ಐಪಿಒ ಮೂಲಕ 100 ಬಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸಲಿದೆ ಸೌದಿ ಅರೇಬಿಯ

ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ (ಐಪಿಒ) ಮೂಲಕ ಸೌದಿ ಅರೇಬಿಯಾವು ಮುಂದಿನ ವರ್ಷ ನೂರು ಬಿಲಿಯನ್ ಆಮೆರಿಕನ್ ಡಾಲರ್ ಸಂಗ್ರಹ ಮಾಡಲಿದೆ. ಆ ಮೂಲಕ ಸದ್ಯಕ್ಕೆ ಇರುವ ಆಲಿಬಾಬಾ ಕಂಪನಿಯ ಐಪಿಒ ದಾಖಲೆ ಮುರಿಯಲಿದೆ

ನವದೆಹಲಿ, ಮಾರ್ಚ್ 3: ಚೀನಾದ ದಾಖಲೆಯೊಂದನ್ನು ಸೌದಿ ಅರೇಬಿಯಾ ಮುರಿಯಲಿದೆ. ಅದೇನು ದಾಖಲೆ ಅಂತೀರಾ, ಚೀನಾದ ಇಂಟರ್ ನೆಟ್ ಮಾರಾಟಗಾರ ಕಂಪನಿ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ 2014ರಲ್ಲಿ ಐಪಿಒ (ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ) ಮೂಲಕ 25 ಬಿಲಿಯನ್ ಅಮೆರಿಕ ಡಾಲರ್ ನಷ್ಟು ಹಣ ಸಂಗ್ರಹ ಮಾಡಿತ್ತು.

ಅದು ಜಗತ್ತಿನಲ್ಲೇ ಅತಿ ದೊಡ್ಡ ಮೊತ್ತದ ಐಪಿಒ ಆಗಿತ್ತು. ಇದೀಗ ಸೌದಿ ಅರೇಬಿಯಾದ ಸರಕಾರಿ ಒಡೆತನದ ತೈಲ ಕಂಪನಿ ಸೌದಿ ಅರಾಮ್ಕೋ ಆ ದಾಖಲೆಯನ್ನು ಮುರಿಯಲು ಸಿದ್ಧತೆ ನಡೆಸಿದೆ. ಆಲಿಬಾಬಾ ದಾಖಲೆ ಮುರಿಯುವಂಥ ಐಪಿಒ ಮುಂದಿನ ವರ್ಷ ಆ ಕಂಪನಿ ಮಾಡಲಿದೆ. ಏನು ಆ ದಾಖಲೆ ಎಂಬ ವಿವರಗಳಿಗೆ ಮುಂದೆ ಓದಿ...

ಸೌದಿ ಅರೇಬಿಯಾವು ಸೌದಿ ಅರಾಮ್ಕೋದಲ್ಲಿನ ಶೇ 5ರಷ್ಟು ಪಾಲನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಆ ಷೇರು ಮಾರಾಟದ ಮೊತ್ತ 100 ಬಿಲಿಯನ್ ಅಮೆರಿಕ ಡಾಲರ್ ಆಗಲಿದೆ. ಇದು ಈವರೆಗೆ ದಾಖಲೆಯಾಗಿ ಉಳಿದಿರುವ ಆಲಿಬಾಬಾ ಕಂಪನಿಯ ಐಪಿಒಗಿಂತ ನಾಲ್ಕು ಪಟ್ಟು ಹೆಚ್ಚು. ಒಂದು ಬಿಲಿಯನ್ ಅಂದರೆ ನೂರು ಕೋಟಿ.[ಪ್ರವಾಸ ಹೊರಟಿರುವ ಸೌದಿ ರಾಜನ ಲಗೇಜಿನ ತೂಕ 506 ಟನ್ !]

IPO

ಅಂದರೆ, ನೂರು ಕೋಟಿಯನ್ನು ನೂರರಿಂದ ಗುಣಿಸಿದರೆ ಅಷ್ಟು ಮೊತ್ತದ ಅಮೆರಿಕನ್ ಡಾಲರ್. ಅದನ್ನು ಭಾರತದ ರುಪಾಯಿ ಲೆಕ್ಕದಲ್ಲಿ ತಿಳಿಯಬೇಕೆಂದರೆ ನೂರು ಕೋಟಿಯನ್ನು ನೂರರಿಂದ ಗುಣಿಸಿ ಬರುವ ಮೊತ್ತವನ್ನು ಮತ್ತೆ 68ರಿಂದ ಗುಣಿಸಬೇಕು.

ಈ ಷೇರು ಮಾರಾಟದಿಂದ ಸೌದಿ ಅರಾಮ್ಕೋದ ಕಂಪನಿ ಮೌಲ್ಯ 2 ಟ್ರಿಲಿಯನ್ ಆಗುತ್ತದೆ. ಈ ಮೂಲಕ ಈ ವರೆಗೆ ಅತಿ ಹೆಚ್ಚು ಮೊತ್ತ ಹೊಂದಿರುವ ಲಿಸ್ಟೆಡ್ ಕಂಪನಿಗಳು ಎನಿಸಿರುವ ಆಪಲ್, ಬರ್ಕ್ ಶೈರ್ ಹಾಥ್ ವೇ, ಫೇಸ್ ಬುಕ್, ಎಕ್ಸೋನ್ ಮೊಬಿಲ್ ಮತ್ತು ಜೆಪಿ ಮೋರ್ಗಾನ್ ಚೇಸ್ ಗಿಂತ ಹೆಚ್ಚಾಗುತ್ತದೆ.

ಜಗತ್ತಿನ ಅತಿ ದೊಡ್ಡ ಲಿಸ್ಟೆಡ್ ಕಂಪನಿ ಎನಿಸಿಕೊಳ್ಳುತ್ತದೆ ಸೌದಿ ಅರಾಮ್ಕೋ. ಆಪಲ್ ಮತ್ತು ಆಲ್ಫಾಬೆಟ್ ಹಾಗೂ ಗೂಗಲ್ ಹೋಲ್ಡಿಂಗ್ ಕಂಪನಿಗಳ ಒಟ್ಟು ಮೌಲ್ಯ ಸೇರಿಸಿದರೆ ಸೌದಿ ಅರಾಮ್ಕೋ ಕಂಪನಿಯಷ್ಟಾಗುತ್ತದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುತ್ತದೆ.[80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ!]

ಸ್ಥಳೀಯ ಷೇರು ಮಾರುಕಟ್ಟೆಗೆ ಇದು ತುಂಬ ದೊಡ್ಡದು ಅನ್ನಿಸುವುದರಿಂದ ಜಗತ್ತಿನ ಬೇರೆ ಷೇರು ಮಾರುಕಟ್ಟೆಯೊಂದರಲ್ಲಿ ಕೂಡ ಲಿಸ್ಟ್ ಆಗುತ್ತದೆ. 100 ಬಿಲಿಯನ್ ಅಮೆರಿಕ ಡಾಲರ್ ಹಣವನ್ನು ಸೌದಿ ಅರೇಬಿಯಾ ಸರಕಾರ ಏನು ಮಾಡುತ್ತದೆ ಅಂತೀರಾ? ಆ ದೇಶವು ತೈಲದ ಮೇಲೆ ಅವಲಂಬನೆ ಆಗಿರುವ ದೇಶ. ಅದರಿಂದ ಹೊರಬರಲು ಆ ಹಣವನ್ನು ವಿವಿಧೆಡೆ ಹೂಡಿಕೆ ಮಾಡಲಾಗುತ್ತದೆ.

ಅಂದಹಾಗೆ, ಸೌದಿ ಅರೇಬಿಯಾಗೆ ತೈಲದ ಬೆಲೆ ಹೆಚ್ಚಾಗುವುದು ಮುಖ್ಯ. ಏಕೆಂದರೆ ತೈಲ ಬೆಲೆ ಹೆಚ್ಚಾದರೆ ಅರಾಮ್ಕೋ ಷೇರಿನ ಬೆಲೆ ಕೂಡ ಹೆಚ್ಚಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+