ಶುಕ್ರವಾರ ಬೆಳಗ್ಗಿನಿಂದಲೇ ಸನ್ ಟಿವಿ ಷೇರುಗಳು ಭರ್ಜರಿ ಏರಿಕೆ!

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 03: ಟೆಲಿಕಾಂ ಹಗರಣದಲ್ಲಿ ಮಾರನ್ ಸೋದರರಿಗೆ ಗುರುವಾರ ಶುಭ ಸುದ್ದಿ ಸಿಕ್ಕಿದ ಮೇಲೆ, ಮಾರನ್ ಬ್ರದರ್ಸ್ ಒಡೆತನದ ಸನ್ ಟಿವಿ ಷೇರುಗಳಿಗೆ ಶುಭಕಾಲ ಬಂದಿದೆ. ಶುಕ್ರವಾರದಂದು ಷೇರುಪೇಟೆಯಲ್ಲಿ ಸನ್ ಟಿವಿ ಷೇರುಗಳು ಶೇ25ರಷ್ಟು ಏರಿಕೆ ಕಂಡಿದೆ.

ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ಕಲಾನಿಧಿ ಮಾರನ್ ಹಾಗೂ ದಯಾನಿಧಿ ಮಾರನ್ ಅವರ ಮೇಲಿನ ದೋಷಾರೋಪಣವನ್ನು ಸಿಬಿಐ, ಗುರುವಾರದಂದು ರದ್ದುಗೊಳಿಸಿತ್ತು. ಜತೆಗೆ ಇದಕ್ಕೆ ಜಾರಿ ನಿರ್ದೇಶನಾಲಯದಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗದ ಕಾರಣ ಕೋರ್ಟಿನಿಂದ ಮಾರನ್ ಬ್ರದರ್ಸ್ ಗೆ ಒಳ್ಳೆ ಸುದ್ದಿ ಸಿಕ್ಕಿತ್ತು.

Sun TV shares soar 25%

ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರನ್ ಸೋದರರ ಮೇಲಿನ ದೋಷಾರೋಪಣ ಪಟ್ಟಿ ಕಳಚಿ ಬಿದ್ದಿದೆ. ಇದಕ್ಕೆ ಪೂರಕವಾಗಿ ಶುಕ್ರವಾರದಂದು ಬಿಎಸ್ ಇಯಲ್ಲಿ ಶೇ 21 ರಿಂದ 25ರಷ್ಟು ಸನ್ ಟಿವಿ ಷೇರುಗಳು ಮೇಲ್ಮುಖವಾಗಿ ಏರಿವೆ.

ಬಿಎಸ್ ಇನಲ್ಲಿ 607 ರು ನಂತೆ ವಹಿವಾಟು ಆರಂಭಿಸಿದ ಸನ್ ಟಿವಿ ಷೇರುಗಳು ಈ ಸಮಯಕ್ಕೆ (1.26 ನಿಮಿಷ) 23.33 % ಏರಿಕೆ ಕಂಡು 128.75 ರುಪಾಯಿ ಹೆಚ್ಚಿಸಿಕೊಂಡು 680.80ರಂತೆ ವಹಿವಾಟು ನಡೆಸಿದೆ.

ಇದೆ ರೀತಿ ಎನ್ ಎಸ್ ಇನಲ್ಲಿ ಶೇ 23.44ರಷ್ಟು ಏರಿಕೆ ಕಂಡು 680.95ರಂತೆ ವಹಿವಾಟು ನಡೆಸಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Sun TV Network Ltd shares surge 21% after special Central Bureau of Investigation (CBI) court on Thursday dropped all charges against former telecom minister Dayanidhi Maran and others accused in the Aircel-Maxis case.
Please Wait while comments are loading...