Silver Price: ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, 80 ಸಾವಿರಕ್ಕಿಂತ ಕಡಿಮೆ ಆಯ್ತು ಬೆಳ್ಳಿ ರೇಟ್!

ಚಿನ್ನ & ಬೆಳ್ಳಿ ಎರಡೂ ನಂಬಿಕೆಯ ವಸ್ತುಗಳು, ಇದೇ ಕಾರಣಕ್ಕೆ ಭಾರತೀಯರು ಈ ಎರಡು ಲೋಹಗಳ ಮೇಲೆ ಕಣ್ಣು ಮುಚ್ಚಿಕೊಂಡು ಹೂಡಿಕೆ ಮಾಡುತ್ತಾರೆ. ಚಿನ್ನ & ಬೆಳ್ಳಿ ಲೋಹಗಳ ಮೇಲೆ ಎರಡು ರೀತಿ ಹೂಡಿಕೆ ಮಾಡಬಹುದು, ಒಂದು ನೇರವಾಗಿ ಚಿನ್ನ ಅಥವಾ ಬೆಳ್ಳಿಯ ಲೋಹ ಖರೀದಿ ಮಾಡಬಹುದು. ಅಥವಾ ಬಾಂಡ್‌ಗಳ ರೂಪದಲ್ಲಿ ಕೂಡ ನೂರಾರು ಕೆಜಿ ಮೇಲೆ ಹೂಡಿಕೆ ಮಾಡುತ್ತಾರೆ ಶ್ರೀಮಂತರು. ಹೀಗೆ ಭಾರತದಲ್ಲಿ ಚಿನ್ನಕ್ಕಿಂತ ಬೆಳ್ಳಿ ಬೆಲೆಯು ಭಾರಿ ಏರಿಕೆ ಕಾಣುತ್ತಿದೆ ಎಂಬ ಚಿಂತೆ ಶುರುವಾಗಿತ್ತು. ಆದರೆ ಇದೀಗ ಬೆಳ್ಳಿ ಬೆಲೆ ಭಾರಿ ಕುಸಿತ ಕಂಡಿದೆ!

ಚಿನ್ನ ಹಾಗೂ ಬೆಳ್ಳಿ ಇದೀಗ ಅದೆಷ್ಟು ಮುಖ್ಯ ಎಂದರೆ, ಚಿನ್ನ & ಬೆಳ್ಳಿ ಇಲ್ಲದೆ ಬಹುತೇಕ ವಸ್ತುಗಳನ್ನ ತಯಾರಿಸಲು ಆಗುವುದೇ ಇಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಮತ್ತು ಬೆಳ್ಳಿ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಮೊಬೈಲ್ ಸೇರಿ ಹಲವು ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೆ ಕೂಡ ಚಿನ್ನ & ಬೆಳ್ಳಿಯು ಬೇಕೆ ಬೇಕು. ಹೀಗಾಗಿ ಚಿನ್ನ & ಬೆಳ್ಳಿ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿವೆ. ಇದೇ ಕಾರಣಕ್ಕೆ ಕೆಲವೇ ದಿನಗಳ ಹಿಂದೆ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,00,000 ರೂಪಾಯಿಯನ್ನ ದಾಟಿ ಹೋಗಿತ್ತು. ಆದರೆ ಇದೀಗ ಭಾರಿ ದೊಡ್ಡ ಕುಸಿತ ಕಂಡಿದೆ ಬೆಳ್ಳಿ.

Silver Price In Karnataka On 12 August 2024

ಬೆಳ್ಳಿ ಬೆಲೆ ಇಷ್ಟಿದೆ ಈಗ!

ಅಂದಹಾಗೆ ಬೆಳ್ಳಿ ಬೆಲೆ ಇದೀಗ ಬೆಂಗಳೂರು & ಕರ್ನಾಟಕದಲ್ಲಿ ಪ್ರತಿ ಕೆಜಿಗೆ 79,000 ರೂ. ಬೆಲೆಗೆ ಸಿಗುವಂತಾಗಿದೆ. ಮತ್ತೊಂದು ಕಡೆ ಪ್ರತಿ 100 ಗ್ರಾಂ ಬೆಳ್ಳಿ ಬೆಲೆ 7900 ರೂಪಾಯಿ ಆಗಿದೆ. ಬೆಳ್ಳಿ ಬೆಲೆ ಹೀಗೆ ಕುಸಿತ ಕಂಡಿದ್ದರೆ, ಚಿನ್ನದ ಬೆಲೆಯಲ್ಲಿ ಮಾತ್ರ ಈಗ ಭಾರಿ ಏರಿಕೆ ಆಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ, ಏರಿಕೆ ಬಳಿಕ ಹೊಸ ಹಂತ ತಲುಪಿದೆ. 100 ಗ್ರಾಂಗೆ 2,700 ರೂಪಾಯಿ ಏರಿಕೆ ಕಂಡಿದೆ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ. ಹೀಗೆ ಶುದ್ಧ ಚಿನ್ನದ ಬೆಲೆಯು ಪ್ರತಿ 100 ಗ್ರಾಂಗೆ 7,05,800 ರೂಪಾಯಿ ಆಗಿದೆ. ಇದರ ಜೊತೆಗೆ, ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 70,580 ರೂಪಾಯಿಗೆ ಏರಿಕೆ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ...

ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಏರಿಕೆ ಕಂಡು, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 2,500 ರೂಪಾಯಿ ಏರಿಕೆ ಆಗಿದೆ. ಈ ಮೂಲಕ, ಪ್ರತಿ 10 ಗ್ರಾಂಗೆ ಆಭರಣ ಚಿನ್ನದ ಬೆಲೆ ಈಗ 250 ರೂಪಾಯಿ ಏರಿಕೆ ಆಗಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 64,700 ರೂಪಾಯಿಗೆ ಮಾರಾಟ ಆಗುತ್ತಿದೆ ಈ ಮೂಲಕ ಚಿನ್ನ ಖರೀದಿಗೆ ಕಾದು ಕೂತಿದ್ದ ಜನರಿಗೆ ಶಾಕ್ ಸಿಕ್ಕಂತಾಗಿದೆ. ಆದರೆ ಇದೇ ಸಮಯದಲ್ಲಿ ಬೆಳ್ಳಿ ಬೆಲೆ ವಿಚಾರದಲ್ಲಿ, ಖುಷಿಯ ಸುದ್ದಿ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+