ಗಣೇಶ ಚತುರ್ಥಿಗೆ ಈ ಸಲ ಸಾಲ ದುಬಾರಿ, ಎಸ್ ಬಿಐನಿಂದ ಹೊಸ ದರ ಜಾರಿ
ಸೆಪ್ಟೆಂಬರ್ 1ರಿಂದ ಗೃಹ ಸಾಲದ ಬಡ್ಡಿ ದರ ಏರಿಕೆ ಆಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಅದರ ಬೆಂಚ್ ಮಾರ್ಕ್ ದರವನ್ನು ಏರಿಕೆ ಮಾಡಿದೆ. ಆ ಕಾರಣಕ್ಕೆ ಎಲ್ಲ ಗೃಹ ಸಾಲಗಳು ಇಪ್ಪತ್ತು ಮೂಲಾಂಕಗಳ ಏರಿಕೆ ಕಾಣುತ್ತವೆ. ಎಸ್ ಬಿಐನಿಂದ ಎಲ್ಲ ದರದಲ್ಲೂ ಇಪ್ಪತ್ತು ಮೂಲಾಂಕಗಳ ಏರಿಕೆ ಮಾಡಲಾಗಿದೆ.
ಈ ಹಿಂದೆ 8.25% ಇದ್ದ ಬಡ್ಡಿ ದರವು 8.45% ಗೆ ಏರಿಕೆ ಆಗಿತ್ತು. ಸದ್ಯಕ್ಕೆ ಅದರಲ್ಲಿಯೂ ಇಪ್ಪತ್ತು ಮೂಲಾಂಕ ಏರಿಕೆಯಾಗುತ್ತದೆ. ಪ್ರತಿ ತಿಂಗಳು ಕಟ್ಟುವ ಕಂತಿನಲ್ಲೂ ಅಲ್ಪ ಮಟ್ಟಿನ ಏರಿಕೆ ಆಗುತ್ತದೆ. ಇಲ್ಲಿ ಮತ್ತೊಂದು ವಿಚಾರವಿದೆ. ಸಾಲ ಪಡೆದುಕೊಳ್ಳುವ ಅವಧಿ, ಸಾಲದ ಮೊತ್ತ ಹಾಗೂ ಸಾಲ ಪಡೆಯುತ್ತಿರುವವರು ಮಹಿಳೆಯರೇ ಅಥವಾ ಪುರುಷರೇ ಎಂಬುದು ಕೂಡ ಬಡ್ಡಿ ದರವನ್ನು ನಿರ್ಧರಿಸುವ ಅಂಶಗಳಾಗಿರುತ್ತವೆ.

ಅದೇ ರೀತಿ ವೇತನದಾರರಿಗೆ ಹಾಗೂ ಸ್ವಯಂ ಉದ್ಯೋಗಿಗಳಿಗೆ ಹೀಗೆ ಪ್ರತ್ಯೇಕ ಬಡ್ಡಿ ದರ ವಿಧಿಸಲಾಗುತ್ತದೆ. ಅದರಲ್ಲೂ ಹಬ್ಬದ ಋತುವಿನಲ್ಲಿ ಈ ಘೋಷಣೆ ಮಾಡಲಾಗಿದೆ. ಸಾಮಾನ್ಯವಾಗಿ ಸಾಲ ನೀಡುವ ಬ್ಯಾಂಕ್ ಗಳು ಕೆವು ವಿನಾಯ್ತಿ ಘೋಷಣೆಗಳನ್ನು ಮಾಡುತ್ತವೆ. ಆದರೆ ಈ ಬಾರಿ ಸಾಲಗಳು ದುಬಾರಿ ಆಗಿವೆ.












Click it and Unblock the Notifications