ಬೆಂಗಳೂರಿಗೆ ಬಂತು ಎಸ್ಬಿಐ ಇನ್ಟಚ್ ಡಿಜಿಟಲ್ ಸ್ಟೋರ್

ಮುಂಬೈ, ಜು.2: ದೇಶದಲ್ಲಿ ವಿಸ್ತೃತ ಜಾಲ ಹೊಂದಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌, ಪ್ರಸ್ತುತ ಆರ್ಥಿಕ ವರ್ಷ ಮುಗಿಯುವುದರೊಳಗೆ 5 ಸಾವಿರ ಎಟಿಎಂಗಳನ್ನು ಆರಂಭಿಸಲಿದೆ.

ದೇಶದಲ್ಲಿ ಎಟಿಎಂ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಇತರ ಬ್ಯಾಂಕ್‌ಗಳ ಸೇವೆ ಪಡೆದು ಹಣ ಪಾವತಿ ಮಾಡುವುದನ್ನು ತಡೆಯುವ ಉದ್ದೇಶದಿಂದ 3 ರಿಂದ 5 ಸಾವಿರ ಎಟಿಎಂ ತೆರೆಯಲು ನಿರ್ಧರಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎ.ಕೃಷ್ಣಕುಮಾರ್‌ ತಿಳಿಸಿದ್ದಾರೆ.

ಎಸ್‌ಬಿಐ ಸುಮಾರು 43,515 ಎಟಿಎಂಗಳನ್ನು ಹೊಂದಿದೆ. ಆದರೆ, ಇತರ ಬ್ಯಾಂಕ್‌ಗಳ ಎಟಿಎಂ ಬಳಸಿದ್ದಕ್ಕಾಗಿ 991 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಕೃಷ್ಣಕುಮಾರ್ ವಿವರಿಸಿದರು.

State Bank of India plans to add up to 5,000 ATMs in FY15

ಆರ್ ಬಿಐ ನಿಯಮದ ಪ್ರಕಾರ ಇತರೆ ಬ್ಯಾಂಕ್‌ಗಳ ಎಟಿಎಂ ಬಳಸಲು ಮಾಸಿಕ ಕೇವಲ 5 ಬಾರಿ ಅವಕಾಶವಿದೆ. ಆದರೂ ಎಟಿಎಂ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರಸ್ತುತ 1 ಸಾವಿರ ಹೊಸ ಶಾಖೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

ಹೊಸ ಮಾದರಿ ಎಟಿಎಂ: ಬೆಂಗಳೂರಿನಲ್ಲಿ ಎಟಿಎಂ ದರೋಡೆಯಾದ ಬಳಿಕ ಎಟಿಎಂ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರಿಂದ ಬ್ಯಾಂಕ್‌ ವೆಚ್ಚ ಹೆಚ್ಚಳವಾಗಿದೆ ಎಂದು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ಎಸ್ ಬಿಐನ 60ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಹೊಸ ಡಿಜಿಟಲ್ ಆವಿಷ್ಕಾರ ಯಂತ್ರ ಎಸ್ ಬಿಐ ಇನ್ ಟಚ್ ಅನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಾರ್ಪಣೆ ಮಾಡಿದ ನಂತರ ಎಸ್ ಬಿಐ ಚೇರ್ಮನ್ ಅರುಂಧತಿ ಮಾತನಾಡಿದರು.

ಭಾರತದ ಅತಿದೊಡ್ಡ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7,000ಕ್ಕೂ ಅಧಿಕ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಇತ್ತೀಚಿಗೆ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಅರುಂಧತಿ ಅವರು ಪುನರುಚ್ಚರಿಸಿದರು. [ಉದ್ಯೋಗಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+