120 ಮಿಲಿಯನ್ ಜಿಯೋ ಗ್ರಾಹಕರ ಮಾಹಿತಿ ಸೋರಿಕೆ?

ಬೆಂಗಳೂರು, ಜುಲೈ 10: ರಿಲಯನ್ಸ್ ಜಿಯೋ ಗ್ರಾಹಕರು ಆತಂಕದಲ್ಲಿದ್ದಾರೆ. ಸುಮಾರು 120 ಮಿಲಿಯನ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ ಎಂದು ವೆಬ್ ಸೈಟೊಂದು ವರದಿ ಮಾಡಿದೆ.

ಜಿಯೋ ಗ್ರಾಹಕರ ಫಸ್ಟ್ ನೇಮ್, ಕೊನೆಯ ನೇಮ್, ಆಧಾರ್ ಐ.ಡಿ. ಮಾಹಿತಿ, ಮೊಬೈಲ್ ಸಂಖ್ಯೆ, ಇ -ಮೇಲ್. ಸೇರಿದಂತೆ ಹಲವು ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ. ಆದರೆ, ಈ ಸುದ್ದಿಯನ್ನು ರಿಲಯನ್ಸ್ ಸಂಸ್ಥೆ ಅಲ್ಲಗೆಳೆದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ.

Reliance #Jio user's Data are leaked on a Website

ರಿಲಯನ್ಸ್ ಜಿಯೋ ಗ್ರಾಹಕರು ಜಿಯೋ ಸಿಮ್ ಆಕ್ಟಿವೇಟ್ ಮಾಡಲು ಆಧಾರ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಹೀಗಾಗಿ ಇದು ಸುರಕ್ಷಿತ ವಿಧಾನ ಎಂದೇ ಭಾವಿಸಲಾಗಿತ್ತು.

ಆದರೆ, ಈಗ ಆಧಾರ್ ಮಾಹಿತಿ ಜತೆಗೆ ರಿಲಯನ್ಸ್ ಗ್ರಾಹಕರ ಸ್ವವಿವರಗಳು ಮ್ಯಾಜಿಕ್ ಎಪಿಕೆ.ಕಾಂ ಎಂಬ ವೆಬ್ ಸೈಟ್ ನಲ್ಲಿ ಬಹಿರಂಗವಾಗಿದೆ.

ಈ ಬಗ್ಗೆ ಎಚ್ಚೆತ್ತುಕೊಂಡು ಗ್ರಾಹಕರು ಸರ್ಚ್ ಮಾಡುವಷ್ಟರಲ್ಲಿ ವೆಬ್ ಸೈಟ್ ಸಸ್ಪೆಂಡ್ ಆಗಿದೆ. ಆದರೆ, ಅನೇಕರು ಸ್ಕ್ರೀನ್ ಶಾಟ್ ತೆಗೆದು, ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ತನಿಖೆ ನಡೆಸುವುದಾಗಿ ರಿಲಯನ್ಸ್ ಜಿಯೋ ವಕ್ತಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+