ಭಾರತೀಯ ಸ್ಟೇಟ್ ಬ್ಯಾಂಕ್ ಎಫ್‌ಡಿ ಬಡ್ಡಿದರ ಹೆಚ್ಚಳ
ನವದೆಹಲಿ, ನವೆಂಬರ್ 28: ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ್ದು, ಬುಧವಾರದಿಂದಲೇ (ನ.28) ಜಾರಿಗೆ ಬಂದಿದೆ.
ಎಸ್‌ಬಿಐನ ನಿಶ್ಚಿತ ಠೇವಣಿ ಬಡ್ಡಿ ದರವನ್ನು ಶೇ 0.05-0.10 ಅಥವಾ 5-10 ಮೂಲ ಅಂಶಗಳೊಂದಿಗೆ ಹೆಚ್ಚಿಸಿ ತೀರ್ಮಾನಿಸಲಾಗಿತ್ತು. ಒಂದು ಮೂಲ ಅಂಶವು ಶೇ 0.01ಕ್ಕೆ ಸಮನಾಗಿದೆ.
1 ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಎಸ್‌ಬಿಐ ಹೆಚ್ಚಿಸಿದೆ. ಎಸ್‌ಬಿಐನ ಐದನೇ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯು ಡಿ.5ರಂದು ಹೊರ ಬೀಳಲಿದ್ದು, ಅದಕ್ಕೂ ಮುನ್ನವೇ ಎಸ್‌ಬಿಐ ಈ ಕೊಡುಗೆ ನೀಡಿದೆ.

ಒಂದು ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಠೇವಣಿ ಇರಿಸಿದವರಿಗೆ ಅದರ ಅವಧಿಗೆ ಅನುಗುಣವಾಗಿ ಬಡ್ಡಿದರ ಹೆಚ್ಚಳ ಲಭ್ಯವಾಗಲಿದೆ. ಸಾಮಾನ್ಯ ಜನರಿಗೆ 1-2 ವರ್ಷ ಮತ್ತು 2-3 ವರ್ಷದ ಅವಧಿಗೆ ಠೇವಣಿ ಇರಿಸಿದವರಿಗೆ ಇದರ ಲಾಭ ಸಿಗಲಿದೆ.











Click it and Unblock the Notifications