6 ವರ್ಷದ ಕೋಟ್ಯಧಿಪತಿ ರಯಾನ್ ನಿಂದ ಹೊಸ ಬ್ರ್ಯಾಂಡ್ ಆಟಿಕೆ ಮಾರಾಟ
ಆ ಪುಟ್ಟ ಬಾಲಕನ ಹೆಸರು ರಯಾನ್. ವಯಸ್ಸು ಆರು ವರ್ಷ. ಯೂಟ್ಯೂಬ್ ನಲ್ಲಿ ಗೊಂಬೆಗಳ ವಿಮರ್ಶೆ ಮಾಡುವ ಈತ, ಅಮೆರಿಕದಲ್ಲಿರುವ ಎರಡು ಸಾವಿರದ ಐನೂರು ವಾಲ್ ಮಾರ್ಟ್ ಸ್ಟೋರ್ಸ್ ಹಾಗೂ ವೆಬ್ ಸೈಟ್ ಗಳಲ್ಲಿ ಸೋಮವಾರ ತನ್ನದೇ ಬ್ರ್ಯಾಂಡ್ ನ ಗೊಂಬೆಗಳ ಮಾರಾಟ ಆರಂಭಿಸಲಿದ್ದಾನೆ. ಈ ವರ್ಷದ ಅಕ್ಟೋಬರ್ ಹೊತ್ತಿಗೆ ಇತರ ಮಳಿಗೆಗಳಲ್ಲೂ ಗೊಂಬೆಗಳು ಲಭ್ಯವಾಗಲಿವೆ.
ಯೂಟ್ಯೂಬ್ ನಲ್ಲಿ ಗೊಂಬೆಗಳ ವಿಮರ್ಶೆ ಮಾಡುವ ಮೂಲಕ ಆರು ವರ್ಷದ ರಯಾನ್ ಮಿಲಯನೇರ್ ಆಗಿದ್ದಾನೆ. ಕಳೆದ ವರ್ಷ ಈ ರೀತಿ ವಿಮರ್ಶೆ ಮಾಡುವ ಮೂಲಕವೇ 11 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸಿದ್ದಾನೆ. ಯೂಟ್ಯೂಬ್ ನ ಈ ಸ್ಟಾರ್ ನ ಚಾನೆಲ್ ಗೆ ರಯಾನ್ ಟಾಯ್ ರಿವ್ಯೂ ಅಂತ ಹೆಸರಿದೆ. ರಯಾನ್ ಅಂತಷ್ಟೇ ಹೆಸರಾದ ಈತನ ಸ್ಥಳ ಮತ್ತಿತರ ವಿವರಗಳನ್ನು ರಹಸ್ಯವಾಗಿಡಲಾಗಿದೆ.

ಒಂದೂವರೆ ಕೋಟಿಗೂ ಹೆಚ್ಚು ಸಬ್ ಸ್ಕೈಬರ್ ಗಳನ್ನು ಹೊಂದಿರುವ ರಯಾನ್, ಕಳೆದ ವರ್ಷ ಅತ್ಯುತ್ತಮ ಮೊತ್ತ ಪಡೆದವರ ಸಾಲಿನಲ್ಲಿ ಎಂಟನೆಯವನು. ಇದೀಗ ರಯಾನ್ ನಿಂದ ಮೂರು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಕ್ಕಳಿಗಾಗಿ ಆಟಿಕೆಗಳು ಮಾರುಕಟ್ಟೆಗೆ ಬರುತ್ತಿವೆ. ರಯಾನ್ ಗೆ ಇಷ್ಟವಾದ ಪಿಜ್ಜಾ, ವಸ್ತುಗಳು, ನಾಲ್ಕು ಡಿಸೈನ್ ಟಿ ಷರ್ಟ್ ಗಳು ಇವುಗಳಲ್ಲಿ ಒಳಗೊಂಡಿರುತ್ತವೆ.












Click it and Unblock the Notifications