ಟೆಲಿಕಾಂ ದರ ಸಮರ: ಬಿಎಸ್ಎನ್ನೆಲ್ ನಿಂದ ಹೊಸ ಯೋಜನೆ
ಬೆಂಗಳೂರು, ಮಾರ್ಚ್ 30: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿ ಎಸ್ ಎನ್ ಎಲ್) ಹೊಸ ಪ್ರಿಪೇಯ್ಡ್ ಯೋಜನೆ ಶುರು ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
118 ರೂಪಾಯಿ ಹೊಸ ಎಸ್ಟಿವಿ ಯೋಜನೆಯು 28 ದಿನಗಳ ಕಾಲ ಮಾನ್ಯತೆ ಹೊಂದಿದೆ. ಬಳಕೆದಾರರಿಗೆ 1ಜಿಬಿ ಡೇಟಾ ಹಾಗೂ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗಲಿದೆ. ವಿಶೇಷವಾಗಿ ರಿಂಗ್ ಟೋನ್ ಸೌಲಭ್ಯಗಳು ತಮಿಳುನಾಡು ಗ್ರಾಹಕರಿಗೆ ಲಭ್ಯವಾಗಲಿದೆ.
ಏಪ್ರಿಲ್ 1, 2018ರಿಂದ ಇದು ಜಾರಿಗೆ ಬರಲಿದೆ.
ರೋಮಿಂಗ್ ಕೂಡ ಅನಿಯಮಿತವಾಗಿರಲಿದೆ. ವೈಸ್ ಕಾಲ್ ಮಿತಿ ಬಗ್ಗೆ ಬಿಎಸ್ ಎನ್ ಎಲ್ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೆ, 379, 551 ಹಾಗೂ 399 ರುಗಳ ಪೋಸ್ಟ್ ಪೇಯ್ಡ್ ಯೋಜನೆಗಳನ್ನು ಬದಲಾಯಿಸಿದೆ.

ಜಿಯೋ 98 ರೂಪಾಯಿ ಯೋಜನೆಗೆ ಪೈಪೋಟಿ ನೀಡಲು ಈ ಯೋಜನೆಯನ್ನು ಬಿಎಸ್ ಎನ್ನೆಲ್ ತಂದಿದೆ. ಜಿಯೋ 98ರಲ್ಲಿ ಅನಿಯಮಿತ ವಾಯ್ಸ್ ಕಾಲ್ ನೀಡುತ್ತಿದೆ. ಜೊತೆಗೆ 2 ಜಿಬಿ ಡೇಟಾ ಹಾಗೂ 300 ಎಸ್ಎಂಎಸ್. ಏರ್ಟೆಲ್ 93 ರೂಪಾಯಿ ಯೋಜನೆ ಕೂಡಾ ಇದೇ ರೀತಿ ಸೌಲಭ್ಯ ಹೊಂದಿದೆ.











Click it and Unblock the Notifications