ಬೆಲೆ ಹೆಚ್ಚಳಕ್ಕೆ ಕಾರಣವಾಗುವುದೆ ಚಿಲ್ಲರೆ ಹಣದುಬ್ಬರ ಏರಿಕೆ?

ನವದೆಹಲಿ, ಫೆ. 13 : ಹಣ್ಣು ಮತ್ತು ತರಕಾರಿಗಳ ಮತ್ತಿತರ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿರುವುದರಿಂದ ಚಿಲ್ಲರೆ ಹಣದುಬ್ಬರ ದರ ಜನವರಿಯಲ್ಲಿ ಶೇ. 5.11ಕ್ಕೆ ಏರಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 4.9 ರಷ್ಟಿದ್ದ ಹಣದುಬ್ಬರ ಏರಿಕೆ ಹಾದಿಯಲ್ಲಿ ಸಾಗಿರುವುದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವಂತೆ ಮಾಡಲಿದೆ. ಹಣದುಬ್ಬರ ತಗ್ಗಿದ ಬೆನ್ನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 25 ರಷ್ಟು ಕಡಿತ ಮಾಡಿತ್ತು. ಆದರೆ ಈಗ ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರ ಏರಿಕೆ ಮಾಡಹುದು ಎಂದು ಹೇಳಲಾಗಿದೆ.['0' ಗೆ ಇಳಿದ ಹಣದುಬ್ಬರ; ಇದು 3 ವರ್ಷದಲ್ಲೇ ಕನಿಷ್ಠ]

india

ಆದರೆ ಕೈಗಾರಿಕಾ ಉತ್ಪನ್ನಗಳ ದರದಲ್ಲಿ ಶೇ. 1.7 ಏರಿಕೆ ಕಂಡುಬಂದಿದೆ. 2011-12ನ್ನು ಮೂಲವರ್ಷವಾಗಿ ಪರಿಗಣಿಸಿರುವುದರಿಂದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಶೇ4.28­ರಷ್ಟಾಗಿದೆ. 2010-11ನ್ನು ಮೂಲ ವರ್ಷವಾಗಿ ಪರಿಗಣಿಸಿದ್ದಾಗ ಡಿಸೆಂಬರ್‌­ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5ರಷ್ಟಿತ್ತು.[ಅಧಿಕಾರಿಗಳ ಪಂಚತಾರಾ ವಾಸಕ್ಕೆ ಕೇಂದ್ರದ ಬ್ರೇಕ್]

2010-11ರ ಬದಲಾಗಿ 2011-12ನ್ನು ಮೂಲ ವರ್ಷವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಏರಿಕೆ ಲೆಕ್ಕ ಹಾಕಲಾಗಿದೆ. ಆಹಾರ ಹಣದುಬ್ಬರವು ಜನವರಿ­ಯಲ್ಲಿ ಶೇ. 6.13ರಷ್ಟು ದಾಖಲಾಗಿದೆ ಎಂದು ಕೇಂದ್ರ ಅಂಕಿ-ಅಂಶ ಇಲಾಖೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+