ಗೋಲ್ಡ್‌ಮನ್ ಸ್ಯಾಚ್ಸ್ ಮ್ಯೂಚುವಲ್ ಫಂಡ್ ರಿಲಯನ್ಸ್ ತೆಕ್ಕೆಗೆ
ಮುಂಬೈ, ಅಕ್ಟೋಬರ್: 22: ಆರ್ಥಿಕ ವಹಿವಾಟಿನಲ್ಲಿ ಹೆಸರು ಮಾಡಿರುವ ಜಾಗತಿಕ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್‌ನ ಭಾರತದ ಮ್ಯೂಚುವಲ್ ಫಂಡ್ ವ್ಯವಹಾರವನ್ನು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್‌ಮೆಂಟ್ (ಆರ್‌ಸಿಎಎಂ) ಖರೀದಿ ಮಾಡಿದೆ.
ಗೋಲ್ಡ್‌ಮನ್ ಸ್ಯಾಚ್ಸ್‌ನ 12 ಯೋಜನೆಗಳನ್ನು ಇನ್ನು ಮುಂದೆ ರಿಲಯನ್ಸ್ ನಿರ್ವಹಿಸಲಿದೆ. ಒಟ್ಟು ಮೊತ್ತ 243 ಕೋಟಿ ರೂ. ಗೆ ಒಪ್ಪಂದ ಮಾಡಿಕೊಂಡು ಖರೀದಿ ಮಾಡಲಾಗಿದೆ ಎಂದು ರಿಲಯನ್ಸ್ ತಿಳಿಸಿದೆ.[ವ್ಯವಸ್ಥಿತ ಹೂಡಿಕೆಗೆ ಅತ್ಯುತ್ತಮ ತಾಣ ಯಾವುದು?]

ಎರಡೂ ಕಂಪನಿಗಳು ಪರಸ್ಪರ ಒಪ್ಪಿಗೆ ನೀಡಿದ್ದು ಈ ವ್ಯವಹಾರಕ್ಕೆ ಎರಡೂ ಕಂಪನಿಗಳ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಆರ್ಥಿಕ ವರ್ಷದಲ್ಲಿಯೇ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.[ಕಡಿಮೆ ಅವಧಿಗೆ ಹೆಚ್ಚಿನ ರಿಟರ್ನ್ಸ್ ತರುವ 6 ಯೋಜನೆಗಳು]
ರಿಲಯನ್ಸ್ ಕ್ಯಾಪಿಟಲ್, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ನ ಹಣಕಾಸು ಸೇವಾ ವಿಭಾಗವಾಗಿದೆ. ವಿಮೆ, ವೆಲ್ತ್ ಮ್ಯಾನೇಜ್‌ಮೆಂಟ್, ಷೇರು ಬ್ರೋಕರೇಜ್ ಮತ್ತಿತರ ಸೇವೆಗಳನ್ನು ನೀಡುತ್ತಿದೆ. 2.5 ಲಕ್ಷ ಕೋಟಿ ರೂ. ಮೊತ್ತದ ಮ್ಯೂಚುವಲ್ ಫಂಡ್, ಪೆನ್ಶನ್ ಸ್ಕೀಂ ಮತ್ತಿತರ ಯೋಜನೆಗಳನ್ನು ರಿಲಯನ್ಸ್ ನಿರ್ವಹಿಸುತ್ತಿದೆ.
ರಿಲಯನ್ಸ್ ಕ್ಯಾಪಿಟಲ್‌ಗೆ ನಿಪ್ಪಾನ್ ಲೈಫ್‌ನಿಂದ ಬಂಡವಾಳ
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಶೇ 35ರಷ್ಟಿದ್ದ ತನ್ನ ಷೇರು ಪಾಲನ್ನು ನಿಪ್ಪಾನ್ ಲೈಫ್ ಕಂಪೆನಿ ಶೇ 49ಕ್ಕೆ ಹೆಚ್ಚಿಸಿ ಕೊಂಡಿದೆ. ನಿಪ್ಪಾನ್, 1,196 ಕೋಟಿ ರು. ಹೂಡಿಕೆ ಮಾಡಿದೆ ಎಂದು ರಿಲಯನ್ಸ್ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications