ಎರಡು ಸೆಷನ್ ನಲ್ಲಿ ಹೂಡಿಕೆದಾರರ ಸಂಪತ್ತು 10.50 ಲಕ್ಷ ಕೋಟಿ ಹೆಚ್ಚಳ
ಮುಂಬೈ, ಸೆಪ್ಟೆಂಬರ್ 23: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಎರಡೇ ಸೆಷನ್ ನಲ್ಲಿ 3000ಕ್ಕೂ ಹೆಚ್ಚು ಅಂಶಗಳಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ 20ನೇ ತಾರೀಕಿನಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ ಕಾರ್ಪೊರೇಟ್ ತೆರಿಗೆ ಕಡಿತದ ಉತ್ತೇಜನ ಕ್ರಮಕ್ಕೆ ಹೂಡಿಕೆ ವಲಯದಿಂದ ಭಾರೀ ಉತ್ಸಾಹ ಕಂಡುಬಂದಿದೆ.
ಎರಡು ಸೆಷನ್ ನಲ್ಲಿ ಹೂಡಿಕೆದಾರರ ಸಂಪತ್ತು 10.50 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿದೆ. ಇನ್ನು SIP ಮೂಲಕ ಹೂಡಿಕೆ ಮಾಡುವವರಿಗೆ NAV 10 ಪರ್ಸೆಂಟ್ ನಷ್ಟು ಏರಿಕೆಯಾಗಿದೆ. ಸೋಮವಾರದಂದು ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 1075.41 ಅಂಶ ಏರಿಕೆಯಾಗಿ, 39,090.03 ಅಂಶ ತಲುಪಿದೆ. ನಿಫ್ಟಿ 50 ಸೂಚ್ಯಂಕವು 326 ಅಂಶ ಏರಿಕೆಯಾಗಿ, 11,600.20 ಅಂಶವನ್ನು ತಲುಪಿದೆ.

ನಿಫ್ಟಿ ಟಾಪ್ ಗೇಯ್ನರ್ಸ್
ಬಿಪಿಸಿಎಲ್
ಬಜಾಜ್ ಫೈನಾನ್ಸ್
ಲಾರ್ಸನ್
ಅದಾನಿ ಪೋರ್ಟ್ಸ್
ಏಷ್ಯನ್ ಪೇಂಟ್ಸ್
ಸೆನ್ಸೆಕ್ಸ್ ಟಾಪ್ ಗೇಯ್ನರ್ಸ್
ಬಜಾಜ್ ಫೈನಾನ್ಸ್
ಲಾರ್ಸನ್
ಏಷ್ಯನ್ ಪೇಂಟ್ಸ್
ಐಟಿಸಿ
ಆಕ್ಸಿಸ್ ಬ್ಯಾಂಕ್












Click it and Unblock the Notifications