ಷೇರುಪೇಟೆಯಲ್ಲಿ ಕುಸಿತ: ಸೆನ್ಸೆಕ್ಸ್ 143 ಪಾಯಿಂಟ್ಸ್ ಇಳಿಕೆ, FMCG ಷೇರುಗಳ ಏರಿಕೆ
ಭಾರತೀಯ ಷೇರುಪೇಟೆ ಗುರುವಾರ ಮತ್ತೊಮ್ಮೆ ಕೆಂಪು ಬಣ್ಣಕ್ಕೆ ತಿರುಗಿದ್ದು, ಎಫ್‌ಎಂಸಿಜಿ ಸಂಬಂಧಿತ ಷೇರುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಂಪನಿಯ ಷೇರುಗಳು ನಷ್ಟ ಅನುಭವಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 143 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 13,500 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 143.62 ಪಾಯಿಂಟ್ಸ್ ಅಥವಾ ಶೇ. 0.31ರಷ್ಟು ಇಳಿಕೆಗೊಂಡು 45,959.88ಕ್ಕೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.80 ಪಾಯಿಂಟ್ಸ್ ಅಥವಾ ಶೇ. 0.38ರಷ್ಟು ಕುಸಿದು 13,478.30 ಹಂತಕ್ಕೆ ತಲುಪಿದೆ.
ಗುರುವಾರ ಒಟ್ಟಾರೆ 1204 ಷೇರುಗಳು ಲಾಭಗಳಿಸಿದರೆ, 1642 ಷೇರುಗಳು ಕುಸಿದವು ಮತ್ತು 158 ಷೇರುಗಳು ಯಾವುದೇ ಬದಲಾವಣೆ ಆಗಿಲ್ಲ. ಯುಪಿಎಲ್, ಅಲ್ಟ್ರಾಟೆಕ್ ಸಿಮೆಂಟ್, ಶ್ರೀ ಸಿಮೆಂಟ್ಸ್, ಟಾಟಾ ಮೋಟಾರ್ಸ್ ಮತ್ತು ಎಂ ಅಂಡ್ ಎಂ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಇನ್ನು ಲಾಭ ಗಳಿಸಿದವರಲ್ಲಿ ನೆಸ್ಲೆ, ಐಟಿಸಿ, ಬ್ರಿಟಾನಿಯಾ ಇಂಡಸ್ಟ್ರೀಸ್, ಎಚ್‌ಯುಎಲ್ ಮತ್ತು ಅದಾನಿ ಪೋರ್ಟ್ಸ್ ಸೇರಿವೆ. ಎಫ್‌ಎಂಸಿಜಿ ಮತ್ತು ಮೆಟಲ್ ಹೊರತುಪಡಿಸಿ ಇತರ ವಲಯ ಸೂಚ್ಯಂಕಗಳು ನಷ್ಟ ಅನುಭವಿಸಿದವು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 0.5ರಷ್ಟು ಇಳಿಕೆಯಾಗಿವೆ.












Click it and Unblock the Notifications