ಮಾಧ್ಯಮ ದೊರೆ ಮುರ್ಡೋಕ್ ರಿಂದ ಮತ್ತೆ ಬಿಗ್ ಡೀಲ್
ನವದೆಹಲಿ, ಮಾ.10: ಮಾಧ್ಯಮ ಲೋಕದ ಬಿಲಿಯನರ್ ರುಪರ್ಟ್ ಮುರ್ಡೋಕ್ ಅವರು ಭಾರತಕ್ಕೆ ಕಾಲಿರಿಸುತ್ತಿದ್ದಂತೆ ದೊಡ್ಡ ಡೀಲ್ ಗೆ ಸಹಿ ಬಿದ್ದಿದೆ. ಮುರ್ಡೋಕ್ ಅವರ ನ್ಯೂಸ್ ಕಾರ್ಪ್ ಸಂಸ್ಥೆ 'ಇಂಡಿಯನ್ ಎಕ್ಸ್‌ಪ್ರೆಸ್' ಸಮೂಹಕ್ಕೆ ಸೇರಿದ 'ಸ್ಕ್ರೀನ್' ಸಿನಿಮಾ ನಿಯತಕಾಲಿಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಮುರ್ಡೋಕ್ ಅವರು ಈ ಮುಂಚೆ ಸ್ಟಾರ್ ಸಮೂಹ ಭಾರತದಲ್ಲಿ ಖರೀದಿಸಿದ ಮೇಲೆ ವಿಸಿ ಸರ್ಕಲ್' ಎನ್ನುವ ಆನ್‌ಲೈನ್ ಸುದ್ದಿಸಂಸ್ಥೆಯೊಂದನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. 1951ರಲ್ಲಿ ಆರಂಭಗೊಂಡ "ಸ್ಕ್ರೀನ್' ಅತ್ಯಂತ ಜನಪ್ರಿಯ ಸಿನಿಮಾ ನಿಯತಕಾಲಿಕವಾಗಿದೆ.
ಎಕಾನಾಮಿಕ್ ಟೈಮ್ಸ್ ವರದಿಯಂತೆ ಸ್ಕ್ರೀನ್ ಮೌಲ್ಯ ಮಾರುಕಟ್ಟೆಯಲ್ಲಿ ಸುಮಾರು 30 ರಿಂದ 40 ಕೋಟಿ ರು ತನಕ ಇದೆ. ವಿಸಿ ಸರ್ಕಲ್ 120 ರಿಂದ 150 ಕೋಟಿ ರು ದಾಟುತ್ತದೆ.

ಮುರ್ಡೋಕ್ ಅವರ ನ್ಯೂಸ್ ಕಾರ್ಪ್ ಮುದ್ರಣ ಮಾಧ್ಯಮವನ್ನು ನಿಭಾಯಿಸಿದರೆ, 21st ಸೆಂಚುರಿ ಫಾಕ್ಸ್ ಸಂಸ್ಥೆ ಪ್ರಸಾರ ಹಾಗೂ ಮನರಂಜನೆ ವಿಭಾಗದ ವ್ಯವಹಾರ ನೋಡಿಕೊಳ್ಳಲಿದೆ.
ನೋಯ್ಡಾ ಮೂಲದ ಸುಮಾರು 100ಜನ ಉದ್ಯೋಗಿಗಳನ್ನು ಹೊಂದಿರುವ ಮೊಸಾಯಿಕ್ ಮಾಧ್ಯಮ ಸಂಸ್ಥೆ ಒಡೆತನದ ವಿಸಿ ಸರ್ಕಲ್ .ಕಾಂ (VCCircle.com, Techcircle.in, VCCEdge, VCCircle Training) ಖರೀದಿಗೂ ಮುನ್ನ ಸ್ಟಾರ್ ಅಪ್ ಕಂಪನಿ BigDecisions.com ಹಾಗೂ ರಿಯಲ್ ಎಸ್ಟೇಟ್ ವೆಬ್ ಸೈಟ್ PropTiger.com ಕಂಪನಿ(185 ಕೋಟಿ ಡೀಲ್)ಯನ್ನು ಮುರ್ಡೋಕ್ ಖರೀದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications