ಜಿಯೋ ಜೊತೆ ಕೈಜೋಡಿಸಿದ ಪಬ್‌ಜಿ ಕಾರ್ಪ್, ಉಚಿತ ಗಿಫ್ಟ್ ಕೊಡುಗೆ
ಬೆಂಗಳೂರು, ಜುಲೈ 11: 'ಪಬ್‌ಜಿ' ಎಂದೇ ಹೆಸರಾಗಿರುವ ಜನಪ್ರಿಯ ಗೇಮ್ 'ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್‌ಗ್ರೌಂಡ್ಸ್', 'ಪಬ್‌ಜಿ ಲೈಟ್' ಆವೃತ್ತಿಗಾಗಿ ತನ್ನ ಬೀಟಾ ಸೇವೆಯ ಪ್ರಾರಂಭವನ್ನು ಇತ್ತೀಚೆಗೆ ಘೋಷಿಸಿದೆ. ಉಚಿತವಾಗಿ ಆಡಬಹುದಾದ 'ಪಬ್‌ಜಿ ಲೈಟ್' ಗೇಮ್ ಕಡಿಮೆ ಸಾಮರ್ಥ್ಯದ ಕಂಪ್ಯೂಟರುಗಳಿಗೂ ಸೂಕ್ತವಾಗಿದ್ದು, ಆಪ್ಟಿಮೈಸ್ಡ್ ಗೇಮ್‌ಪ್ಲೇ ಹಾಗೂ ಗ್ರಾಫಿಕ್ಸ್‌ನೊಂದಿಗೆ ತಲ್ಲೀನಗೊಳಿಸುವ ಹಾಗೂ ವಿಶಾಲವಾದ ಗೇಮಿಂಗ್ ಅನುಭವವನ್ನು ನೀಡುತ್ತದೆ.
ಬಳಕೆದಾರರ ಪಾಲಿಗೆ ಆಟದ ಹೊಸ ಆವೃತ್ತಿಯ ಅನುಭವವನ್ನು ಉತ್ತಮಪಡಿಸುವ ಹಾಗೂ ಅದನ್ನು ಇನ್ನೂ ಆಕರ್ಷಕವಾಗಿಸುವ ಉದ್ದೇಶದಿಂದ, ಪಬ್‌ಜಿ ಲೈಟ್ ಹಾಗೂ ಜಿಯೋ ಪರಸ್ಪರ ಕೈಜೋಡಿಸಿವೆ. ಹೊಸ ಯುಗದ ಡಿಜಿಟಲ್ ಅನುಭವಗಳನ್ನು ಬಳಕೆದಾರರಿಗೆ ತಲುಪಿಸುವ ತಮ್ಮ ಉದ್ದೇಶಕ್ಕೆ ಪೂರಕವಾದ ಎರಡು ಅಪ್ರತಿಮ ಹಾಗೂ ಪ್ರೀತಿಪಾತ್ರ ಬ್ರಾಂಡ್‌ಗಳ ಜೊತೆಗೂಡುವಿಕೆಯನ್ನು ಭಾರತದಲ್ಲಿನ ಈ ವಿಶಿಷ್ಟ ಜತೆಗಾರಿಕೆ ಪ್ರತಿನಿಧಿಸುತ್ತಿದೆ.
ಪಬ್‌ಜಿ ಲೈಟ್‌ಗಾಗಿ ನೋಂದಾಯಿಸಿಕೊಳ್ಳುವ ಜಿಯೋ ಬಳಕೆದಾರರು ತಮ್ಮ ಇನ್‌ಗೇಮ್ ಮರ್ಚಂಡೈಸ್‌ಗಾಗಿ ಉಚಿತ ಸ್ಕಿನ್‌ಗಳ ರೂಪದಲ್ಲಿ ವಿಶಿಷ್ಟ ಕೊಡುಗೆಗಳನ್ನು ಆನಂದಿಸಬಹುದಾಗಿದೆ.

ಉಚಿತ ಜಿಯೋ ಕೊಡುಗೆ ಪಡೆದುಕೊಳ್ಳುವುದು ಹೇಗೆ?: ಪಬ್‌ಜಿ ಲೈಟ್‌ನಲ್ಲಿ ಈ ವಿಶಿಷ್ಟ ಅನುಭವ ಪಡೆದುಕೊಳ್ಳಲು ಜಿಯೋ ಗ್ರಾಹಕರು ಜಿಯೋ ತಾಣದ ಗೇಮ್ಸ್ ಅರೀನಾಕ್ಕೆ ಭೇಟಿ ನೀಡಿ ಎರಡು ಹಂತದ ಸರಳ ನೋಂದಣಿ ನಮೂನೆಯನ್ನು ತುಂಬಿಸಬೇಕಾಗುತ್ತದೆ.
ನಂತರ ತಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ವೆರಿಫಿಕೇಶನ್ ಲಿಂಕ್ ಪಡೆಯಲಿದ್ದಾರೆ. ವೆರಿಫಿಕೇಶನ್ ಪೂರ್ಣಗೊಂಡ ನಂತರ ಇನ್ನೊಂದು ಇಮೇಲ್ ಸಂದೇಶದಲ್ಲಿ ವಿಶಿಷ್ಟ ರಿಡೆಂಪ್ಷನ್ ಕೋಡ್ ಅನ್ನು ಬಳಕೆದಾರರಿಗೆ ಕಳುಹಿಸಲಾಗುವುದು ಮತ್ತು ಅವರು ಅದನ್ನು ಆಟದೊಳಗೆ ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.
ರಿಡೆಂಪ್ಷನ್ ಕೋಡ್ ಬಳಸುವುದು ಹೇಗೆ?: ಪಬ್‌ಜಿ ಲೈಟ್ ಅನ್ನು ಡೌನ್‌ಲೋಡ್ ಮಾಡಿ ನೋಂದಾಯಿಸಿಕೊಂಡ ನಂತರ, ಬಳಕೆದಾರರು ಮೆನು ಸ್ಟೋರ್‌ಗೆ ಹೋಗಬಹುದು. ಮೆನು ಆಯ್ಕೆಗಳಲ್ಲಿ ಅವರು 'Add Bonus / Gift Code' ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿರುವ ಖಾಲಿ ಜಾಗದಲ್ಲಿ ರಿಡೆಂಪ್ಷನ್ ಕೋಡ್ ಅನ್ನು ಹಾಕಿ 'redeem' ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ತಮ್ಮ ರಿಡೆಂಪ್ಷನ್ ಕೋಡ್ ಬಳಸಬಹುದಾಗಿದೆ.












Click it and Unblock the Notifications