ರಿಲಯನ್ಸ್ ತೆಕ್ಕೆಗೆ ಬಿಗ್ ಬಜಾರ್ ಒಡೆತನದ ಫ್ಯೂಚರ್ ಸಂಸ್ಥೆ
ಮುಂಬೈ, ಆಗಸ್ಟ್ 30: ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ಖರೀದಿ ಮಾಡಲಾಗಿದೆ.
ಸರಾಸರಿ ಮೊತ್ತ 24,713 ಕೋಟಿ ರುಪಾಯಿಗೆ ಖರೀದಿ ಮಾತುಕತೆ ಆಗಿದೆ. ಇದರಲ್ಲಿ ಸಣ್ಣ- ಪುಟ್ಟ ಹೊಂದಾಣಿಕೆಗಳು ಆಗಬಹುದು ಎಂದು ಷೇರುಪೇಟೆಗೆ ರಿಲಯನ್ಸ್ ಸಂಸ್ಥೆ ಮಾಹಿತಿ ನೀಡಿದೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ ಇದಾಗಲಿದೆ. ಈ ಮೂಲಕ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಭಾರತದ ಕೆಲವು ಪ್ರಮುಖ ಚಿಲ್ಲರೆ ಸ್ವರೂಪಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳಲಿದೆ.
ಇಡೀ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ವ್ಯವಹಾರ ನಡೆಯುವ ಸಂದರ್ಭದಲ್ಲಿ ಆ ಕುರಿತು ಕೆಲ ಒಪ್ಪಂದ ಆಗಿದೆ. ಅದರ ಅನ್ವಯ, ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪೆನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಲಿದೆ.

ಮಾರಾಟ, ಒಪ್ಪಂದದ ಮುಖ್ಯಾಂಶಗಳು
* ರೀಟೇಲ್ ಮತ್ತು ಹೋಲ್ ಸೇಲ್ ಸಂಸ್ಥೆಗಳನ್ನು RRVL ಒಡೆತನದ ರಿಲಯನ್ಸ್ ರೀಟೇಲ್ ಅಂಡ್ ಫ್ಯಾಷನ್ ಲೈಫ್ ಸ್ಟೈಲ್ ಲಿಮಿಟೆಡ್ ಗೆ (RRFLL) ವರ್ಗಾವಣೆ ಮಾಡಲಾಗುವುದು.
* ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯನ್ನು RRVLಗೆ ವರ್ಗಾವಣೆ; ಮತ್ತು
* RRFLLನಿಂದ ಹೂಡಿಕೆ ಪ್ರಸ್ತಾವ:
* ವಿಲೀನದ ನಂತರ 6.09% ಈಕ್ವಿಟಿ ಸ್ವಾಧೀನಕ್ಕಾಗಿ 1200 ಕೋಟಿ ರುಪಾಯಿಯ FEL ಪ್ರಿಫರೆನ್ಷಿಯಲ್ ಈಕ್ವಿಟಿ ಷೇರುಗಳ ವಿತರಣೆ; ಮತ್ತು
* 400 ಕೋಟಿ ರುಪಾಯಿಯ ಈಕ್ವಿಟಿ ವಾರಂಟ್ ಗಳ ಪ್ರಿಫರೆನ್ಷಿಯಲ್ ವಿತರಣೆ, ಅದರ ಬದಲಿಗೆ ಮತ್ತು ವಿತರಣೆ ಬೆಲೆಯ ಬಾಕಿ 75% ಪಾವತಿ, ಇದರ ಫಲಿತಾಂಶವಾಗಿ FELನಲ್ಲಿ 7.05%ನಷ್ಟನ್ನು RRFLL ಪಡೆಯುತ್ತದೆ.

ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ
ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಈ ವ್ಯವಹಾರದ ಮೂಲಕ ಹೆಸರಾಂತ ಮಾದರಿಯ ಹಾಗೂ ಫ್ಯೂಚರ್ ಸಮೂಹದ ಬ್ರ್ಯಾಂಡ್ ಗಳಿಗೆ ಸೂರು ಒದಗಿಸುತ್ತಿದ್ದೇವೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತದೆ. ಅದರ ವ್ಯವಹಾರದ ವಾತಾವರಣ ಹಾಗೆ ಉಳಿಸುತ್ತೇವೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದೇ ಎಂದು ಹೇಳಿದ್ದಾರೆ.
ಇನ್ನೂ ಮುಂದುವರಿದು, ಈ ರೀಟೇಲ್ ಕ್ಷೇತ್ರದಲ್ಲಿ ಇದೇ ಬೆಳವಣಿಗೆಯ ವೇಗ ಮುಂದುವರಿಸುವ ವಿಶ್ವಾಸ ಹೊಂದಿದ್ದೇವೆ. ಸಣ್ಣ ವರ್ತಕರು, ಅಂಗಡಿಗಳವರು ಮತ್ತು ದೊಡ್ಡ ಮಟ್ಟದ ಗ್ರಾಹಕರ ಬ್ರ್ಯಾಂಡ್ ಗಳ ಜತೆಗಿನ ನಮ್ಮ ವಿಶಿಷ್ಟ ರೀತಿಯ ಸಹಭಾಗಿತ್ವ ಸಕ್ರಿಯವಾಗಿ ಮುಂದುವರಿಯುತ್ತದೆ. ದೇಶದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಮೌಲ್ಯಯುತವಾದ ಸೇವೆ ಮುಂದುವರಿಸುವುದಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ಫ್ಯೂಚರ್ ಸಮೂಹದ ರೀಟೇಲ್ ಜಾಲ
ಫ್ಯೂಚರ್ ಸಮೂಹದ ರೀಟೇಲ್, ಹೋಲ್ ಸೇಲ್ ಹಾಗೂ ಪೂರೈಕೆ ಜಾಲದ ವ್ಯವಸ್ಥೆಯನ್ನು ಖರೀದಿಸುತ್ತಿರುವುದರಿಂದ ರಿಲಯನ್ಸ್ ರೀಟೇಲ್ ವ್ಯವಹಾರಕ್ಕೆ ಇನ್ನಷ್ಟು ಅನುಕೂಲ ಆಗಲಿದೆ, ವ್ಯವಹಾರ ಇನ್ನಷ್ಟು ಬಲಗೊಳ್ಳಲಿದೆ. ಈ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿನ ಸಣ್ಣ ವರ್ತಕರಿಗೆ ಅವರು ಇನ್ನಷ್ಟು ಸ್ಪರ್ಧಾತ್ಮಕವಾಗಲು ಬೆಂಬಲ ಒದಗಿಸಿದಂತಾಗುತ್ತದೆ. ಇಂಥ ಸವಾಲಿನ ಸಮಯದಲ್ಲಿ ಆದಾಯ ಹೆಚ್ಚಿಸಲು ಸಹಕರಿಸಿದಂತಾಗುತ್ತದೆ.
ಫ್ಯೂಚರ್ ಸಮೂಹದಿಂದ ಬಟ್ಟೆ, ಸಾಮಾನ್ಯ ಬಳಕೆ ವಸ್ತುಗಳು ಹಾಗೂ ಸ್ವಂತ ಎಫ್ ಎಂಸಿಜಿ ಬ್ರ್ಯಾಂಡ್ ಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಆಯ್ಕೆಗೆ ಅಪಾರ ಅವಕಾಶಗಳು ಸಹ ಇವೆ. ಈ ಖರೀದಿಯು ಸೆಬಿ, ಸಿಸಿಐ, ಎನ್ ಸಿಎಲ್ ಟಿ, ಷೇರುದಾರರು, ಸಾಲಗಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿದೆ.

ಸೂಪರ್ ಮಾರ್ಕೆಟ್ ನಿಯಂತ್ರಿಸುತ್ತಿರುವ ಬಿಗ್ ಬಜಾರ್
ಫ್ಯೂಚರ್ ಕೂಪನ್ಸ್ ಲಿಮೆಟೆಡ್ ನಲ್ಲಿ ಅಮೆಜಾನ್ ಶೇ49ರಷ್ಟು ಪಾಲು ಹೊಂದಲಿದೆ ಎಂದು ಫ್ಯೂಚರ್ ರೀಟೈಲ್ ಘೋಷಿಸಿದೆ. ಆದರೆ, ಎರಡು ಸಂಸ್ಥೆಗಳು ಈ ಒಪ್ಪಂದ ಮೌಲ್ಯವನ್ನು ಬಹಿರಂಗಪಡಿಸಿರಲಿಲ್ಲ.
ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ.
ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications