ಜನವರಿ 2019ರಿಂದ ಟಾಟ ಮೋಟರ್ಸ್ ವಾಹನಗಳ ಬೆಲೆ ಏರಿಕೆ
ನವದೆಹಲಿ, ಡಿಸೆಂಬರ್ 16: ಮುಂದಿನ ವರ್ಷದ ಆರಂಭದಿಂದ ಟಾಟಾ ಮೋಟರ್ಸ್ ವಾಹನಗಳ ಬೆಲೆ ಏರಿಕೆಯಾಗಲಿದೆ. ಟಾಟಾ ಮೋಟರ್ಸ್ ತನ್ನ ಪ್ಯಾಸೇಂಜರ್ ವಾಹನಗಳ ಬೆಲೆಯನ್ನು 40,000 ರು ನಷ್ಟು ಏರಿಕೆ ಮಾಡಲಿದೆ.
ವಿವಿಧ ಮಾದರಿ ಹಾಗೂ ವಿವಿಧ ನಗರಗಳಿಗೆ ಬೆಲೆ ವ್ಯತ್ಯಾಸವಾಗಲಿದೆ. ಜನವರಿ 01ರಿಂದ ಹೊಸ ಪರಿಷ್ಕೃತ ದರ ಪಟ್ಟಿ ಜಾರಿಗೆ ಬರಲಿದೆ. ಆಮದು ಸುಂಕ ಹಾಗೂ ಇಂಧನ ದರ ಏರಿಕೆಯಿಂದ ವಾಹನಗಳ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದ್ದು, ಬೆಲೆ ಏರಿಕೆ ಅನಿವಾರ್ಯ ಎಂದು ಸಂಸ್ಥೆ ಹೇಳಿದೆ.
ಜನವರಿ ತಿಂಗಳಿನಲ್ಲಿ ಹಾಗೂ ಜುಲೈ ಆಗಸ್ಟ್ ಅವಧಿಯಲ್ಲಿ ಸಾಮಾನ್ಯವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ವಾಹನಗಳ ದರದಲ್ಲಿ ಏರಿಕೆ ಕಂಡು ಬರುತ್ತದೆ. ರೆನೋ, ವೋಲ್ಸ್ ವಾಹನ್, ಇಸುಜು ಮೋಟರ್ಸ್ ಈಗಾಗಲೇ ವಾಹನ ದರ ಏರಿಕೆಯನ್ನು ಪ್ರಕಟಿಸಿವೆ.

ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಲಿಮಿಟೆಡ್, ಕಾರುಗಳ ಬೆಲೆಯನ್ನು 1,700 ರು ನಿಂದ 17, 000ರ ತನಕ ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹ್ಯುಂಡೈ ಮೋಟರ್ಸ್ ಲಿಮಿಟೆಡ್, ಟಾಟಾ ಮೋಟರ್ಸ್ ಲಿಮಿಟೆಡ್ ನಂತರ ಮಾರುತಿ ಸುಜುಕಿ ಕೂಡಾ ಅದೇ ಹಾದಿ ಹಿಡಿದಿತ್ತು. ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಕೂಡಾ ಕಾರುಗಳ ಬೆಲೆ ಏರಿಕೆ ಮಾಡಿದೆ. 6,000 ರಿಂದ 32,000 ರು ತನಕ ಹೋಂಡಾ ಕಾರುಗಳ ಬೆಲೆ ಏರಿಕೆಯಾಗಿದೆ.












Click it and Unblock the Notifications