ಟಾಟಾ ಮೋಟಾರ್ಸ್‌ ಷೇರು ಶೇಕಡಾ 8ರಷ್ಟು ಏರಿಕೆ

ನವದೆಹಲಿ, ಆಗಸ್ಟ್‌ 03: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಗಳಿಕೆ ನಿರೀಕ್ಷೆಗಿಂತ ಉತ್ತಮವಾಗಿ ಎಂದು ಕಂಪನಿಯು ವರದಿ ಮಾಡಿದ ಬಳಿಕ ಸೋಮವಾರ ಟಾಟಾ ಮೋಟಾರ್ಸ್‌ ಲಿಮಿಟೆಡ್ ಷೇರುಗಳು ಶೇಕಡಾ 8ರಷ್ಟು ಹೆಚ್ಚಾಗಿದೆ.

ಬಿಎಸ್‌ಇಯಲ್ಲಿ ಟಾಟಾ ಮೋಟಾರ್ಸ್ ಷೇರು ಶೇ. 8 ಕ್ಕಿಂತ ಹೆಚ್ಚು ಏರಿಕೆ ಕಂಡು 114.40 ರೂಪಾಯಿಗೆ ತಲುಪಿದೆ. ಇದು ಎನ್‌ಎಸ್‌ಇಯಲ್ಲಿ ಶೇ. 8.45 ಏರಿಕೆ ಕಂಡು 114.40 ರೂ. ತಲುಪಿದೆ. ದಿನದ ವಹಿವಾಟು ಅಂತ್ಯಕ್ಕೆ ಬಿಎಸ್‌ಇನಲ್ಲಿ 111.75 ರೂಪಾಯಿ ಮತ್ತು ಎನ್‌ಎಸ್‌ಇನಲ್ಲಿ 113.05 ರೂಪಾಯಿಗೆ ತಲುಪಿ ಕೊನೆಗೊಂಡಿದೆ.

ಎಡೆಲ್ವೀಸ್ ರಿಸರ್ಚ್‌ನ ವರದಿಯ ಪ್ರಕಾರ, ಟಾಟಾ ಮೋಟಾರ್ಸ್ ಬ್ಯಾಲೆನ್ಸ್ ಶೀಟ್ ಮತ್ತು ವೆಚ್ಚ ನಿಯಂತ್ರಣ ಉಪಕ್ರಮಗಳನ್ನು ಮೀರಿಸಿದೆ. 30 ಜೂನ್ 2020 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಒಟ್ಟು 8,443.98 ಕೋಟಿ ರೂ. ಆದಾಯ ಗಳಿಸಿದೆ.

Tata Motors Shares Up Over 8 Percent

2021ರ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಒಟ್ಟು ಆದಾಯವು 31,983.06 ಕೋಟಿ ರೂ.ಗಳಾಗಿದ್ದು, ಒಂದು ವರ್ಷದ ಹಿಂದಿನ 61,466.99 ಕೋಟಿ ರೂಪಾಯಿ ನಷ್ಟವಾಗಿದೆ.

ಟಾಟಾ ಮೋಟಾರ್ಸ್‌ನ ಸಗಟು (ರಫ್ತು ಸೇರಿದಂತೆ) ಜೂನ್ ತ್ರೈಮಾಸಿಕದಲ್ಲಿ ಶೇ. 81.5ರಷ್ಟು ಕುಸಿದು 25,294 ಯುನಿಟ್‌ಗಳಿಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+