Share Market: ₹1 ಲಕ್ಷವನ್ನು 5 ವರ್ಷದಲ್ಲಿ ₹1.09 ಕೋಟಿ ಮಾಡಿದ ರಿಲಯನ್ಸ್ ಒಡೆತನದ ಈ ಷೇರು
ಸರಿಯಾದ ಆಯ್ಕೆ ಮತ್ತು ತಾಳ್ಮೆ ಇದ್ದರೆ ಷೇರು ಮಾರುಕಟ್ಟೆ ನಿಮಗೆ ಲಕ್ಷಗಳನ್ನು ಕೋಟಿಗಳನ್ನಾಗಿ ಮಾಡುತ್ತದೆ. ಸರಿಯಾದ ಕಂಪನಿಯ ಷೇರುಗಳಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದರೆ, ಭರ್ಜರಿ ಲಾಭ ಮಾಡಬಹುದು, ಇದನ್ನೇ ದೊಡ್ಡ ದೊಡ್ಡ ಹೂಡಿಕೆದಾರರು ಅನುಸರಿಸುವುದು. ಇದೇ ರೀತಿ ರಿಲಯನ್ಸ್ ಕಂಪನಿ ಒಡೆತನದ ಈ ಮಲ್ಟಿಬ್ಯಾಗರ್ ಷೇರು 1 ಲಕ್ಷ ರೂಪಾಯಿ ಹೂಡಿಕೆಯನ್ನು 5 ವರ್ಷಗಳಲ್ಲಿ 1.09 ಕೋಟಿ ರೂಪಾಯಿ ಮಾಡಿಕೊಟ್ಟಿದೆ.
ರಿಲಯನ್ಸ್ ಗ್ರೂಪ್‌ನ ಒಡೆತನದ ಲೋಟಸ್ ಚಾಕೊಲೇಟ್ ಕಂಪನಿಯ ಷೇರುಗಳು ಹೂಡಿಕೆದಾರರನ್ನು ಐದು ವರ್ಷದಲ್ಲಿ ಕೋಟ್ಯಧೀಶರನ್ನಾಗಿ ಮಾಡಿದೆ. ಐದು ವರ್ಷದ ಹಿಂದೆ ₹16.20 ಇದ್ದ ಒಂದು ಷೇರಿನ ಬೆಲೆ ಇಂದು ₹1,766 ಕ್ಕೆ ಏರಿಕೆಯಾಗಿದೆ. ಷೇರುದಾರರಿಗೆ 10,800% ರಷ್ಟು ಆದಾಯ ತಂದುಕೊಟ್ಟಿದೆ.

ಲೋಟಸ್ ಚಾಕೊಲೇಟ್ ಷೇರಿನ ಬೆಲೆ ವರ್ಷದ ಹಿಂದಿನ ಈ ದಿನ 303.50 ರೂಪಾಯಿಯಿಂದ ಈಗ 1,766 ರೂಪಾಯಿಗೆ ಏರಿಕೆಯಾಗಿದೆ. 2024ರಲ್ಲಿ ಈ ಷೇರಿನ ಬೆಲೆ 480% ರಷ್ಟು ಹೆಚ್ಚಾಗಿದೆ.
ರಿಲಯನ್ಸ್ ಮಾಲೀಕತ್ವದ ಲೋಟಸ್ ಚಾಕೊಲೇಟ್ ಸ್ಮಾಲ್ ಕ್ಯಾಪ್ ಕಂಪನಿಯಾಗಿದೆ. 2150 ಸಾವಿರ ಕೋಟಿ ಮೌಲ್ಯವನ್ನು ಹೊಂದಿರುವ ಕಂಪನಿ ಷೇರುಗಳು 2023ರ ಡಿಸೆಂಬರ್ ನಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರು ತಿಂಗಳಿನಲ್ಲಿ ಲೋಟಸ್ ಚಾಕೊಲೇಟ್‌ನ ಷೇರಿನ ಬೆಲೆಯು ಪ್ರತಿ ಷೇರಿಗೆ ಸುಮಾರು ₹325 ರಿಂದ ₹1,766 ಕ್ಕೆ ಏರಿಕೆಯಾಗಿದೆ. ಆರು ತಿಂಗಳಿನಲ್ಲಿ ಹೂಡಿಕೆದಾರರಿಗೆ 5 ಪಟ್ಟು ಹೆಚ್ಚು ಲಾಭ ತಂದುಕೊಟ್ಟಿದೆ.
ಲೋಟಸ್ ಚಾಕೊಲೇಟ್ ಕಂಪನಿ ಬಗ್ಗೆ
ಲೋಟಸ್ ಚಾಕೊಲೇಟ್ ಕಂಪನಿಯ ಷೇರುಗಳ ಮೇಲೆ ಆರು ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದು 5.5 ಲಕ್ಷ ರೂಪಾಯಿ ಆಗಿರುತ್ತಿತ್ತು. 1 ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದಿಗೆ ಅದು 5.60 ಲಕ್ಷ ರೂಪಾಯಿಗೆ ಏರಿಕೆಯಾಗುತ್ತಿತ್ತು. ಅದೇ ಏನಾದರೂ ಐದು ವರ್ಷಗಳ ಹಿಂದೆ ನೀವು ಈ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದು 1.09 ಕೋಟಿ ರೂಪಾಯಿ ಆಗಿರುತ್ತಿತ್ತು.
ಏಪ್ರಿಲ್ ನಿಂದ ಜೂನ್ 2024 ರ ತ್ರೈಮಾಸಿಕದ ಷೇರುದಾರರ ಮಾದರಿಯ ಪ್ರಕಾರ, ರಿಲಯನ್ಸ್ ರಿಟೇಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ಲೋಟಸ್ ಚಾಕೊಲೇಟ್ ಕಂಪನಿ ಲಿಮಿಟೆಡ್‌ನ 51 ಶೇಕಡಾ ಪಾಲನ್ನು ಹೊಂದಿದೆ. ಮೇ 2023ರಲ್ಲಿ ಈ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ₹74 ಕೋಟಿ ಪಾವತಿ ಮಾಡಿದ್ದರು.
Disclaimer: ಒನ್‌ಇಂಡಿಯಾ ಷೇರು ಮಾರುಕಟ್ಟೆ ಸುದ್ದಿಗಳನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡುತ್ತದೆ. ಇದನ್ನು ಹೂಡಿಕೆ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞ ಹಣಕಾಸು ಸಲಹೆಗಾರರ ಜತೆ ಚರ್ಚಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications