Get Updates
Get notified of breaking news, exclusive insights, and must-see stories!

ಷೇರುಪೇಟೆ: ಸೆನ್ಸೆಕ್ಸ್ 222 ಪಾಯಿಂಟ್ಸ್ ಏರಿಕೆ, ನಿಫ್ಟಿ 66 ಪಾಯಿಂಟ್ಸ್ ಹೆಚ್ಚಳ

ನವದೆಹಲಿ, ಫೆಬ್ರವರಿ 11: ಭಾರತೀಯ ಷೇರುಪೇಟೆಯು ಕಳೆದ ಎರಡು ವಹಿವಾಟಿನಲ್ಲಿ ಬಲವರ್ಧನೆಗೆ ಸಾಕ್ಷಿಯಾದ ಬಳಿಕ ಗುರುವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 222 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 66 ಪಾಯಿಂಟ್ಸ್ ಹೆಚ್ಚಳವಾಗಿದೆ.

ಬಿಎಸ್‌ಇ ಸೂಚ್ಯಂಕ 222.13 ಪಾಯಿಂಟ್ಸ್‌ ಅಥವಾ ಶೇಕಡಾ 0.43ರಷ್ಟು ಏರಿಕೆಗೊಂಡು 51,531.52 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ 66.80 ಪಾಯಿಂಟ್ಸ್‌ ಅಥವಾ ಶೇಕಡಾ 0.44ರಷ್ಟು ಹೆಚ್ಚಾಗಿ 15,173.30 ಪಾಯಿಂಟ್ಸ್‌ ಮುಟ್ಟಿದೆ.

ಹಿಂಡಾಲ್ಕೊ ಇಂಡಸ್ಟ್ರೀಸ್, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಅದಾನಿ ಪೋರ್ಟ್ಸ್ ಮತ್ತು ಗೇಲ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಈಚರ್ ಮೋಟಾರ್ಸ್, ಟೈಟಾನ್ ಕಂಪನಿ, ಎನ್‌ಟಿಪಿಸಿ, ಎಲ್ ಆಂಡ್ ಟಿ ಮತ್ತು ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳು ನಷ್ಟ ಅನುಭವಿಸಿದೆ.

Sensex Nifty End Higher Amid Volatility

ಆಟೋ ಮತ್ತು ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.4 ರಿಂದ 1ರಷ್ಟು ಏರಿಕೆಯಾಗಿದೆ. ಇನ್ನು ಭಾರತೀಯ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 72.86 ರೂಪಾಯಿಗೆ ತಲುಪಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+