ಲೈಫ್ ವಿಂಡ್ 5 ಸ್ಮಾರ್ಟ್ ಫೋನ್ ಹೊರಬಿಟ್ಟ ರಿಲಯನ್ಸ್

ಬೆಂಗಳೂರು, ಜೂನ್ 10: ರಿಲಯನ್ಸ್ ಎಲ್ ವೈ ಎಫ್ (LYF), ಸ್ಮಾರ್ಟ್ ಫೋನ್ +, ನೈಜ 4 ಜಿ ಶ್ರೇಣಿಯ ವಿಂಡ್ 5 ಎಲಿಮೆಂಟ್ಸ್ ಕಲೆಕ್ಷನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿಂಡ್ 5 ಮೊಬೈಲ್ ಗಳು ದೇಶಾದ್ಯಂತ 6599 ರೂ. ಬೆಲೆಯಲ್ಲಿ ಲಭ್ಯವಿದೆ.

ವಿಂಡ್ 5ರ ಪ್ರಮುಖ ವೈಶಿಷ್ಟ್ಯಗಳು ಇವುಗಳನ್ನು ಒಳಗೊಂಡಿದೆ:

ಒಟಿಜಿ ಬೆಂಬಲ- ಪೆನ್ ಡ್ರೈವ್ ಗೆ ಹೊಂದಿಕೆ
ಯುಎಎಸ್ ಬಿ ಆನ್-ದಿ-ಗೋ (ಒಟಿಜಿ) ಬೆಂಬಲವನ್ನು ಉಪಯೋಗಿಸಿಕೊಂಡು ನಿಮ್ಮ ಸ್ಮಾರ್ಟ್ ಫೋನ್ ನ್ನು ಪೆನ್ ಡ್ರೈವ್ ಗೆ ಜೋಡಿಸಿ. ಫೋನ್ ಮತ್ತು ಬಾಹ್ಯ ಸ್ಟೋರೇಜ್ ನಡುವೆ ಮಾಧ್ಯಮಗಳ ಸುಲಭ ಲಭ್ಯತೆ ಮತ್ತು ವರ್ಗಾವಣೆಯ ಖುಷಿಯನ್ನು ನೀವು ಅನುಭವಿಸಬಹುದು. [ಲೈಫ್ ವಿಂಡ್ 4 ಡಿಜಿಟಲ್ ಸರೌಂಡ್ ಸೌಂಡ್ ಫೋನ್]

ಹುಬ್ಬೇರಿಸುವ ಡಿಸ್ ಪ್ಲೇ
ಚಿತ್ರಗಳ ನಿಖರತೆಯ ಅನುಭಕ್ಕಾಗಿ ಬೆರಗುಗೊಳಿಸುವ, ಎಚ್ಡಿ ರೆಸಲ್ಯೂಷನ್ ಜತೆಗಿನ 12.7 ಸೆಂಮೀ (5) ಸ್ಕ್ರೀನ್. ಐಪಿಎಸ್ ಡಿಸ್ ಪ್ಲೇಯು ಎಲ್ಲಾ ನೋಟದ ಕೋನದಿಂದಲೂ ಸ್ಥಿರ ಬಣ್ಣದ ಉತ್ಪತ್ತಿ ಮಾಡುತ್ತದೆ. ನಿಮ್ಮ ಕುಟುಂಬ ಪೂರ್ತಿ ಒಟ್ಟಾಗಿ ಸಿನಿಮಾಗಳನ್ನು ನೋಡಲು ಸೂಕ್ತವಾಗಿದೆ. [ನಮೋ ಟೆಲ್ -99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್]

Reliance Retail’s LYF expands its elements collection with the launch of Wind 5

ಫುಲ್ಲೀ ಲೋಡೆಡ್ ಕ್ಯಾಮರಾ - ಶ್ರಮವಿಲ್ಲದೆ ಚಿತ್ರಗಳನ್ನು ಸೆರೆಹಿಡಿಯುತ್ತದೆ
8ಎಂಪಿ ಹಿಂಭಾಗದ ಮತ್ತು 5ಎಂಪಿ ಮುಂಭಾಗದ ಕ್ಯಾಮರಾದೊಂದಿಗೆ ಚಿತ್ರಗಳು ಅತ್ಯುತ್ತಮವಾಗಿ ಸೆರೆಹಿಡಿಯಲ್ಪಡುತ್ತವೆ. ಎಚ್‍ಡಿಆರ್, ಗೆಸ್ಚರ್ ಕ್ಯಾಪ್ಚರ್, ಮಲ್ಟಿ ಆಂಗಲ್ ವ್ಯೂ ಮೋಡ್, ಕಂಟಿನ್ಯೂಸ್ ಶಾಟ್ಸ್ (99ರ ತನಕ), ಪನೋರಮಾ ಮೋಡ್ ಮತ್ತು ಟೈಮ್ ಲ್ಯಾಪ್ಸ್ ವಿಡಿಯೋಸ್ ನಂಥ ಸ್ಮಾರ್ಟ್ ಕ್ಯಾಮರಾ ಮೋಡ್ ಗಳು ನಿಮ್ಮ ಕ್ರಿಯಾಶೀಲತೆಯನ್ನು ತೆರೆದಿಡಲಿವೆ. 4ಜಿ ಡಿಜಿಟಲ್ ಝೂಮ್ ಹೆಚ್ಚು ವಿಶದವಾಗಿ ಇಮೇಜ್ ಗಳು ಹಾಗೂ ವೀಡಿಯೋಗಳನ್ನು ಶೂಟ್ ಮಾಡಲಿವೆ. [ಕೊಹ್ಲಿ ಹೆಸರಿನಲ್ಲಿ ಮೋಟೋ ಜಿ ಸ್ಮಾರ್ಟ್ ಫೋನ್!]

ಪವರ್ ಪ್ಯಾಕ್ ಆದ ಕಾರ್ಯನಿರ್ವಹಣೆ - ಜಂಜಾಟ ರಹಿತ ದೈನಂದಿಕ ಕಾರ್ಯಗಳು
ಬಹು ಕಾರ್ಯಕ್ಕಾಗಿ 1 ಜಿಬಿ ರ್ಯಾಮ್ ಮತ್ತು 8 ಜಿಬಿ ಇಂಟರ್ನಲ್ ಮೆಮೊರಿಯೊಂದಿಗಿನ 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್. 2000 ಎಂಎಎಚ್ ಬ್ಯಾಟರಿಯು ನಿಮ್ಮ ದೈನಂದಿನ ಮಾಧ್ಯಮ ಚಟುವಟಿಕೆಗಳನ್ನು ನಿರ್ವಹಿಸುತ್ತದೆ ಮತ್ತು 20 ಗಂಟೆಗಳ ಆಡಿಯೋ ಪ್ಲೇಬ್ಯಾಕ್ ಸವಿಯಬಹುದಾಗಿದೆ.

ನೈಜ 4ಜಿ ಅನುಭವ
ಲೈಫ್‍ನ ಎಲ್ಲಾ ಫೋನ್ ಗಳಂತೆ ವಿಂಡ್ 5 ಕೂಡಾ, ಎಲ್ಲಾ ಬೆಲೆಗಳಲ್ಲಿ ವೋಲ್ಟೆ ತಂತ್ರಜ್ಞಾನದೊಂದಿಗೆ ಸುಸಜ್ಜಿತಗೊಂಡಿದೆ. ಇದು ಬಳಕೆದಾರರಿಗೆ ನೈಜ 4ಜಿ ಅನುಭವವನ್ನು ಒದಗಿಸಲಿದೆ, ಅಂದರೆ ಎಚ್ಡಿ ಧ್ವನಿ ಮತ್ತು ವೀಡಿಯೋ ಕರೆ, ಫಾಸ್ಟ್ ಕಾಲ್ ಸೆಟಪ್ ಟೈಮ್, ಧ್ವನಿ ಮತ್ತು ವಿಡಿಯೋ ಕರೆಯ ನಡುವಿನ ತಡೆರಹಿತ ಸ್ವಿಚ್ ಮಾಡಬಹುದಾಗಿದೆ, ವೈಫೈ ಮೂಲಕ ಎಚ್ಡಿ ಧ್ವನಿ ಕರೆ, ವೈಫೈ ಮತ್ತು ಎಲ್ಟಿಇ ನಡುವೆ ಧ್ವನಿಯ ಕರೆಗಳನ್ನು ತಡೆರಹಿತ ಸ್ವಿಚ್ ಮಾಡಬಹುದಾಗಿದೆ, ಮಲ್ಟಿಪಾರ್ಟಿ ಆಡಿಯೋ ಮತ್ತು ವೀಡಿಯೋ ಕಾನ್ಫರೆನ್ಸಿಂಗ್, ಮತ್ತು ಕರೆ ಮಾಡುವಾಗ ಇಂಟರ್ನೆಟ್ ಸರ್ಫಿಂಗ್ ಗೆ ಅವಕಾಶ ಕೂಡಾ ಒದಗಿಸುತ್ತದೆ.

* ನೈಜ 4 ಜಿ ವೈಶಿಷ್ಟ್ಯವು ನೆಟ್‍ವರ್ಕ್ ಮತ್ತು ಪ್ರಸರಣವನ್ನು ಅವಲಂಬಿತವಾಗಿರುತ್ತದೆ.

* ಲೈಫ್ ಹ್ಯಾಂಡ್ ಸೆಟ್ ಗಳು ಪ್ರಸ್ತುತ 5,999 ರೂ.ನಿಂದ 19,499 ರೂ. ತನಕದ ಬೆಲೆ ಶ್ರೇಣಿಯಲ್ಲಿ ಲಭ್ಯ ಇವೆ.

ಲೈಫ್ ವಿಂಡ್ 5 ಎಲಿಮೆಂಟ್ಸ್ ಕಲೆಕ್ಷನ್ ಸ್ಮಾರ್ಟ್ ಫೋನ್

ಲೈಫ್ ವಿಂಡ್ 5 ಎಲಿಮೆಂಟ್ಸ್ ಕಲೆಕ್ಷನ್ ಸ್ಮಾರ್ಟ್ ಫೋನ್

-

-

-

-


LYF (ಲೈಫ್) ಬಗ್ಗೆ: LYF ಸ್ಮಾರ್ಟ್ ಫೋನ್ + ರಿಲಯನ್ಸ್ ರಿಟೇಲ್ ನ ನೈಜ 4ಜಿ ಶ್ರೇಣಿಯ ಉಪಕರಣಗಳಾಗಿದ್ದು, ಭಾರತದ ಗ್ರಾಹಕರಿಗೆ ಅತ್ಯಾಧುನಿಕ 4ಜಿ ತಂತ್ರಜ್ಞಾನ ನೀಡುವಂತೆ ವಿನ್ಯಾಸಿಸಲ್ಪಟ್ಟಿವೆ. ಲೈಫ್ ನ ಸಂಪೂರ್ಣ ಶ್ರೇಣಿ ನೈಜ 4ಜಿ ಅನುಭವ ನೀಡುವಂತಹ ವೋಲ್ಟೆ(VoLTE) ಶಕ್ತಿ ಹೊಂದಿದೆ. ಇದುವರೆಗೆ ಯಾವುದೇ ನಿದರ್ಶನ ಇರದಂಥ, ಬೆಲೆಗೆ ತಕ್ಕ ನಿರೀಕ್ಷೆಗೂ ಮೀರಿದ ತಂತ್ರಜ್ಞಾನ ಕ್ರಾಂತಿಯನ್ನು ಈ ಉಪಕರಣಗಳು ಹೊಂದಿವೆ. [ನಮೋ ಟೆಲ್ -99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್]

ಎಚ್ಡಿ ಧ್ವನಿ, ವೋಲ್ಟೆ ಮತ್ತು ವೈ-ಫೈ ಆಧಾರಿತ ವೀಡಿಯೊ ಕರೆಗಳು, ಮಲ್ಟಿಪಾರ್ಟಿ ಆಡಿಯೋ ಮತ್ತು ವೀಡಿಯೊ ಕಾನ್ಫೆರೆನ್ಸಿಂಗ್, ಅತಿಶೀಘ್ರದಲ್ಲಿ ಡೌನ್‍ಲೋಡ್ ಹಾಗೂ ವಾಯ್ಸ್ ಮತ್ತು ವೀಡಿಯೊ ಕರೆಗಳ ಮಧ್ಯ ತಡೆರಹಿತ ಬದಲಾವಣೆ ಮುಂತಾದ ಉತ್ಕೃಷ್ಟ ತಂತ್ರಜ್ಞಾನದ ಸೌಲಭ್ಯಗಳು ಗ್ರಾಹಕರನ್ನು ಈ ಬ್ರಾಂಡ್‍ನ ಜೊತೆಗಿರುವಂತೆ ಮಾಡುತ್ತದೆ. LYF ಶ್ರೇಣಿಯ ಸ್ಮಾರ್ಟ್ ಫೋನ್ ಗಳು ಅರ್ಥ್, ವಾಟರ್, ವಿಂಡ್ ಹಾಗೂ ಫ್ಲೇಮ್ ಎಂಬ ನಾಲ್ಕು ಸರಣಿಯಲ್ಲಿ ಲಭ್ಯ ಇರಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+