Silver Price Jan 28: ಬೆಳ್ಳಿ ಬೆಲೆ 4 ಲಕ್ಷ ರೂ. ಸಮೀಪ, ಬೆಳ್ಳಿ ಬೆಲೆ ಹೆಚ್ಚಳಕ್ಕೆ 5 ಕಾರಣಗಳು
Silver Price Jan 28: ಚಿನ್ನದೊಂದಿಗೆ ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಕೆಲವೇ ದಿನಗಳಲ್ಲಿ ಬೆಳ್ಳಿ ಬೆಲೆಯು ಬರೋಬ್ಬರಿ 1 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಬೆಳ್ಳಿ ಬೆಲೆಯು ಇದೀಗ ಬರೋಬ್ಬರಿ 4 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. ಬೆಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣಗಳೇನು ಹಾಗೂ ಜನವರಿ 28ರಂದು ಬೆಳ್ಳಿ ಬೆಲೆ ಎಷ್ಟಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಸಾಮಾನ್ಯವಾಗಿ ಚಿನ್ನದ ಬೆಲೆ ಹೆಚ್ಚಳವಾದಾಗಲೂ ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗುತ್ತಿರಲಿಲ್ಲ. ಬೆಳ್ಳಿ ಬೆಲೆ ಹೆಚ್ಚಳವಾದರೂ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿತ್ತು. ಆದರೆ ಕಳೆದ ಐದಾರು ತಿಂಗಳುಗಳಿಂದ ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದೀಗ ಬೆಳ್ಳಿ ಬೆಲೆಯು ಒಂದು ಕೆ.ಜಿಗೆ 4 ಲಕ್ಷ ರೂಪಾಯಿ ಸಮೀಪಕ್ಕೆ ಬಂದು ನಿಂತಿದೆ. ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಸಾರ್ವತ್ರಿಕ ದಾಖಲೆಯನ್ನು ಬರೆದಿವೆ. ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳ್ಳಿ ಮತ್ತು ಚಿನ್ನದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಬೆಳ್ಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ
ಅಮೆರಿಕದ ನೀತಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಹಾಗೂ ಕಾರ್ಯವೈಖರಿಯು ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳಕ್ಕೆ ಪ್ರಮುಖಕಾರಣವಾಗಿದೆ. ಕೆನಡಾ ಸೇರಿದಂತೆ ವಿವಿಧ ದೇಶಗಳ ಮೇಲೆ ಭಾರೀ ಸುಂಕ ವಿಧಿಸುವುದಾಗಿ ಟ್ರಂಪ್ ಹೆಚ್ಚರಿಸಿದ್ದಾರೆ. ಭಾರತ - ಐರೋಪ ಒಕ್ಕೂಟಗಳ ಒಪ್ಪಂದವೂ ಡೊನಾಲ್ಡ್ ಟ್ರಂಪ್ ಕಣ್ಣು ಕೆಂಪಗಾಗಿಸಿದೆ. ಇನ್ನು ಗ್ರೀನ್‌ಲ್ಯಾಂಡ್ ಸಮಸ್ಯೆ - ನ್ಯಾಟೋ ಭಿನ್ನಾಭಿಪ್ರಾಯವೂ ಸಹ ಬೆಳ್ಳಿ ಬೆಲೆ ಗಗನಮುಖಿಯಾಗುವುದಕ್ಕೆ ಕಾರಣವಾಗಿದೆ.
ಸುರಕ್ಷಿತ ಹೂಡಿಕೆ: ಚಿನ್ನದಂತೆಯೇ ಬೆಳ್ಳಿ ಬೆಲೆಯು ಸುರಕ್ಷಿತ ಎನ್ನುವ ಭಾವನೆ ಹೂಡಿಕೆದಾರರಲ್ಲಿ ಬಂದಿದೆ. ಈ ಕಾರಣಕ್ಕೆ ಚಿನ್ನ ಪ್ರಿಯರು ಸಹ ಬೆಳ್ಳಿಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ. ಬೆಳ್ಳಿ ಬೆಲೆಯು ಮುಂದಿನ ದಿನಗಳಲ್ಲಿ ಇಳಿಕೆಯಾದರೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಹೂಡಿಕೆದಾರರಲ್ಲಿ ಇದೆ.
ಬೆಳ್ಳಿ ಬೆಲೆ ಹೆಚ್ಚಾಗುವ ನಿರೀಕ್ಷೆ
ಇನ್ನು ಬೆಳ್ಳಿ ಬೆಲೆ ಹೆಚ್ಚಳವಾಗುವುದಕ್ಕೆ ಮೂರನೇ ಹಾಗೂ ಪ್ರಮುಖ ಕಾರಣವೆಂದರೆ ಬೆಳ್ಳಿ ಬೆಲೆಯು ಇದೀಗ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾದರೂ ಅಲ್ಪ ಪ್ರಮಾಣದಲ್ಲಿ ಬೆಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಅಮೆರಿಕನ್ ಡಾಲರ್ ಮೌಲ್ಯ ಕುಸಿತ, ಅಮೆರಿಕನ್ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯ ಕುಸಿತ, ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಸುರಕ್ಷಿತ ಹೂಡಿಕೆಗಳು ಸೇರಿದಂತೆ ಹಲವು ಕಾರಣಗಳಿಗೆ ಬೆಳ್ಳಿಯ ಬೆಲೆಯು ಹೆಚ್ಚಳವಾಗುತ್ತಿದೆ.
ಬೆಳ್ಳಿ ಬೆಲೆ ಕೆಲವೇ ದಿನಗಳಲ್ಲಿ ಶೇ 60% ಹೆಚ್ಚಳ
ಇನ್ನು ಬೆಳ್ಳಿ ಬೆಲೆಯು ಕೆಲವೇ ದಿನಗಳಲ್ಲಿ ಬರೋಬ್ಬರಿ ಶೇ60ರಷ್ಟು ಹೆಚ್ಚಳವಾಗಿದೆ. ಜನವರಿ 1, 2026ರಂದು ಬೆಳ್ಳಿ ಬೆಲೆಯು 2,39,000 ರೂಪಾಯಿ ಇತ್ತು. ಇದೀಗ ಜನವರಿ 28ರಂದು ಬೆಳ್ಳಿ ಬೆಲೆಯು ಒಂದು ಕೆ.ಜಿಗೆ ಬರೋಬ್ಬರಿ 3.80 ಲಕ್ಷ ರೂಪಾಯಿ ಆಗಿದೆ.
Silver Price Jan 28 ಬೆಳ್ಳಿ ಬೆಲೆ ಜನವರಿ 28ರಂದು ಎಷ್ಟಿದೆ.
ಇನ್ನು ಬೆಳ್ಳಿ ಬೆಲೆಯು ಜನವರಿ 28ರಂದು 1 ಗ್ರಾಂಗೆ 380 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 3,80,000 ರೂಪಾಯಿ ಆಗಿದೆ. ಜನವರಿ 27ರ ಬೆಳ್ಳಿ ಬೆಲೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ ಬರೋಬ್ಬರಿ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications