾರತದ ಇನ್ಫೊಸಿಸ್, ವಿಪ್ರೊ, ಎಚ್‌ಸಿಎಲ್, ಟೆಕ್ ಮಹೀಂದ್ರ ಮತ್ತು ಎಲ್‌ಟಿಐ ಬ್ರ್ಯಾಂಡ್‌ಗಳು ಸಹ ಸ್ಥಾನ ಪಡೆದುಕೊಂಡಿದೆ. ಇನ್ಫೊಸಿಸ್ ಮೂರನೇ ಸ್ಥಾನ, ವಿಪ್ರೊ 7 ನೇ ಸ್ಥಾನ, ಎಚ್‌ಸಿಎಲ್ 8 ನೇ ಸ್ಥಾನ, ಟೆಕ್ ಮಹೀಂದ್ರ 15 ನೇ ಸ್ಥಾನ ಹಾಗೂ ಎಲ್‌ಟಿಐ 22 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಎಲ್ಲಾ ಆರು ಭಾರತೀಯ ಬ್ರ್ಯಾಂಡ್‌ಗಳು 2020-2022ರ ಅವಧಿಯಲ್ಲಿ ಟಾಪ್ 10 ವೇಗವಾಗಿ ಬೆಳೆಯುತ್ತಿರುವ ಐಟಿ ಸೇವೆಗಳ ಬ್ರ್ಯಾಂಡ್‌ಗಳಲ್ಲಿ ಸೇರಿವೆ ಎಂದು ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆಯು ಉಲ್ಲೇಖ ಮಾಡಿದೆ. ಇನ್ನು ಆ್ಯಕ್ಸೆಂಚರ್ ಕಂಪನಿಯು ವಿಶ್ವದ ಅತ್ಯಮೂಲ್ಯ ಮತ್ತು ಬಲಿಷ್ಠ ಐಟಿ ಸೇವೆಗಳ ಬ್ರ್ಯಾಂಡ್ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. ವರದಿಯ ಪ್ರಕಾರ ಆ್ಯಕ್ಸೆಂಚರ್ ಕಂಪನಿಯು 36.2 ಯುಎಸ್‌ಡಿ ಶತಕೋಟಿಯ ದಾಖಲೆಯ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದೆ.

"ಭಾರತವು ಪ್ರಮುಖ ಪಾತ್ರ ವಹಿಸಲಿದೆ"
ಭಾರತೀಯ ಐಟಿ ಸೇವೆಗಳ ಬ್ರ್ಯಾಂಡ್‌ಗಳು 2020 ರಿಂದ 2022 ರವರೆಗಿನ ಸರಾಸರಿ ಬೆಳವಣಿಗೆಯೊಂದಿಗೆ 51 ಪ್ರತಿಶತದಷ್ಟು ಪ್ರಗತಿ ಸಾಧಿಸಿವೆ. ಇನ್ನು ಯುಎಸ್‌ನ ಬ್ರ್ಯಾಂಡ್‌ಗಳು ಏಳು ಶೇಕಡಾ ಕುಸಿತ ಕಂಡಿದೆ. ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮತ್ತು ಡಿಜಿಟಲೀಕರಣವು ವೇಗ ಪಡೆದುಕೊಂಡಿದ್ದು ಭಾರತದಲ್ಲಿ ಐ.ಟಿ. ಸೇವಾ ಕೇಂದ್ರಗಳ ವಿಸ್ತರಣೆಯನ್ನು ಸುಗಮಗೊಳಿಸಿದೆ. ಐ.ಟಿ. ಸೇವೆಗಳ ಬ್ರ್ಯಾಂಡ್‌ಗಳ ಉತ್ತಮ ಬೆಳವಣಿಗೆ ಮತ್ತು ಹೆಚ್ಚಿನ ಜನರು ಡಿಜಿಟಲ್ ಕೌಶಲ ಪಡೆದುಕೊಂಡಿರುವುದರಿಂದಾಗಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ವ್ಯವಸ್ಥೆಗಳಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ತಿಳಿಸಿದೆ.
ಕಂಪನಿಗಳು ಬ್ರ್ಯಾಂಡ್ ಮೌಲ್ಯ ಎಷ್ಟಿದೆ?
ಇನ್ನು ಐಬಿಎಂ ನಾಲ್ಕನೇ ಶ್ರೇಯಾಂಕಕ್ಕೆ ಇಳಿದಿದ್ದು, ಈ ಹಿನ್ನೆಲೆಯಿಂದಾಗಿ ಟಿಸಿಎಸ್ ಶ್ರೇಯಾಂಕ ಎರಡನೇ ಸ್ಥಾನಕ್ಕೆ ಏರಿದೆ. ಕಂಪನಿಯ ಬ್ರ್ಯಾಂಡ್ ಮೌಲ್ಯ 16.8 ಶತಕೋಟಿ ಯುಎಸ್‌ಡಿ ಆಗಿದೆ. ಇನ್ನು ಆ್ಯಕ್ಸೆಂಚರ್‌ನ ಬ್ರ್ಯಾಂಡ್ ಮೌಲ್ಯ 2.71 ಲಕ್ಷ ಕೋಟಿ ರೂಪಾಯಿ, ಟಿಸಿಎಸ್‌ನ ಬ್ರ್ಯಾಂಡ್ ಮೌಲ್ಯ 1.26 ಲಕ್ಷ ಕೋಟಿ ರೂಪಾಯಿ, ಇನ್ಫೊಸಿಸ್‌ನ ಬ್ರ್ಯಾಂಡ್ ಮೌಲ್ಯ 96,000 ಕೋಟಿ ರೂಪಾಯಿ, ವಿಪ್ರೊ ಬ್ರ್ಯಾಂಡ್ ಮೌಲ್ಯ 47,250 ಕೋಟಿ ರೂಪಾಯಿ, ಎಚ್‌ಸಿಎಲ್ ಬ್ರ್ಯಾಂಡ್ ಮೌಲ್ಯ 45,750 ಕೋಟಿ ರೂಪಾಯಿ ಹಾಗೂ ಟೆಕ್ ಮಹೀಂದ್ರ ಬ್ರ್ಯಾಂಡ್ ಮೌಲ್ಯ 22,500 ಕೋಟಿ ರೂಪಾಯಿ ಆಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಬ್ರಾಂಡ್ ಫೈನಾನ್ಸ್‌ನ ಸಿಇಒ ಮತ್ತು ಅಧ್ಯಕ್ಷ ಡೇವಿಡ್ ಹೈಗ್, "ಈ ಮಹತ್ತರವಾದ ಸಾಧನೆಯು ಬಲವಾದ ಆರ್ಥಿಕ ಬೆಳವಣಿಗೆಯ ಫಲಿತಾಂಶವಾಗಿದೆ. ಕಳೆದ ವರ್ಷ ಹೊಸ ಜಾಗತಿಕ ಬ್ರ್ಯಾಂಡ್ ಸ್ಥಾನೀಕರಣದಲ್ಲಿ ಬಲವಾದ ಮತ್ತು ಮುಂದುವರಿದ ಹೂಡಿಕೆಗಳ ಪ್ರತೀಕವಾಗಿದೆ. ಟಿಸಿಎಸ್ ತನ್ನ ಉದ್ಯೋಗಿಗಳು, ಗ್ರಾಹಕರು ಮತ್ತು ಸಮುದಾಯಗಳ ಅಗತ್ಯಗಳನ್ನು ಪೂರೈಸಲು ಬದ್ಧತೆ ಹೊಂದಿರುವುದನ್ನು ನಾನು ನೋಡುತ್ತಿದ್ದೇನೆ," ಎಂದು ತಿಳಿಸಿದ್ದಾರೆ. ಇನ್ನು ಟಿಸಿಎಸ್‌ನ ಸಿಎಂಒ ರಾಜಶ್ರೀ ಆರ್ ಮಾತನಾಡಿ, "ಈ ಶ್ರೇಯಾಂಕವು ಕಂಪನಿಗೆ ಒಂದು ಹೆಗ್ಗುರುತು ಮೈಲಿಗಲ್ಲು," ಎಂದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications