ಜಾಗತಿಕ ಟೆಲಿಕಾಂ ಸಂಸ್ಥೆಗಳಿಗೆ ರಿಲಯನ್ಸ್ ಜಿಯೋ ಮಾದರಿ ಎಂದ ಅಮೆರಿಕಾ

ನವದೆಹಲಿ, ಜುಲೈ 22: ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ವಿಶ್ವದ ದೊಡ್ಡಣ್ಣ ಅಮೆರಿಕಾ ಅಭಿಪ್ರಾಯಪಟ್ಟಿದೆ.

ಅಮೆರಿಕಾದ ಉನ್ನತ ಸೈಬರ್ ರಾಜತಾಂತ್ರಿಕರು ಜಾಗತಿಕ ಟೆಲಿಕಾಂ ಆಪರೇಟರ್‌ಗಳನ್ನು ಸ್ವಂತವಾಗಿ ಅಭಿವೃದ್ಧಿಪಡಿಸಿದ 5 ಜಿ ಪರಿಹಾರಗಳನ್ನು ಅನ್ವೇಷಿಸಲು ಅಥವಾ ತಮ್ಮ 5 ಜಿ ನಿಯೋಜನೆಯಲ್ಲಿ "ವಿಶ್ವಾಸಾರ್ಹ ಮಾರಾಟಗಾರರನ್ನು" ಮಾತ್ರ ಬಳಸುವ ರಿಲಯನ್ಸ್ ಜಿಯೋ ತಂತ್ರವನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.

ಇಡೀ ಜಗತ್ತು ಈಗ 5 ಜಿ ನೆಟ್‌ವರ್ಕ್‌ ಬಗ್ಗೆ ಮಾತನಾಡುತ್ತಿದ್ದು, ಚೀನಾದ ಮೇಲಿನ ಟೆಲಿಕಾಂ ಉಪಕರಣಗಳ ಮೇಲಿನ ಅವಲಂಬನೆಯನ್ನು ಮೆಟ್ಟಿ 5 ಜಿ ನೆಟ್‌ವರ್ಕ್‌ ಗುರಿ ಸಾಧಿಸುವ ಬಗ್ಗೆಯೂ ಗಂಭೀರ ಚಿಂತನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳ ನಡುವೆ ಜಿಯೋ ಸಂಸ್ಥೆಯ ಇತ್ತೀಚಿನ ಘೋಷಣೆ, ನಡೆಗಳನ್ನು ಅಮೆರಿಕಾವೇ ಜಗತ್ತಿಗೆ ಮಾದರಿ ಎಂದಿರುವುದು ಮಹತ್ವ ಪಡೆದುಕೊಂಡಿದೆ.

Reliance Jio: Top US Cyber Diplomat Urges Global Telcos To Follow Reliance Jio 5G Model

ಜಾಗತಿಕ ಟೆಲಿಕಾಂ ಸಂಸ್ಥೆಗಳು 5 ಜಿ ಗಾಗಿ ಹುವಾಯಿ ಸೇರಿದಂತೆ ಚೀನಾದ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳ ಸಂಸ್ಥೆಗಳ ಮೇಲೆ ಅವಲಂಬಿತವಾಗುವ ಬದಲು ಜಿಯೋ ಮಾದರಿಯಲ್ಲಿ ದೇಶೀಯವಾಗಿ 5 ಜಿ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಬೇಕು, ಜಿಯೋ ಮಾದರಿಯನ್ನು ಅನುಸರಿಸಬೇಕೆಂದು ಎಂದು ಸೈಬರ್ ರಾಯಭಾರಿ ರಾಬರ್ಟ್ ಎಲ್. ಸ್ಟ್ರೇಯರ್ ಅಭಿಪ್ರಾಯಪಟ್ಟಿದ್ದಾರೆ.

ಜುಲೈ.15 ರಂದು ರಿಲಯನ್ಸ್ ನ 43 ನೇ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಮೇಡ್-ಇನ್-ಇಂಡಿಯಾ 5 ಜಿ ಸೊಲ್ಯೂಷನ್ಸ್ ನ್ನು ಘೋಷಿಸಿದ್ದರು.

ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ ಅಧ್ಯಕ್ಷ ಅಜಿತ್ ಪೈ ಇತ್ತೀಚೆಗೆ ರಿಲಯನ್ಸ್ ಜಿಯೋ ತನ್ನ 5 ಜಿ ನೆಟ್‌ವರ್ಕ್‌ನಲ್ಲಿ ಹುವಾಯಿ ಉಪಕರಣಗಳನ್ನು ಬಳಸದಿರುವ ನಿರ್ಧಾರವನ್ನು ಶ್ಲಾಘಿಸಿದರು ಮತ್ತು ಯುಎಸ್ ಮತ್ತು ಭಾರತದ ಖಾಸಗಿ ಮತ್ತು ಸಾರ್ವಜನಿಕ ವಲಯವು ಭದ್ರತಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು 5 ಜಿ ನೆಟ್‌ವರ್ಕ್‌ಗಳನ್ನು ಸುರಕ್ಷಿತವಾಗಿಸಲು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+