• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಷೇರುಪೇಟೆ ಮತ್ತಷ್ಟು ಜಿಗಿತ: ಸೆನ್ಸೆಕ್ಸ್ 380 ಪಾಯಿಂಟ್ಸ್‌ ಏರಿಕೆ

|

ನವದೆಹಲಿ, ಡಿಸೆಂಬರ್ 28: ಭಾರತೀಯ ಷೇರುಪೇಟೆಯು ಸೋಮವಾರ ಮತ್ತಷ್ಟು ಚೇತರಿಕೆ ಸಾಧಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 380 ಪಾಯಿಂಟ್ಸ್‌ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 123 ಪಾಯಿಂಟ್ಸ್‌ ಜಿಗಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 380.21 ಪಾಯಿಂಟ್ಸ್‌ ಅಥವಾ ಶೇಕಡಾ 0.81ರಷ್ಟು ಏರಿಕೆಗೊಂಡು 47,353.75 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 123.95 ಪಾಯಿಂಟ್ಸ್ ಅಥವಾ ಶೇಕಡಾ 0.95ರಷ್ಟು ಹೆಚ್ಚಳಗೊಂಡು 13,873.20 ಪಾಯಿಂಟ್ಸ್‌ ಮುಟ್ಟಿದೆ. ಇಂದು 1990 ಷೇರುಗಳು ಲಾಭಗಳಿಸಿದರೆ, 965 ಷೇರುಗಳು ಇಳಿಕೆಗೊಂಡಿದೆ ಮತ್ತು 177 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

2021ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಪ್ರಮುಖ IPOಗಳ ಮಾಹಿತಿ ಇಲ್ಲಿದೆ

ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಟೈಟಾನ್ ಮತ್ತು ಎಸ್‌ಬಿಐ ಲೈಫ್ ಇನ್ಶುರೆನ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಸನ್ ಫಾರ್ಮಾ, ಎಚ್‌ಯುಎಲ್, ಶ್ರೀ ಸಿಮೆಂಟ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಸಿಪ್ಲಾ ನಷ್ಟಗೊಂಡಿವೆ.

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತದ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ 73.57 ಕ್ಕೆ ತಲುಪಿದೆ. ಇದು ಗುರುವಾರ 73.54 ರ ಮುಕ್ತಾಯದ ವಿರುದ್ಧ ಪ್ರತಿ ಡಾಲರ್‌ಗೆ 73.52 ರಂತೆ ವಹಿವಾಟು ತೆರೆಯಿತು ಮತ್ತು 73.46-73.61 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

ರೇಷ್ಮೆಯಂಥ ನುಣುಪಾದ ಕೇಶರಾಶಿಗೆ ಬಳಸಿ ಎಲ್ಡಿಯಾ ಕೊಬ್ಬರಿಎಣ್ಣೆ

English summary
Market benchmarks Sensex and Nifty ended in the green for the 4th consecutive session amid positive global cues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X