ಫಾರ್ಚ್ಯೂನ್ ರೈಸ್ ಬ್ರಾನ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ಮುಂದುವರಿಕೆ: ಅದಾನಿ ವಿಲ್ಮರ್ Dy CEO

ನವದೆಹಲಿ, ಜನವರಿ 05: ಫಾರ್ಚ್ಯೂನ್ ರೈಸ್ ಬ್ರಾನ್ ಅಡುಗೆ ಆಯಿಲ್‌ನ ಬ್ರಾಂಡ್‌ ಅಂಬಾಸಿಡರ್ ಆಗಿದ್ದ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಂಬಾಸಿಡರ್ ಆಗಿ ಮುಂದುವರೆಯಲಿದ್ದಾರೆ ಎಂದು ಅದಾನಿ ವಿಲ್ಮರ್ ಡೆಪ್ಯುಟಿ ಸಿಇಒ ಆಂಗ್ಷು ಮಲ್ಲಿಕ್ ಹೇಳಿದ್ದಾರೆ.

ಸೌರವ್ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾದ ಬಳಿಕ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ತೀವ್ರ ಚರ್ಚೆಗೆ ಒಳಗಾಗಿದ್ದ ಫಾರ್ಚ್ಯೂನ್ ರೈಸ್ ಬ್ರಾನ್ ಅಡುಗೆ ಆಯಿಲ್ ಜಾಹೀರಾತುಗಳನ್ನು ಅದಾನಿ ವಿಲ್ಮರ್ ಎಲ್ಲ ವೇದಿಕೆಗಳಿಂದಲೂ ತೆರವುಗೊಳಿಸಿದೆ ಎಂದು ವರದಿಯಾಗಿದೆ. ಈ ಜಾಹೀರಾತಿನಲ್ಲಿ ಅಡುಗೆ ಆಯಿಲ್ ಕುರಿತು ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದ ಗಂಗೂಲಿಯವರು ಹೃದಯಾಘಾತಕ್ಕೆ ಒಳಗಾಗಿದ್ದು ಟೀಕೆಗೆ ಗುರಿಯಾಗಿದೆ.

ಆದರೆ ಗಂಗೂಲಿಯವರು ಸದ್ಯ ತಾತ್ಕಾಲಿಕ ವಿರಾಮವನ್ನು ತೆಗೆದುಕೊಂಡಿದ್ದು, ತಮ್ಮ ಬ್ರಾಂಡ್‌ನ ಅಂಬಾಸಿಡರ್ ಆಗಿ ಮುಂದುವರೆಯಲಿದ್ದಾರೆ ಎಂದು ಮಲ್ಲಿಕ್ ಹೇಳಿದ್ದಾರೆ.

Sourav Ganguly Will Continue To Be Our Brand Ambassador: Adani Wilmar

''ರೈಸ್ ಬ್ರಾನ್ ಎಣ್ಣೆ ವಿಶ್ವದ ಅತ್ಯಂತ ಆರೋಗ್ಯಕರ ತೈಲವಾಗಿದೆ. ಇದು ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ರೈಸ್ ಬ್ರಾನ್ ಎಣ್ಣೆಯಲ್ಲಿರುವ ಗಾಮಾ ಒರಿಜೋನಲ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸುತ್ತದೆ. ಸೌರವ್ ಗಂಗೂಲಿ ನಮ್ಮ ಬ್ರಾಂಡ್ ರಾಯಭಾರಿಯಾಗಿರುವುದು ನಮ್ಮ ಅದೃಷ್ಟ. ರೈಸ್ ಬ್ರಾನ್ ಎಣ್ಣೆ ಔಷಧಿಯಲ್ಲ ಆದರೆ ಅಡುಗೆ ಎಣ್ಣೆ ಮಾತ್ರ'' ಎಂದು ಮಲ್ಲಿಕ್ ವಿವರಿಸಿದ್ದಾರೆ.

"ಆಹಾರ ಮತ್ತು ಆನುವಂಶಿಕ ಸಮಸ್ಯೆಗಳು ಸೇರಿದಂತೆ ಹೃದಯ ಕಾಯಿಲೆಗಳಿಗೆ ಪರಿಣಾಮ ಬೀರುವ ಹಲವಾರು ಅಂಶಗಳಿವೆ. ನಾವು ಸೌರವ್ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಅವರು ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯುತ್ತಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ ಮತ್ತು ಯಾರಿಗೂ ಈ ರೀತಿ ಆಗಬಾರದು'' ಎಂದು ಹೇಳಿದ್ದಾರೆ.

ಸೌರವ್ ಗಂಗೂಲಿ, ಜನವರಿ 2 ರಂದು ಬೆಳಿಗ್ಗೆ 11 ಗಂಟೆಗೆ ಮನೆಯ ಜಿಮ್ನಾಷಿಯಂನಲ್ಲಿ ವ್ಯಾಯಾಮ ಮಾಡುವಾಗ ಅಸ್ವಸ್ಥರಾದರು. ಇದನ್ನು ಅನುಸರಿಸಿ ವೈದ್ಯರು ಅವರಿಗೆ ಆಂಜಿಯೋಪ್ಲ್ಯಾಸ್ಟಿ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+