Get Updates
Get notified of breaking news, exclusive insights, and must-see stories!

ಡಾಲರ್ ಎದುರು ರುಪಾಯಿ ಬಲ: 75.13 ರುಪಾಯಿಗೆ ವಿನಿಮಯ

ನವದೆಹಲಿ, ಜುಲೈ 17: ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿದ್ದು, 75.13 ರುಪಾಯಿಗೆ ವಿನಿಮಯಗೊಂಡಿದೆ.

ಆರಂಭದಲ್ಲಿ ಡಾಲರ್ ಎದುರು ಏಳು ಪೈಸೆ ಇಳಿಕೆ ಕಂಡಿದ್ದ ರುಪಾಯಿ ನಂತರ ಚೇತರಿಕೆ ಸಾಧಿಸಿ 5 ಪೈಸೆ ಮೌಲ್ಯ ಹೆಚ್ಚಾಯಿತು. ಗುರುವಾರ ಡಾಲರ್ ಎದುರು ರುಪಾಯಿ ಮೌಲ್ಯ 75.18ರಷ್ಟಿತ್ತು.

ರುಪಾಯಿ ಎದುರು ಅಷ್ಟೇ ಅಲ್ಲದೆ ಇತರೆ ಕರೆನ್ಸಿ ಎದುರು ಡಾಲರ್ ಮೌಲ್ಯ 0.09ರಷ್ಟು ಕುಸಿದು 96.25ರಂತೆ ವಿನಿಮಯಗೊಂಡಿದೆ.

Rupee Jumps 5 Paise To 75.13 Against US Dollar In Early Trade

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ. 0.21ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 43.28 ಡಾಲರ್‌ಗೆ ಮಾರಾಟವಾಯಿತು. ಅಲ್ಲದೆ ಜಾಗತಿಕ ಷೇರುಪೇಟೆಗಳ ವಹಿವಾಟು ಮತ್ತು ಕೋವಿಡ್-19 ಪ್ರಕರಣಗಳು ಭಾರತೀಯ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ.

ದೇಶೀಯ ಇಕ್ವಿಟಿ ಮಾರುಕಟ್ಟೆ ಆರಂಭದಲ್ಲಿ, 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 198.41 ಪಾಯಿಂಟ್‌ಗಳ ಏರಿಕೆ ಕಂಡು 36,670.09 ಕ್ಕೆ ತಲುಪಿದೆ ಮತ್ತು ಎನ್‌ಎಸ್‌ಇ ನಿಫ್ಟಿ 71.10 ಪಾಯಿಂಟ್‌ಗಳ ಏರಿಕೆ ಕಂಡು 10,811.05 ಕ್ಕೆ ತಲುಪಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+