ಮತ್ತಷ್ಟು ಎತ್ತರಕ್ಕೆ ತಲುಪಿದ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಜಿಗಿತ

ನವದೆಹಲಿ, ಡಿಸೆಂಬರ್ 29: ಭಾರತೀಯ ಷೇರುಪೇಟೆಯು ಸತತ ಏರಿಕೆ ದಾಖಲಿಸಿದ್ದು ಮಂಗಳವಾರ ಮತ್ತಷ್ಟು ಎತ್ತರಕ್ಕೆ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 259 ಪಾಯಿಂಟ್ಸ್ ಏರಿಕೆ ದಾಖಲಿಸಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,000 ಗಡಿ ದಾಟಿ ಕೊನೆಗೆ 59 ಪಾಯಿಂಟ್ಸ್‌ ಏರಿಕೆಗೊಂಡು ವಹಿವಾಟು ಕೊನೆಗೊಳಿಸಿತು.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 259.33 ಪಾಯಿಂಟ್‌ ಅಥವಾ ಶೇಕಡಾ 0.55ರಷ್ಟು ಏರಿಕೆಗೊಂಡು 47,613.08 ಕ್ಕೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 59.40 ಪಾಯಿಂಟ್ ಅಥವಾ ಶೇಕಡಾ 0.43ರಷ್ಟು ಏರಿಕೆಗೊಂಡು 13,932.60 ಕ್ಕೆ ತಲುಪಿದೆ. ಇಂದು ಸುಮಾರು 1519 ಷೇರುಗಳು ಏರಿಕೆ ದಾಖಲಿಸಿದರೆ, 1438 ಷೇರುಗಳು ಇಳಿಕೆ ಸಾಧಿಸಿದೆ ಮತ್ತು 162 ಷೇರುಗಳ ಮೌಲ್ಯ ಬದಲಾಗಿಲ್ಲ.

ಇಂಡಸ್ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಹಿಂಡಾಲ್ಕೊ, ನೆಸ್ಲೆ, ಕೋಲ್ ಇಂಡಿಯಾ, ಟಾಟಾ ಮೋಟಾರ್ಸ್ ಮತ್ತು ಎನ್‌ಟಿಪಿಸಿ ಇಳಿಕೆಗೊಂಡ ಷೇರುಗಳಾಗಿವೆ. ಐಟಿ ಮತ್ತು ಬ್ಯಾಂಕ್ ಹೊರತುಪಡಿಸಿ, ಇತರ ವಲಯ ಸೂಚ್ಯಂಕಗಳು ಇಂದು ಇಳಿಕೆಗೊಂಡಿವೆ.

Sensex Jumps 259 Points: Nifty Ends Near 14,000

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 8 ಪೈಸೆ ಏರಿಕೆಯಾಗಿ ಪ್ರತಿ ಡಾಲರ್‌ಗೆ 73.42 ಕ್ಕೆ ತಲುಪಿದೆ ಮತ್ತು 73.34-73.44 ರ ವ್ಯಾಪ್ತಿಯಲ್ಲಿ ಉಳಿಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+