Gold: ಚಿನ್ನದ ಬೆಲೆ ಏರಿಕೆ ಇಲ್ಲಿಗೇ ನಿಲ್ಲಲ್ಲ!

ಚಿನ್ನದ ಬೆಲೆಯು ಇತಿಹಾಸದಲ್ಲೇ ಮೊದಲ ಬಾರಿ ಹೊಸ ದಾಖಲೆಯನ್ನು ಬರೆದಿದೆ. ಚಿನ್ನದ ಬೆಲೆಯು ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗುತ್ತಿದೆ. ಈ ರೀತಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಹಲವು ಕಾರಣಗಳು ಇವೆ. ಬಂಗಾರ ಬೆಲೆಯು ನಿರಂತರವಾಗಿ ಯಾಕೆ ಏರಿಕೆ ಆಗುತ್ತಿದೆ ಎನ್ನುವ ಕುತೂಹಲ ಚಿನ್ನ ಪ್ರಿಯರಲ್ಲಿ ಇದೆ. ಬಂಗಾರದ ಬೆಲೆಯು ಯಾವಾಗ ಇಳಿಕೆಯಾಗಲಿದೆ ಹಾಗೂ ಇನ್ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೆಷ್ಟು ಹೆಚ್ಚಳವಾಗಬಹುದು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನದ ಬೆಲೆಯು ಈ ಹಿಂದೆ ಎಂದೂ ಕಾಣದ ಹೊಸ ಬೆಲೆಗೆ ಜಿಗಿಯುತ್ತಲ್ಲೇ ಇದೆ. ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ನೋಡಿ ಜನ ಸಹ ಕಂಗಾಲಾಗಿದ್ದಾರೆ. ಕಳೆದ 2 ತಿಂಗಳಿನ ಅವಧಿಯಿಂದ ಚಿನ್ನದ ಬೆಲೆಯು ಪ್ರತಿ ಒಂದು ವಾರಕ್ಕೆ ಹೆಚ್ಚಳವಾಗುತ್ತಿದೆ. ಈ ತಿಂಗಳು ಫೆಬ್ರವರಿಯಲ್ಲಿ ಚಿನ್ನದ ದಾಖಲೆಗಳು ಪುಡಿ.. ಪುಡಿಯಾಗಿವೆ. ಪ್ರತಿದಿನವೂ ಚಿನ್ನದ ಬೆಲೆಯಲ್ಲಿ ಏರುಪೇರು ಆಗುತ್ತಿದ್ದು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವ ಆತಂಕ ಎದುರಾಗಿದೆ. ಇಷ್ಟಕ್ಕೂ ಬಂಗಾರದ ಬೆಲೆ ಈ ರೀತಿ ಕಾರಣವಾಗುತ್ತಿರುವುದರ ಹಿಂದೆ ಕುತೂಹಲಕಾರಿ ಹಾಗೂ ಭಯಾನಕ ಸಂಗತಿಗಳು ಇವೆ. ಅದರ ವಿವರವನ್ನು ನೋಡುತ್ತಾ ಹೋಗೋಣ.

Rise in Gold Prices Wont Stop Here what is Reason for Rise

ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಹಲವು ಪ್ರಮುಖ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಮೂರು ಕಾರಣ ಅಮೆರಿಕದ ಆರ್ಥಿಕ ನೀತಿ ಬದಲಾಗುತ್ತಿರುವುದು, ಷೇರು ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಇನ್ನೊಂದು ಕಾರಣವೆಂದರೆ ಡಾಲರ್‌ನ ಮುಂದೆ ನಿರಂತರವಾಗಿ ರೂಪಾಯಿಯ ಮೌಲ್ಯ ಕುಸಿತ ಕಾಣುತ್ತಿರುವುದು. ಇದಷ್ಟೇ ಅಲ್ಲ ಇನ್ನೂ ಕೆಲವೊಂದು ಕಾರಣಕ್ಕೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಆದರೆ ಇನ್ನು ಸದ್ಯಕ್ಕಂತೂ ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಅಮೆರಿಕದ ಹೊಸ ಆರ್ಥಿಕ ನೀತಿ: ಅಮೆರಿಕದ ಹೊಸ ಆರ್ಥಿಕ ನೀತಿ ವಿಶ್ವದ ಎಲ್ಲಾ ರಾಷ್ಟ್ರಗಳ ನಿದ್ದೆಯನ್ನು ಕೆಡಿಸಿದೆ. ಈಚೆಗಷ್ಟೇ ಮೂರು ದೇಶಗಳ ಮೇಲೆ ಬರೋಬ್ಬರಿ ಶೇ 25ರಷ್ಟು ಹಾಗೂ ಶೇ 10ರಷ್ಟು ತೆರಿಗೆ ವಿಧಿಸಿದ್ದ ಡೊನಾಲ್ಡ್‌ ಟ್ರಂಪ್ ಅವರು, ಸೋಮವಾರ ಉಕ್ಕು ಹಾಗೂ ಆಲ್ಯುಮಿನಿಯಂನ ಮೇಲೆ ಬರೋಬ್ಬರಿ ಮತ್ತು ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ಹಾಕಿದ್ದಾರೆ. ಅಮೆರಿಕದಲ್ಲಿ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ತೆರಿಗೆ ಪ್ರಮಾಣವನ್ನು ಹೆಚ್ಚಳ ಮಾಡುತ್ತಿದ್ದಂತೆಯೇ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಚಿನ್ನ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಟ್ಯಾಕ್ಸ್‌ ವಾರ್ ಶುರು ಮಾಡಿಕೊಂಡಿದ್ದು. ಇದರಿಂದ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎಂದೂ ಹೇಳಲಾಗುತ್ತಿದೆ. ಚಿನ್ನದ ಬೆಲೆಯು 24 ಕ್ಯಾರೇಟ್‌ ಬೆಲೆ 87,000 ಸಾವಿರ ರೂಪಾಯಿ ದಾಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+