ಮೈಕ್ರೋಸಾಫ್ಟ್ ಬೆಂಗಳೂರು ಲ್ಯಾಬಿಗೆ ಶ್ರೀರಾಮ್ 'ಎಂಡಿ'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಮೈಕ್ರೋಸಾಫ್ಟ್ ಇಂಡಿಯಾ ಲ್ಯಾಬ್ ನ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀರಾಮ್ ರಾಜಮಣಿ ಅವರನ್ನು ನೇಮಿಸಿ ಬುಧವಾರ (ಆಗಸ್ಟ್ 11) ಸಂಸ್ಥೆ ಆದೇಶ ಹೊರಡಿಸಿದೆ.

ಮೈಕ್ರೋಸಾಫ್ಟ್ ಸಂಸ್ಥೆಯ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗ ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.

ಚಂದು ಥೆಕ್ಕತ್ ಅವರ ಬದಲಿಗೆ ಇನ್ನು ಎರಡು ವರ್ಷಗಳ ಕಾಲ ಶ್ರೀರಾಮ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.[ಮೈಕ್ರೋಸಾಫ್ಟ್ ಸಿಇಒ ಮೆಚ್ಚಿದ 8 ವರ್ಷ ಅದ್ಭುತ ಬಾಲಕ]

Sriram Rajamani appointed MD of Microsoft's India lab

ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಉನ್ನತ ತಂತ್ರಜ್ಞಾನ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ ಎಂದು ಮೈಕ್ರೋಸಾಫ್ಟ್ ರಿಸರ್ಚ್ ಲ್ಯಾಬ್ಸ್ ನ ಉಪಾಧ್ಯಕ್ಷ(ಕಾರ್ಪೊರೇಟ್ಸ್) ಜಾನೆಟ್ ವಿಂಗ್ ಹೇಳಿದ್ದಾರೆ.[ಲಿಂಕ್ಡಿನ್ ಖರೀದಿಸಿದ ಮೈಕ್ರೋಸಾಫ್ಟ್]

ಮೈಕ್ರೋಸಾಫ್ಟ್ ಲ್ಯಾಬ್ಸ್ ನಲ್ಲಿ ಸಂಶೋಧಕರಾಗಿರುವ ರಾಜಮಣಿ ಅವರು ಈ ಮುಂಚೆ ಸಾಫ್ಟ್ ವೇರ್ ಪ್ರೊಡೆಕ್ಟಿವಿಟಿ ಟೂಲ್ ಗ್ರೂಪ್ ನ ಮುಖ್ಯಸ್ಥರಾಗಿ ಮೈಕ್ರೋಸಾಫ್ಟ್ ನ ರೆಡ್ಮಂಡ್ ರಿಸರ್ಚ್ ಲ್ಯಾಬ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಶ್ರೀರಾಮ್ ಬಗ್ಗೆ ಹೆಚ್ಚಿನ ವಿವರಗಳಿಗೆ ಮೈಕ್ರೋಸಾಫ್ಟ್ ಪುಟ ವೀಕ್ಷಿಸಿ (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Microsoft today announced the appointment of Sriram Rajamani as new managing director of its India lab. Based in Bengaluru, he will spearhead Microsoft India's continued focus on world-class research, innovation and collaboration with the scientific community, the company said in a release.
Please Wait while comments are loading...