ಟಾಟಾ 175: ಕನಸಿನ ಮನೆ ಖರೀದಿಗೆ ಅವಕಾಶ

ಬೆಂಗಳೂರು, ಫೆ.25: ದೇಶದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಕಂಪೆನಿಗಳಲ್ಲೊಂದಾದ ಟಾಟಾ ಹೌಸಿಂಗ್ ಡೆವಲಪ್ ‍ಮೆಂಟ್ ಕಂಪೆನಿ ಲಿ., ಟಾಟಾ ಸಮೂಹದ ಸಂಸ್ಥಾಪಕರ 175ನೇ ಜನ್ಮ ದಿನೋತ್ಸವವನ್ನು ಟಾಟಾ ಕ್ಯಾಪಿಟಲ್ ಜತೆಗೂಡಿ ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ.

ಸಮೂಹದ ಸಂಸ್ಥಾಪಕರಾದ ಜೆಮ್ ‍ಷೆಡ್ ‍ಜಿ ನುಸರ್ ‍ವಾಂಜಿ ಟಾಟಾ ಅವರ ಜನ್ಮ ದಿನೋತ್ಸವವನ್ನು ಟಾಟಾ ಸಮೂಹದ ವಿವಿಧ ಕಂಪೆನಿಗಳು ಮತ್ತು ಅಂಗಸಂಸ್ಥೆಗಳು ಭಿನ್ನವಾಗಿ ಸಂಭ್ರಮ ಸಡಗರದಿಂದ ಆಚರಿಸುತ್ತಿವೆ.

ಪ್ರಸ್ತುತ ಟಾಟಾ ಹೌಸಿಂಗ್ ಡೆವಲಪ್ ‍ಮೆಂಟ್ ಕಂಪೆನಿ ಲಿ. ಮತ್ತು ಟಾಟಾ ಕ್ಯಾಪಿಟಲ್ ಕಂಪೆನಿ ಜತೆಗೂಡಿ ವಿಶೇಷ ಕೊಡುಗೆಯ ಮೂಲಕ ದೇಶದ ನಾಗರಿಕರ "ಸ್ವಂತ ಮನೆ'ಯ ಕನಸನ್ನು ನನಸು ಮಾಡಲು ಮುಂದಾಗಿವೆ. ಮನೆಗೆ ನೀಡಬೇಕಾದ ಮುಂಗಡ ಹಣದಲ್ಲಿ ಕೇವಲ ಶೇ 3ರಷ್ಟು ಮೊತ್ತವನ್ನು ಮುಂಗಡವಾಗಿ ಪಾವತಿಸಿ ಗ್ರಾಹಕರು ತಮ್ಮ ಕನಸಿನ ಮನೆಯನ್ನು ಖರೀದಿಸಬಹುದಾಗಿದೆ. ಇಂಥದ್ದೊಂದು ಪ್ರಯತ್ನ ದೇಶದ ರಿಯಲ್ ಎಸ್ಟೇಟ್ ಉದ್ಯಮದಲ್ಲೇ ಮೊದಲನೆಯದಾಗಿದೆ.

ಇದೇ ಬಗೆಯ ಕೊಡುಗೆ ಮುಂದಿನ ಆರು ತಿಂಗಳುಗಳವರೆಗೂ ದೇಶದ ವಿವಿಧೆಡೆ ನಿರ್ಮಾಣಗೊಳ್ಳುತ್ತೊರುವ ಟಾಟಾ ಹೌಸಿಂಗ್ ಡೆವಲಪ್ ‍ಮೆಂಟ್ ಲಿ.ನ ವಿವಿಧ ಯೋಜನೆಗಳಿಗೂ ಶೇ 7ರಷ್ಟು ಮುಂಗಡಹಣ ಪಾವತಿ ಯೋಜನೆಯಡಿ ಮುಂದುವರಿಯಲಿದೆ. ಪ್ರಥಮ ಶ್ರೇಣಿಯ ಹಾಗೂ ಐಷಾರಾಮಿ ಮನೆಗಳನ್ನೂ ಗ್ರಾಹಕರು ಇಷ್ಟು ಕಡಿಮೆ ಹಣ ಮುಂಗಡ ನೀಡುವ ಮೂಲಕ ತಮ್ಮದಾಗಿಸಿಕೊಳ್ಳಬಹುದಾಗಿದೆ.

Tata Housing joins Tata Capital to celebrate group Founder's Day

ಈ ಅಚ್ಚರಿದಾಯಕ ವಿಶೇಷ ಕೊಡುಗೆ 2014ರ ಮಾರ್ಚ್ 1 ರಿಂದ 3ವರೆಗೆ ಮಾತ್ರ (ಕೇವಲ ಮೂರು ದಿನ). ಅದೂ ಟಾಟಾ ಹೌಸಿಂಗ್ ಲಿ.ನ ಆಯ್ದ ವಸತಿ ಸಂಕೀರ್ಣ ಯೋಜನೆಗಳಿಗೆ ಮಾತ್ರ ಅನ್ವಯ. ಬೆಂಗಳೂರಿನಲ್ಲಿ "ದಿ ಪ್ರೊಮೊಂಟ್", ಭುವನೇಶ್ವರದಲ್ಲಿ "ಅರಿಯಾನ", ಮುಂಬೈನಲ್ಲಿ "ಅಮಂತ್ರಾ" ಮತ್ತು "ಗೇಟ್ ವೇ ಟವರ್ಸ್", ಕಸೌಲಿಯಲ್ಲಿ "ಮಿಸ್ಟ್" ಮತ್ತು ಗುಡಗಾವ್ ‍ನಲ್ಲಿ "ಪ್ರಿಮಂತಿ" ವಸತಿ ಸಂಕೀರ್ಣಗಳಲ್ಲಿ ಈ ವಿಶೇಷ ಮುಂಗಡ ಪಾವತಿ ಯೋಜನೆಯಡಿ ಗ್ರಾಹಕರಿಗೆ ಮನೆಗಳು ಖರೀದಿಗೆ ಲಭ್ಯವಿವೆ.

ಈ ಕೊಡುಗೆಗೆ ತನ್ನದೇ ಆದ ವಿಶೇಷ ನೆರವನ್ನೂ ನೀಡಲು ಮುಂದಾಗಿರುವ ಟಾಟಾ ಕ್ಯಾಪಿಟಲ್, ಶೇ 10.20ರಷ್ಟು (ಸದ್ಯ ಶೇ 10.50ರಷ್ಟು ಬಡ್ಡಿ ಇದೆ) ಕಡಿಮೆ ಬಡ್ಡಿದರದ ಸಾಲ ವಿತರಣೆಯ ಸಹಾಯ ಹಸ್ತವನ್ನೂ ಚಾಚಿದೆ. ಹಾಗೂ ಸಾಲದ ಅರ್ಜಿ ಪರಿಷ್ಕರಣೆ ಪ್ರಕ್ರಿಯೆಯ ಶುಲ್ಕವನ್ನು ರದ್ದುಗೊಳಿಸಿದೆ.

ಸ್ವಂತಕ್ಕೊಂದು ಮನೆ ಹೊಂದಲು ಬಯಸುವ ಗ್ರಾಹಕರಿಗೆ ಈ ಮೂರು ದಿನಗಳ ಅವಧಿಯಲ್ಲಿ ಎರಡೂ ವಿಶೇಷ ಕೊಡುಗೆಗಳು ಲಭ್ಯವಾಗಲಿದೆ. ಟಾಟಾ ಹೌಸಿಂಗ್ ‍ನಿಂದ ಶೇ 3ರಷ್ಟು ಮುಂಗಡ ಹಣ ಪಾವತಿ ಅವಕಾಶ ಮತ್ತು ಟಾಟಾ ಕ್ಯಾಪಿಟಲ್ ‍ನಿಂದ ಶೇ 10.20ರಷ್ಟು ಕಡಿಮೆ ಬಡ್ಡಿಯ ಗೃಹಸಾಲ ಹಾಗೂ ಸಾಲದ ಅರ್ಜಿ ಸಂಸ್ಕರಣೆ ಶುಲ್ಕದಲ್ಲೂ ವಿನಾಯಿತಿ.

ಟಾಟಾ ಸಮೂಹದ ಸಂಸ್ಥಾಪಕರ 175ನೇ ಜನ್ಮದಿನಾಚರಣೆ ಸಂದರ್ಭ ಕುರಿತು ಮಾತನಾಡಿದ ಟಾಟಾ ಹೌಸಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಬ್ರೊತಿನ್ ಬ್ಯಾನರ್ಜಿ,

"ಟಾಟಾ ಸಮೂಹದ ಸಂಸ್ಥೆಗಳು ಕಳೆದ 140 ವರ್ಷಗಳಿಂದಲೂ ದೇಶದ ನಾಗರಿಕ ಸಮುದಾಯದ ಜೀವನಶೈಲಿ ಉನ್ನತೀಕರಣಕ್ಕಾಗಿಯೇ ಶ್ರಮಿಸುತ್ತಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿನ ವಸತಿ ಯೋಜನೆಗಳಲ್ಲಿ ಪ್ರಥಮ ದರ್ಜೆಯ ಮನೆಗಳನ್ನು ಖರೀದಿಸುವಾಗ ಮುಂಗಡ ಹಣ ಪಾವತಿ ಪ್ರಮಾಣವೇ ಬಹಳಷ್ಟು ಜನರನ್ನು ಹಿಂಜರಿಯುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಸಂಸ್ಥಾಪಕ ಟಾಟಾ ಅವರ ಆದರ್ಶ ಮತ್ತು ಧ್ಯೇಯವನ್ನೇ ಮುಂದಿಟ್ಟುಕೊಂಡು ಟಾಟಾ ಹೌಸಿಂಗ್ ಡೆವಲಪ್‍ಮೆಂಟ್ ಕಂಪೆನಿ ಲಿ., ಈ ಬಾರಿ ಕಡಿಮೆ ಪ್ರಮಾಣದ ಮುಂಗಡ ಹಣ ಪಾವತಿಯ ಅವಕಾಶ ಒದಗಿಸಿದೆ. ಅಲ್ಲದೇ ಟಾಟಾ ಕ್ಯಾಪಿಟಲ್ ಸಂಸ್ಥೆಯ ಜತೆಗೂಡಿ ಎಲ್ಲ ವರ್ಗದವರಿಗೂ ಮನೆ ಖರೀದಿಸುವುದನ್ನು ಸುಲಭಗೊಳಿಸುತ್ತಿದೆ. ಅವರ ಸ್ವಂತ ಮನೆ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+